ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿಗಳಾದ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಬುಧವಾರ ಎಲ್ಲ ಆರೋಪಿಗಳನ್ನು ದೋಷಿಗಳು ಎಂದು ಪ್ರಕಟಿಸಿದ್ದು, ಇಂದು ಶಿಕ್ಷೆ ಪ್ರಮಾಣ ವಿಧಿಸಿದರು.
ದಾಖಲೆ ತಿರುಚಿದ ಪೊಲೀಸ್ ಅಧಿಕಾರಿಗೆ 7 ವರ್ಷ ಜೈಲು ಶಿಕ್ಷೆ: ಪ್ರಕರಣದಲ್ಲಿ ಆರೋಪಿಗೆ ನೆರವಾಗಲು ಸಹಕರಿಸಿ ದಾಖಲೆಗಳನ್ನು ತಿರುಚಿದ ಗಂಭೀರ ಆರೋಪ ಸಂಬಂಧ ಪೊಲೀಸ್ ಅಧಿಕಾರಿ (19ನೇ ಆರೋಪಿ) ಚನ್ನಕೇಶವ ಬಿ.ಟಿಂಗರಿಕರ್ ಎಂಬವರಿಗೆ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ.
ಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು:
- ಆರೋಪಿ 2: ವಿಕ್ರಮ್ (ಜೀವಾವಧಿ ಶಿಕ್ಷೆ)
- ಆರೋಪಿ 3: ಕೀರ್ತಿ ಕುಮಾರ್ (ಜೀವಾವಧಿ ಶಿಕ್ಷೆ)
- ಆರೋಪಿ 4 : ಸಂದೀಪ್ (ಜೀವಾವಧಿ ಶಿಕ್ಷೆ)
- ಆರೋಪಿ 5 : ವಿನಾಯಕ್ (ಜೀವಾವಧಿ ಶಿಕ್ಷೆ)
- ಆರೋಪಿ 6 : ಮಹಬಲೇಶ್ವರ್ (ಜೀವಾವಧಿ ಶಿಕ್ಷೆ)
- ಆರೋಪಿ 7: ಸಂತೋಷ್ (ಜೀವಾವಧಿ ಶಿಕ್ಷೆ)
- ಆರೋಪಿ 8: ದಿನೇಶ್ ಎಂ (ಜೀವಾವಧಿ ಶಿಕ್ಷೆ)
- ಆರೋಪಿ 9: ಅಶ್ವಥ್ (ಜೀವಾವಧಿ ಶಿಕ್ಷೆ)
- ಆರೋಪಿ10: ಸುನೀಲ್ ಕೆಎಸ್ (ಜೀವಾವಧಿ ಶಿಕ್ಷೆ)
- ಆರೋಪಿ11: ನಜೀರ್ ಅಹಮದ್ (ಜೀವಾವಧಿ ಶಿಕ್ಷೆ)
- ಆರೋಪಿ 12: ಶಾನವಾಜ್ (ಜೀವಾವಧಿ ಶಿಕ್ಷೆ)
- ಆರೋಪಿ13: ನೂತನ್ (ಜೀವಾವಧಿ ಶಿಕ್ಷೆ)
- ಆರೋಪಿ 14: ಹರ್ಷಿತ್ (ಜೀವಾವಧಿ ಶಿಕ್ಷೆ)
- ಆರೋಪಿ 15: ವಿನಯ್ ಕುಲಕರ್ಣಿ (ಜೀವಾವಧಿ ಶಿಕ್ಷೆ)
- ಆರೋಪಿ 16 : ಚಂದ್ರಶೇಖರ್ ಇಂಡಿ (ಜೀವಾವಧಿ ಶಿಕ್ಷೆ)
- ಆರೋಪಿ18 : ವಿಕಾಸ್ ಕಲಬುರ್ಗಿ (ಜೀವಾವಧಿ ಶಿಕ್ಷೆ)
- ಆರೋಪಿ19: ಚನ್ನಕೇಶವ ತಿಂಗರೀಕರ್ (7 ವರ್ಷ ಜೈಲು ಶಿಕ್ಷೆ)
- ಘಟನೆ ನಡೆದಾಗ ತನಿಖಾಧಿಕಾರಿಯಾಗಿದ್ದ 19ನೇ ಆರೋಪಿ
- ಎ1 ಬಸವರಾಜ ಮುತ್ತಗಿ ಮಾಫಿ ಸಾಕ್ಷ್ಯ ವನ್ನು ಖಚಿತ ಪಡಿಸಿದ ಕೋರ್ಟ್
- 16 ಲಕ್ಷ ರೂ ಹಣವನ್ನು ಪರಿಹಾರವಾಗಿ ಯೊಗೀಶ್ ಗೌಡ ಮಕ್ಕಳಿಗೆ ನೀಡಬೇಕು
- ಶಿಕ್ಷಣಕ್ಕಾಗಿ ಪರಿಹಾರ ಹಣ ನೀಡುವಂತೆ ಆದೇಶ
ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಅಡಿಷನಲ್ ಸಾಲಿಟರಿ ಜನರಲ್ ಅವರು, ‘ಇದೊಂದು ಪೂರ್ವ ನಿಯೋಜಿತ ಬರ್ಬರ ಹತ್ಯೆಯಾಗಿದ್ದು, ಸಮಾಜಕ್ಕೆ ಕಠಿಣ ಸಂದೇಶ ರವಾನಿಸಲು ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಕ್ಷಮೆಯಿಲ್ಲದ ಜೀವಿತಾವಧಿ ಶಿಕ್ಷೆ ನೀಡಬೇಕು ಎಂದು ಲಿಖಿತ ರೂಪದಲ್ಲಿ ಮನವಿ ಮಾಡಿದ್ದರು. ಆದರೆ, ದೋಷಿಗಳ ಪರ ವಕೀಲರು ವಯಸ್ಸು ಮತ್ತು ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ಕಡಿಮೆ ಶಿಕ್ಷೆ ನೀಡುವಂತೆ ಕೋರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post