ಮಂಗಳೂರು, ಸೆ 12: ವಕ್ಫ್ ತಿದ್ದುಪಡಿ ಕಾಯ್ದೆ-2024 ಜಾರಿಗೆ ಪ್ರಯತ್ನ ವಿಚಾರವಾಗಿ ಕಾಯ್ದೆ ಜಾರಿ ವಿರೋಧಿಸಿ ನಗರದ ಕ್ಲಾಕ್ ಟವರ್ ಬಳಿ ಎಸ್ಡಿಪಿಐ ಪ್ರತಿಭಟನೆ ಮಾಡಿದೆ. ಈ ವೇಳೆ ಪ್ರತಿಭಟನೆಯಲ್ಲಿ ಎಸ್ಡಿಪಿಐನ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸಭೆಯಲ್ಲ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಮಾಧ್ಯಮದವರೊಂದಿಗೆ ಮಾತನಾಡಿದ್ದು, ವಕ್ಫ್ ಆಸ್ತಿ ಹಿಂದೆಯೂ ಮುಸಲ್ಮಾನರದ್ದಾಗಿತ್ತು. ಇಂದು ಹಾಗೂ ಮುಂದೆಯೂ ಮುಸಲ್ಮಾನರದ್ದಾಗಿರುತ್ತದೆ. ಇದನ್ನು ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿಯ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧ. ಅಗತ್ಯ ಬಿದ್ದಲ್ಲಿ ಪ್ರಾಣ ಅರ್ಪಿಸಿ ವಕ್ಫ್ ಆಸ್ತಿ ಉಳಿಸುತ್ತೇವೆ. ವಕ್ಫ್ ಆಸ್ತಿ ಮೇಲೆ ಬಿಜೆಪಿಗಾಗಲಿ ಯಾವುದೇ ಸರಕಾರಕ್ಕಾಗಲಿ ಅಧಿಕಾರವಿಲ್ಲ. ಬಾಬರಿ ಮಸೀದಿಯನ್ನು ಕಸಿದುಕೊಂಡಂತೆ ವಕ್ಫ್ ಆಸ್ತಿ ಕಸಿದುಕೊಳ್ಳಲು ಮುಂದಾಗಬೇಡಿ. ಜೀವ ಭಯ ಬಿಟ್ಟು ಸಾವಿಗೂ ಹೆದರದೆ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ. ಮುಸಲ್ಮಾನರ ಮೇಲೆ ದಾಳಿ ನಡೆದಾಗ ಪ್ರತಿಭಟಿಸಿದವರನ್ನು ಜೈಲಿಗೆ ಹಾಕಿದರು. ಬೀದಿಗಿಳಿದು ಹೋರಾಡಿದ ಕಾರಣ ಎನ್‌ಆರ್‌ಸಿಯನ್ನು ಶಕ್ತವಾಗಿ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post