• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಾಜಿ ಮಿಸ್ ಸ್ವಿಜರ್ಲೆಂಡ್ ಫೈನಲಿಸ್ಟ್ ಕ್ರಿಸ್ಟಿನಾ ಬರ್ಬರ ಕೊಲೆ ; ಕೊಲೆ ಬಳಿಕ ಬ್ಲೆಂಡರ್ ಬಳಸಿ ಮೃತದೇಹ ಪೀಸ್ ಪೀಸ್

Coastal Times by Coastal Times
September 14, 2024
in ಕೋಸ್ಟಾಲ್ ಟೈಮ್ಸ್ ವಿಶೇಷ
ಮಾಜಿ ಮಿಸ್ ಸ್ವಿಜರ್ಲೆಂಡ್ ಫೈನಲಿಸ್ಟ್ ಕ್ರಿಸ್ಟಿನಾ ಬರ್ಬರ ಕೊಲೆ ; ಕೊಲೆ ಬಳಿಕ ಬ್ಲೆಂಡರ್ ಬಳಸಿ ಮೃತದೇಹ ಪೀಸ್ ಪೀಸ್
58
VIEWS
WhatsappTelegramShare on FacebookShare on Twitter

ಸ್ವಿಟ್ಜರ್ಲೆಂಡ್‌ನ ಮಾಡೆಲ್ ಹಾಗೂ ಮಿಸ್ ಫೈನಲಿಸ್ಟ್‌ ಆಗಿದ್ದ ಸುಂದರಿಯೋರ್ವರನ್ನು ಅವರ ಪತಿಯೇ ಕತ್ತು ಹಿಸುಕಿ ಕೊಂದಿದ್ದಾರೆ. ಸುಂದರಿ ಪತ್ನಿಯ ಹತ್ಯೆಯ ಬಳಿಕ ಆರೋಪಿ ಪತಿ, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಹುಡಿ ಹುಡಿ ಮಾಡಿದ್ದಾನೆ. ಕ್ರಿಶ್ಟಿನಾ ಜೊಕ್ಸಿಮೊವಿಕ್‌ ಕೊಲೆಯಾದ ಮಹಿಳೆ. 38 ವರ್ಷದ ಈ ಮಾಡೆಲ್‌ ಕ್ರಿಶ್ಟಿನಾ ಜೊಕ್ಸಿಮೊವಿಕ್ ಅವರ ಶವವು ಸ್ವಿಟ್ಚರ್ಲೆಂಡ್‌ನ ಬಿನ್ನಿನ್ಗೆನ್‌ನಲ್ಲಿರುವ ಅವರ ಮನೆಯ ಲ್ಯಾಂಡ್ರಿ ರೂಮ್‌ನಲ್ಲಿ ಫೆಬ್ರವರಿ 13 ರಂದು ಪತ್ತೆಯಾಗಿತ್ತು.

ಪತ್ನಿಯನ್ನು ಕೊಲೆ ಮಾಡಿದ ಪತಿ ಥಾಮಸ್‌ ಬಳಿಕ ಶವವನ್ನು ಗರಗಸ ಹಾಗೂ ಚಾಕುವಿನಿಂದ ಕತ್ತರಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ್ದಾನೆ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ ಹುಡಿ ಮಾಡಿ ಅದಕ್ಕೆ ರಾಸಾಯನಿಕ ಸುರಿದು ಶವ ಪೂರ್ತಿಯಾಗಿ ಕರಗಿ ಹೋಗುವಂತೆ ಮಾಡಿದ್ದಾನೆ. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಕ್ರಿಶ್ಟಿನಾ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ಖಚಿತವಾಗಿತ್ತು. ಆಕೆಯ 41 ವರ್ಷದ ಪತಿ ಥಾಮಸ್‌ನನ್ನು ನಂತರ ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದ. ಹೀಗಾಗಿ ಪೊಲೀಸರು ನ್ಯಾಯಾಲಯಕ್ಕೆ ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.  ಈತ ಫೆಡರಲ್ ನ್ಯಾಯಾಲಯದ ಮುಂದೆ ತನ್ನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದ. ಆದರೆ ಲೌಸನ್ನೆಯಲ್ಲಿರುವ ನ್ಯಾಯಾಲಯವೂ ಆತನ ಮನವಿಯನ್ನು ತಿರಸ್ಕರಿಸಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಕ್ರಿಶ್ಟಿನಾಳನ್ನು ಉಸಿರುಕಟ್ಟಿಸಿ ಸಾಯಿಸಿರುವುದು ತಿಳಿದು ಬಂದಿದೆ. ಹತ್ಯೆಯ ನಂತರ ಆಕೆಯ ದೇಹವನ್ನು  ಗರಗಸ ಚಾಕು, ಹಾಗೂ ಉದ್ಯಾನವನದಲ್ಲಿ ಬಳಸುವ ಕತ್ತರಿಯನ್ನು ಬಳಸಿ ಕಟ್ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅಲ್ಲದೇ ಆಕೆಯ ದೇಹದ ಅಳಿದುಳಿದ ಕೆಲ ಭಾಗಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ತಿರುಗಿಸಿ ಹುಡು ಮಾಡಿದ್ದಾನೆ. ಬಳಿಕ ರಾಸಾಯನಿಕ ಬಳಸಿ ದೇಹ ಕರಗುವಂತೆ ಮಾಡಿದ್ದಾನೆ.

