ಮಂಗಳೂರು, ಅ. 11: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕಿ ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಬೀಜತ್ತಳಿ ನಿವಾಸಿ ಸೈಯದ್ ಇಬ್ರಾಹಿಂ ತಂಙಳ್ (55) ಎಂದು ಗುರುತಿಸಲಾಗಿದೆ.
ಈ ಧರ್ಮಗುರು PFI ಪರವಾಗಿ, ಸಂಘಟನೆಯ ಪುನರ್ ರಚನೆಯ ಬಗ್ಗೆ ಪ್ರಚಾರ ಮಾಡುವುದಷ್ಟೇ ಅಲ್ಲದೇ ವಾಟ್ಸಾಪ್ನಲ್ಲಿ ಸಲಮಾನ್ ಸಲಮಾ (SALAMAN SALAMA) ಎಂಬ ಗ್ರೂಪ್ ರಚನೆ ಮಾಡಿದ್ದ. ಈ ಗ್ರೂಪ್ ಮೂಲಕ ಭೂಗತರಾಗಿರುವ PFI ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್, ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ್ದ. ನಗರದ ಉರ್ವ ಸ್ಟೋರ್ ಬಳಿಯಿಂದ ಈತನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಈತನಿಂದ ಮೊಬೈಲ್ ಫೋನ್ನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು NIA ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಸೈಯ್ಯದ್ ಇಬ್ರಾಹಿಂನನ್ನು ಹಾಜರು ಪಡಿಸಿದ್ದಾರೆ. ದಿನಾಂಕ 24-10-2025 ವರೆಗೆ ಆತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post