ಮಂಗಳೂರು: ಶಾಂಭವಿ ಇವೆಂಟ್ ಅರೇಂಜರ್ಸ್ ಹಾಗೂ ಸಮೂಹ ಸಂಸ್ಥೆಗಳು ಕಳೆದ 30 ವರ್ಷಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಗರದ ಉರ್ವಾ ಸ್ಟೋರ್ ತುಳು ಭವನದ ಬಳಿಯಲ್ಲಿ ವಿಸ್ತರಣಾ ಶಾಖೆಯನ್ನು ಆದಿತ್ಯವಾರ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತಾಡಿದ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ ಅವರು, “ಶಾಂಭವಿ ಸಂಸ್ಥೆಯು ಕಳೆದ ಮೂರು ದಶಕಗಳಿಂದ ತುಳುನಾಡಿನಾದ್ಯಂತ ಮನೆಮಾತಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಹೆಸರು ಪಡೆದು ಜನರಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಲಿ” ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತಾಡಿದ ಶಾಂಭವಿ ಇವೆಂಟ್ ಅರೇಂಜರ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ ಅವರು “ಸಂಸ್ಥೆಯ ನೂತನ ವಿಸ್ತರಣಾ ಶಾಖೆ ಇಂದಿಲ್ಲಿ ಶುಭಾರಂಭಗೊಂಡಿದೆ. ಶಾಂಭವಿ ಈವೆಂಟ್ ಅರೇಂಜರ್ಸ್ ಮಂಗಳೂರಿನಲ್ಲಿ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು. ಕಾರ್ಪೊರೇಟ್ ಈವೆಂಟ್ ಮತ್ತು ಖಾಸಗಿ ಈವೆಂಟ್ ಅನ್ನು ಆಯೋಜಿಸುವುದು ಅತ್ಯಂತ ವೈಯಕ್ತಿಕ ಅನುಭವವಿದೆ. ಜನ್ಮದಿನ, ಬೇಬಿ ಶವರ್, ಬೇಬಿ ನಾಮಕರಣ ಸಮಾರಂಭ, ಮೆಹಂದಿ ಫಂಕ್ಷನ್, ಹಲ್ದಿ ಫಂಕ್ಷನ್‌ಗಳು, ಮದುವೆಗಳು, ಸಮಾವೇಶಗಳು, ಉತ್ಸವದ ಕಾರ್ಯಗಳು, ವ್ಯಾಪಾರ ಪ್ರದರ್ಶನಗಳು, ನಿಶ್ಚಿತಾರ್ಥದ ಕಾರ್ಯಗಳು, ಅಭಿನಂದನಾ ಕಾರ್ಯಗಳು, ರಾಜಕೀಯ ಕಾರ್ಯಗಳು, ಚಲನಚಿತ್ರ ಮತ್ತು ನಿರ್ದೇಶನದ ಕಲಾಕೃತಿಗಳು , ಕಸ್ಟಮೈಸ್ ಮಾಡಿದ ಕಲೆ ಮತ್ತು ಯಾವುದೇ ರೀತಿಯ ಪಾರ್ಟಿಯನ್ನು ಯೋಜಿಸಲು ನಾವು ಕಡಿಮೆ ಸಮಯವನ್ನು ತೆಗೆದುಕೊಳ್ಳುವ ಬಗ್ಗೆ ಹೆಮ್ಮೆಪಡುತ್ತೇವೆ. ನಮ್ಮ ಗ್ರಾಹಕರ ಬಜೆಟ್‌ಗೆ ಅನುಗುಣವಾಗಿ ಸೇವೆ ಕೊಡುವುದೇ ನಮ್ಮ ಉದ್ದೇಶ” ಎಂದರು.
ವೇದಿಕೆಯಲ್ಲಿ ಶ್ರೀಮತಿ ಚೈತನ್ಯ ಶೆಟ್ಟಿ (ಕಾರ್ಯದರ್ಶಿ ಗ್ಯಾನ್ ವೇದಾಂತ್ ಫೌಂಡೇಶನ್), ಶಾಂಭವಿ ಇವೆಂಟ್ ಅರೇಂಜರ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ , ಎಚ್.ಎಸ್. ಗುರು ಮೂರ್ತಿ ( ಮೆಸ್ಕಾಂ ಕಂಪೆನಿಯ ನೌಕರ ಸಂಘದ ಉಪಾಧ್ಯಕ್ಷ), ಚೆನ್ನಬಸಪ್ಪ ರೊಟ್ಟಿ , ಚೆನ್ನೇಶ್ ಇ ಮೆಸ್ಕಾಂ ಮಣ್ಣಗುಡ್ಡ , ರಾಜರತ್ನ ಸನಿಲ್, ಮೆಲ್ವಿನ್ ಲೆಸ್ಲಿ, ಪ್ರಕೃತಿ ಫ್ಲವರ್ಸ್ ಡೆಕೋರೇಷನ್ ಮಾಲಕ ದಯಾನಂದ ಅಮೀನ್, ಗಜಾನನ ಪವರ್ ಸರ್ವಿಸ್ ನ ಪ್ರಕಾಶ್ ರಾವ್, ಕಾರ್ಪೋರೇಟರ್ ಗಣೇಶ್ ಕುಲಾಲ್, ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಮರಳು ಶಿಲ್ಪ ಕಲಾವಿದ ಹರೀಶ್ ಆಚಾರ್ಯ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post