ಆದರೆ ತಾನು ತನ್ನ ಸ್ವರಕ್ಷಣೆಗಾಗಿ ಆಕೆಯ ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಆಕೆ ನನ್ನ ಮೇಲೆ ಚಾಕುವಿನಿಂದ ದಾಳಿಗೆ ಮುಂದಾದಳು ಈ ವೇಳೆ ನನ್ನನ್ನು ನಾನು ರಕ್ಷಿಸಿಕೊಳ್ಳುವ ವೇಳೆ ಆಕೆಯ ಹತ್ಯೆಯಾಗಿದೆ. ಆಕೆಯ ಸಾವಿನ ನಂತರ ಭಯಗೊಂಡ ನಾನು ಆಕೆಯ ದೇಹವನ್ನು ಛಿದ್ರಗೊಳಿಸಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ ವಿಧಿವಿಜ್ಞಾನ ವರದಿಯು ಥಾಮಸ್‌ನ ಸ್ವ ರಕ್ಷಣೆಯ ನೆಪಕ್ಕೆ ವ್ಯತಿರಿಕ್ತವಾಗಿದೆ. ಆತನ ದ್ವೇಷಪೂರಿತವಾದ ಮನಸ್ಥಿತಿ ಹಾಗೂ ಮಾನಸಿಕ ಅನಾರೋಗ್ಯದಿಂದಲೇ ಆತ ಈ ಕೃತ್ಯವೆಸಗಿದ್ದಾನೆ ಎಂದು ವರದಿ ವಿಶ್ಲೇಷಿಸಿದೆ.
ಗಂಡನಿಂದಲೇ ಹತ್ಯೆಯಾದ ಕ್ರಿಸ್ಟಿನಾ ಜೊಕ್ಸಿಮೊವಿಕ್ ಸೆರ್ಬಿಯಾ ಮೂಲವನ್ನು ಹೊಂದಿರುವ ಸ್ವಿಟ್ಜರ್ಲೆಂಡ್‌ ಪ್ರಜೆಯಾಗಿದ್ದು, ಮಾಡೆಲಿಂಗ್‌ನಲ್ಲಿ ತಮ್ಮ ಭವಿಷ್ಯ ಕಂಡುಕೊಂಡಿದ್ದರು. 2003ರಲ್ಲಿ ಅವರು ಮಿಸ್ ವಾಯುವ್ಯ ಸ್ವಿಟ್ಜರ್ಲೆಂಡ್‌ನ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದು ಮಿಸ್ ಸ್ವಿಟ್ಜರ್ಲೆಂಡ್‌ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಇದಾದ ನಂತತರ ಅವರು ಉದಯೋನ್ಮುಖ ಮಾಡೆಲ್‌ಗಳಿಗೆ ತರಬೇತಿ ನೀಡುವ ತರಬೇತುದಾರೆಯಾಗಿ ಫೇಮಸ್ ಆಗಿದ್ದರು. ಐಟಿ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದ ಈಕೆ ಯಶಸ್ವಿಯಾಗಿ ಕೋಚಿಂಗ್ ಸೆಂಟರೊಂದನ್ನು ಮುನ್ನಡೆಸುತ್ತಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಬಾಬರಿ ಮಸೀದಿ ಕಸಿದುಕೊಂಡಂತೆ ವಕ್ಫ್ ಆಸ್ತಿ ಕಸಿದುಕೊಳ್ಳಲು ಮುಂದಾಗಬೇಡಿ: ರಿಯಾಝ್ ಕಡಂಬು

Next Post

ಮಹಿಳೆಯ ಶವ ಕತ್ತರಿಸಿ ಮಂಗಳೂರಿನ ವಿವಿಧೆಡೆ ಎಸೆದು ಸಂಚಲನ ಸೃಷ್ಟಿಸಿದ್ದ ಪ್ರಕರಣ : ದಂಪತಿ ಸಹಿತ ಮೂವರ ಮೇಲಿನ ಕೊಲೆ ಆರೋಪ ಸಾಬೀತು

Related Posts

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ
ಕೋಸ್ಟಾಲ್ ಟೈಮ್ಸ್ ವಿಶೇಷ

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

August 29, 2026
100
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!
ಕೋಸ್ಟಾಲ್ ಟೈಮ್ಸ್ ವಿಶೇಷ

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
23
Next Post
ಮಹಿಳೆಯ ಶವ ಕತ್ತರಿಸಿ ಮಂಗಳೂರಿನ ವಿವಿಧೆಡೆ ಎಸೆದು ಸಂಚಲನ ಸೃಷ್ಟಿಸಿದ್ದ ಪ್ರಕರಣ : ದಂಪತಿ ಸಹಿತ ಮೂವರ ಮೇಲಿನ ಕೊಲೆ ಆರೋಪ ಸಾಬೀತು

ಮಹಿಳೆಯ ಶವ ಕತ್ತರಿಸಿ ಮಂಗಳೂರಿನ ವಿವಿಧೆಡೆ ಎಸೆದು ಸಂಚಲನ ಸೃಷ್ಟಿಸಿದ್ದ ಪ್ರಕರಣ : ದಂಪತಿ ಸಹಿತ ಮೂವರ ಮೇಲಿನ ಕೊಲೆ ಆರೋಪ ಸಾಬೀತು

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
58
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d