ಮಂಗಳೂರು: ಮಹಿಳೆಯೊಬ್ಬಳ ಮೇಲೆ ಇನ್ನೊಬ್ಬ ಮಹಿಳೆ ಮತ್ತು ಆಕೆಯ ಚಾಲಕ ಸೇರಿಕೊಂಡು ಥಳಿಸಿದ ಪ್ರಕರಣವೊಂದು ಮಂಗಳೂರಿನಲ್ಲಿ ನಡೆದಿದೆ. ಮತ್ತೊಂದೆಡೆ ಹೀಗೆ ಹೊಡೆದ ಮಹಿಳೆ ವಿರುದ್ಧ ಆಕೆಯ ಪತಿಯೇ ಪೊಲೀಸರಿಗೆ ದೂರು ನೀಡಿದ್ದಾನೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮಠ ಎಂಬಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿರುವ ಅಬ್ದುಲ್ ರಹಿಮಾನ್ ಎಂಬಾತನ ಗುಜರಿ ಅಂಗಡಿಗೆ ಶಹನಾಜ್ ಎಂಬಾಕೆ ಬಂದಿದ್ದಳು. ಆಗ ಹಠಾತ್ ಆಗಿ ಗುಜರಿ ಅಂಗಡಿಯಾತನ ಪತ್ನಿ ಹಸೀನಾ ಅಲ್ಲಿಗೆ ಬಂದಿದ್ದಾಳೆ.
ಅಂಗಡಿ ಬಳಿಗೆ ಬಂದಿದ್ದ ಹಸೀನಾ ತನ್ನ ಚಾಲಕ ಅಫ್ರಿದಿಯೊಂದಿಗೆ ಸೇರಿಕೊಂಡು ಶಹನಾಜ್ಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಮಾತ್ರವಲ್ಲ, ‘ನನ್ನ ಗಂಡನ ಜತೆ ನಿಂಗೇನು ಕೆಲಸ?’ ಎಂದು ದಬಾಯಿಸಿ ಆಕೆ ಮೇಲೆ ಹಲ್ಲೆ ಮಾಡಿದ್ದಾಳೆ.
ಹಸೀನಾ ತನ್ನ ಕೈಗೆ ಸಿಕ್ಕ ಪ್ಲಾಸ್ಟಿಕ್ ಪೈಪ್ ಇತ್ಯಾದಿಯಿಂದ ಶಹನಾಜ್ಳ ಮೇಲೆ ಹಲ್ಲೆ ಮಾಡಿದ್ದಳು. ಈ ಬಗ್ಗೆ ಅಬ್ದುಲ್ ರಹಿಮಾನ್ ಪತ್ನಿ ಹಸೀನಾ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ. ಕೆಲವರ ಪ್ರಕಾರ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಂಬಂಧಿಕರೇ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ, ತನಿಖೆ ನಡೆಸಲು ಮುಂದಾಗಿದ್ದಾರೆ.