• About us
  • Contact us
  • Disclaimer
Monday, July 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಹಿಳೆಯ ಶವ ಕತ್ತರಿಸಿ ಮಂಗಳೂರಿನ ವಿವಿಧೆಡೆ ಎಸೆದು ಸಂಚಲನ ಸೃಷ್ಟಿಸಿದ್ದ ಪ್ರಕರಣ : ದಂಪತಿ ಸಹಿತ ಮೂವರ ಮೇಲಿನ ಕೊಲೆ ಆರೋಪ ಸಾಬೀತು

Coastal Times by Coastal Times
September 14, 2024
in ಕ್ರೈಮ್ ನ್ಯೂಸ್
ಮಹಿಳೆಯ ಶವ ಕತ್ತರಿಸಿ ಮಂಗಳೂರಿನ ವಿವಿಧೆಡೆ ಎಸೆದು ಸಂಚಲನ ಸೃಷ್ಟಿಸಿದ್ದ ಪ್ರಕರಣ : ದಂಪತಿ ಸಹಿತ ಮೂವರ ಮೇಲಿನ ಕೊಲೆ ಆರೋಪ ಸಾಬೀತು
124
VIEWS
WhatsappTelegramShare on FacebookShare on Twitter

ಮಂಗಳೂರು, ಸೆ.14: ಮಹಿಳೆಯೊಬ್ಬರನ್ನು ತನ್ನ ಮನೆಯಲ್ಲೇ ಹೊಡೆದು ಕೊಂದಿದ್ದಲ್ಲದೆ, ತುಂಡು ತುಂಡು ಮಾಡಿ ಕತ್ತರಿಸಿ ಮಂಗಳೂರು ನಗರದ ಬೀದಿ ಬೀದಿಯಲ್ಲಿ ಎಸೆದು ಭಾರೀ ಸಂಚಲನ ಮೂಡಿಸಿದ್ದ ಪೈಶಾಚಿಕ ಕೃತ್ಯದಲ್ಲಿ ಮೂವರು ಆರೋಪಿಗಳನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದ್ದು, ಇದೇ ಸೆ.17ರಂದು ಶಿಕ್ಷೆ ಪ್ರಮಾಣ ಘೋಷಣೆಯಾಗಲಿದೆ.

ಅತ್ತಾವರ ನಿವಾಸಿ, ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿ ಎಂಬವರನ್ನು ಭೀಭತ್ಸ ರೀತಿಯಲ್ಲಿ ಕೊಲೆಗೈದಿದ್ದು ಮಂಗಳೂರು ನಗರದಲ್ಲಿ ಸಂಚಲನ ಸೃಷ್ಟಿಸಿತ್ತು. ನಗರದ ಕದ್ರಿ ಪಾರ್ಕ್, ನಂದಿಗುಡ್ಡೆ ಸ್ಮಶಾನದ ಬಳಿ ದೇಹದ ತುಂಡುಗಳು ಪತ್ತೆಯಾಗಿದ್ದವು. ಪ್ರಕರಣದ ಬೆನ್ನತ್ತಿದ ಕದ್ರಿ ಪೊಲೀಸರು ವೆಲೆನ್ಸಿಯಾ ಸೂಟರ್ ಪೇಟೆ ನಿವಾಸಿ ಜೋನಸ್ ಸ್ಯಾಮ್ಸನ್(45), ಆತನ ಪತ್ನಿ ಪತ್ನಿ ವಿಕ್ಟೋರಿಯಾ ಮಥಾಯಿಸ್ (47) ಮತ್ತು ಇವರಿಗೆ ಸಹಕರಿಸಿದ್ದ ಮರಕಡ ತಾರಿಪಾಡಿ ಗುಡ್ಡೆಯ ನಿವಾಸಿ ರಾಜು (34) ಎಂಬವರನ್ನು ಬಂಧಿಸಿದ್ದರು. ಶ್ರೀಮತಿ ಶೆಟ್ಟಿ ಅತ್ತಾವರದಲ್ಲಿ ಪೊಳಲಿ ಇಲೆಕ್ಟ್ರಾನಿಕ್ಸ್ ಎಂಬ ಅಂಗಡಿ ನಡೆಸುತ್ತಿದ್ದುದಲ್ಲದೆ, ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದರು. ಜೋನಸ್ ಸ್ಯಾಮ್ಸನ್ ಕೂಡ ಚಿಟ್ ಫಂಡ್ ಸದಸ್ಯನಾಗಿದ್ದುದಲ್ಲದೆ, ಎರಡು ತಿಂಗಳ ಚಿಟ್ ಕಂತು ಕಟ್ಟಿರಲಿಲ್ಲ.

