ಮಂಗಳೂರು : ಕರ್ತವ್ಯದಲ್ಲಿದ್ದ ಎಎಸ್ಐ ಒಬ್ಬರಿಗೆ ದೂರವಾಣಿ ಮೂಲಕ ಕರೆ ಮಾಡಿ ಬೆದರಿಕೆ ಹಾಕಿರುವ ಪ್ರಕರಣ ಉರ್ವಾ ಪೊಲೀಸ್ ಠಾಣಾ ಮೊ. No75/23 ಕಲಂ 353,506,507 ಐಪಿಸಿ ಪ್ರಕರಣದಲ್ಲಿ ಆರೋಪಿ ಪುನೀತ್ ಶೆಟ್ಟಿ (36) ವರ್ಷ ಶಕ್ತಿನಗರ, ಮಂಗಳೂರು ಆರೋಪಿಯನ್ನು ಬಂಧಿಸಿದ್ದಾರೆ
ಕಾರೊಂದು ಬೈಕ್‌ಗೆ ತಾಗಿದ ವಿಚಾರದಲ್ಲಿ ಕಾರು ಚಾಲಕ ಮತ್ತು ಬೈಕ್ ಸವಾರನ ಮಧ್ಯೆ ವಾಗ್ವಾದವಾಗಿದ್ದು, ಸಿಟ್ಟಿನ ಭರದಲ್ಲಿ ಬೈಕ್ ಸವಾರ ಕಾರಿಗೆ ಢಿಕ್ಕಿಪಡಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿಚಾರದಲ್ಲಿ ಉರ್ವ ಠಾಣೆಯ ಎಎಸ್ಐ ವೇಣುಗೋಪಾಲ್ ಅವರಿಗೆ ಫೋನ್ ಮಾಡಿದ್ದ ಪುನೀತ್ ಶೆಟ್ಟಿ, ಆರೋಪಿಯನ್ನು ಕೂಡಲೇ ಬಂಧಿಸದಿದ್ದರೆ, ನಿಮ್ಮ ಇನ್ಸ್ ಪೆಕ್ಟರನ್ನೇ ಸಸ್ಪೆಂಡ್ ಮಾಡಿಸ್ತೀನಿ, ನಿಮ್ಮನ್ನೂ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನಿಮ್ಮ ಕಮಿಷನರ್ ಬಗ್ಗೆಯೂ ಗೊತ್ತಿದೆ ಎಂದು ಹೇಳಿ ಏಕವಚನದಲ್ಲಿ ಬೈದಿದ್ದಾನೆ. ಈ ಬಗ್ಗೆ ಎಎಸ್ಐ ವೇಣುಗೋಪಾಲ್ ಉರ್ವಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ಪುನೀತ್ ಶೆಟ್ಟಿಯನ್ನು ಇನ್ಸ್ ಪೆಕ್ಟರ್ ಭಾರತಿ ಬಂಧಿಸಿದ್ದಾರೆ.
ಈತನಿಂದ ಪರವಾನಿಗೆ ಹೊಂದಿದ ಪಿಸ್ತೂಲ್ 6 ಸಜೀವ ಗುಂಡುಗಳು, ಕೃತ್ಯಕ್ಕೆ ಬಳಸಿದ ಸೆಲ್ ಫೋನ್ ಹಾಗೂ KA33 C 3333 ಕಿಯಾ ವಾಹನ ಸ್ವಾದೀನ ಪಡಿಸಿಕೊಳ್ಳಲಾಗಿದೆ. ಆರೋಪಿಯೂ ಈ ಹಿಂದೆ ಆನೇಕ ಪ್ರಕರಣಗಲ್ಲಿ ಬಾಗಿಯಾಗಿದ್ದು, ಕಂಕನಾಡಿ ಟೌನ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುತ್ತಾನೆ, ಮುನ್ನೆಚ್ಚರಿಕೆ ಕ್ರಮಕೂಡ ಜರುಗಿಸಲಾಗಿರುತ್ತದೆ. ಈತನ ಮೇಲೆ ಉರ್ವಾ ರಾಣೆಯಲ್ಲಿ ಗಾಂಜಾ ಮಾರಾಟದ ಪ್ರಕರಣ, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಶಸ್ತ್ರ ಬಳಸಿ ದೊಂಬಿ, ಹಲ್ಲೆ ಪ್ರಕರಣಗಳು, ದಕ್ಷಿಣ ಠಾಣೆಯಲ್ಲಿ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುತ್ತಾನೆ.
Discussion about this post