ಮಂಗಳೂರು, ಅ. 13 : ಸಿಎಂ ಬಸವರಾಜ ಬೊಮ್ಮಾಯಿಯವರು ಮಂಗಳೂರು ದಸರಾ ಅಂಗವಾಗಿ ಶ್ರೀಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿ ಶ್ರೀಗೋಕರ್ಣನಾಥ ಹಾಗೂ ಪರಿವಾರ ದೇವರುಗಳು ಮತ್ತು ಶ್ರೀ ಶಾರದಾಮಾತೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು
ಈ ಸಂದರ್ಭ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಶ್ರೀಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿ ನಾಡಿನ ಜನತೆ ಸುಭೀಕ್ಷೆಯಿಂದಿರಲು, ಸುಖ ಶಾಂತಿ ನೆಮ್ಮದಿಯಿಂದ ಇರಲೆಂದು ಪ್ರಾರ್ಥಿಸಿದೆ. ಈ ಸಂದರ್ಭ ಬಹಳ ಹಿರಿಯ ಹಾಗೂ ನಾಡು ಕಂಡಿರುವ ಅತ್ಯಂತ ಬದ್ಧತೆಯ ರಾಜಕಾರಣಿ ಜನಾರ್ದನ ಪೂಜಾರಿಯವರನ್ನು ಭೇಟಿಯಾದೆ. ಬಡವರ ಬಗ್ಗೆ ಅತ್ಯಂತ ಕಳಕಳಿ ಇರುವ ವ್ಯಕ್ತಿ. ನನ್ನ ತಂದೆಯವರೊಂದಿಗೂ ಅತ್ಯಂತ ಆತ್ಮೀಯ ಒಡನಾಟ ಇದ್ದಂತವರು, ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ, ವಿಶ್ವಾಸದಿಂದ ಹರಸಿದ್ದಾರೆ. ನಾನು ಅವರ ಯೋಗಕ್ಷೇಮವನ್ನು, ಆರೋಗ್ಯವನ್ನು ವಿಚಾರಿಸಿದ್ದಾನೆ. ಅವರೂ ನನ್ನ ಬಗ್ಗೆ ಉತ್ತಮ ಕೆಲಸ ಮಾಡುತ್ತೀದ್ದೀರೆಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರು ದಸರಾವನ್ನು ಕಂಡು ಸಂತೋಷವಾಗಿದೆ. ಈ ಬಗ್ಗೆ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ, ಮಂಗಳೂರು ದಸಾರಕ್ಕೆ ಏನೆಲ್ಲಾ ಸಹಾಯ ಸಹಕಾರ ಬೇಕು ಅದನ್ನು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post