ಚಿಟ್ ಫಂಡ್ ಕಟ್ಟದ ಕೋಪದಲ್ಲಿ 2019ರ ಮೇ 11ರಂದು ಶ್ರೀಮತಿ ಶೆಟ್ಟಿ ನೇರವಾಗಿ ಸೂಟರ್ ಪೇಟೆಯ ಸ್ಯಾಮ್ಸನ್ ಮನೆಗೆ ಬಂದು ತರಾಟೆಗೆತ್ತಿಕೊಂಡಿದ್ದರು. ಈ ವೇಳೆ, ಸ್ಯಾಮ್ಸನ್ ಜಗಳ ಕಾಯ್ದಿದ್ದಲ್ಲದೆ, ಮರದ ಸಲಾಕೆಯಲ್ಲಿ ಮಹಿಳೆಯ ತಲೆಗೆ ಬಡಿದು ಸಾಯಿಸಿದ್ದ. ಅಂಗಳದಲ್ಲಿ ನೆಲಕ್ಕುರುಳಿದ್ದ ಮಹಿಳೆಯ ದೇಹವನ್ನು ಮನೆಯೊಳಗಿನ ಬಚ್ಚಲು ಮನೆಗೆ ಒಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ತೆಗೆದು ಶವವನ್ನು ಕತ್ತರಿಸಿ ಕೈ, ಕಾಲು ರುಂಡ ಬೇರ್ಪಡಿಸಿ 29 ತುಂಡುಗಳನ್ನಾಗಿಸಿ ಗೋಣಿಚೀಲದಲ್ಲಿ ತುಂಬಿದ್ದರು. ಇದನ್ನು ಆರೋಪಿ ಸ್ಯಾಮ್ಸನ್ ಒಂದೆರಡು ತುಂಡುಗಳಂತೆ ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಸದ ರಾಶಿಗೆ ಎಸೆದು ಬಂದಿದ್ದ. ಎರಡು ದಿನ ಕಳೆಯುವಾಗ ಮಾಂಸದ ತುಂಡುಗಳನ್ನು ಬೀದಿನಾಯಿಗಳು ಎಳೆದಾಡಿದ್ದವು.

ಕದ್ರಿ ಪಾರ್ಕ್ ಬಳಿ ಪ್ಲಾಸ್ಟಿಕ್ ಗೋಣಿಚೀಲದಲ್ಲಿ ಮಹಿಳೆಯ ರುಂಡದ ಭಾಗ ಪತ್ತೆಯಾಗಿತ್ತು. ಇದನ್ನು ಬೆನ್ನತ್ತಿದ ಕದ್ರಿ ಪೊಲೀಸರಿಗೆ ಹಲವು ಕಡೆಗಳಲ್ಲಿ ಮಹಿಳೆಯ ದೇಹದ ಭಾಗಗಳು ಸಿಕ್ಕಿದ್ದವು. ಆಕೆಯ ಮೊಬೈಲ್ ಲೊಕೇಶನ್, ಕೊನೆಯ ಕರೆ ಆಧರಿಸಿ ತನಿಖೆ ನಡೆಸಿದ ಪೊಲೀಸರು ಸ್ಯಾಮ್ಸನ್ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಕದ್ರಿ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಎಂ. ಮತ್ತು ಬಂದರು ಇನ್ಸ್ ಪೆಕ್ಟರ್ ಶಾಂತರಾಮ್ ತನಿಖೆ ಕೈಗೊಂಡು ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪೊಲೀಸರು ಒದಗಿಸಿದ್ದ 48 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ಅಲ್ಲದೆ, 141 ದಾಖಲೆಗಳನ್ನು ಆಧರಿಸಿ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಮಲ್ಲಿಕಾರ್ಜುನ ಎಚ್.ಎಸ್. ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಾಜಿ ಮಿಸ್ ಸ್ವಿಜರ್ಲೆಂಡ್ ಫೈನಲಿಸ್ಟ್ ಕ್ರಿಸ್ಟಿನಾ ಬರ್ಬರ ಕೊಲೆ ; ಕೊಲೆ ಬಳಿಕ ಬ್ಲೆಂಡರ್ ಬಳಸಿ ಮೃತದೇಹ ಪೀಸ್ ಪೀಸ್

Next Post

ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ARM’ ಸಿನಿಮಾ

Related Posts

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್
ಕ್ರೈಮ್ ನ್ಯೂಸ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
61
ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ
ಕ್ರೈಮ್ ನ್ಯೂಸ್

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
98
Next Post
ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ARM’ ಸಿನಿಮಾ

ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ARM' ಸಿನಿಮಾ

Discussion about this post

Recent News

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
61
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d