ಬೆಂಗಳೂರು (ಜ. 14): ದಕ್ಷಿಣ ಕನ್ನಡ ಮೂಲದ ತಂಪುಪಾನಿಯ ತಯಾರಿಕಾ ಕಂಪನಿಯೊಂದರ ಹಕ್ಕು ಸ್ವಾಮ್ಯ (Patent) ದುರುಪಯೋಗ ಪಡಿಸಿಕೊಂಡ ಆರೋಪದಡಿ ನಗರದ ‘ಬ್ರಿಸ್ಟೋ ಬೇವರೇಜಸ್’ (Bistro Beverages) ಹಾಗೂ ಆಂಧ್ರಪ್ರದೇಶ ಮೂಲದ ‘ರಾಯಲ್ ಆಕ್ವಾ ಇಂಡಸ್ಟ್ರೀಸ್’ (ROYAL AQUA) ಕಂಪನಿಗಳ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ದಕ್ಷಿಣ ಕನ್ನಡ ಮೂಲದ ‘ಮೆಘಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಈ ಎರಡೂ ಕಂಪನಿಗಳ ಮಾಲಿಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮೆಘಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು (MEGHA FRUIT PROCESSING PVT LTD) ಕಾನೂನು ಬದ್ಧವಾಗಿ ನೋಂದಾಯಿತ ಹಕ್ಕುಸ್ವಾಮ್ಯ ಪಡೆದು ವಿವಿಧ ಪಾನೀಯ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಅದರಲ್ಲಿ ‘ಬಿಂದು ಆ್ಯಂಡ್ ಬಿಂದು, ಫಿಜಾ, ಜೀರಾ ಮಸಾಲ’ ಈ ಉತ್ಪನ್ನಗಳನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ.
ಆದರೆ, ಈ ಎರಡೂ ಕಂಪನಿಗಳು ತಮ್ಮ ಕಂಪನಿಯ ತಂಪು ಪಾನೀಯ ಬಾಟಲಿಗಳ ಮೇಲಿನ ಹಕ್ಕುಸ್ವಾಮ್ಯ ಬಳಸಿಕೊಂಡು ಅಕ್ರಮವಾಗಿ ಅವರ ಕಂಪನಿಯ ತಂಪುಪಾನಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕಂಪನಿಗೆ ನಷ್ಟವುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಎರಡೂ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎಂದು ದೂರಿನಲ್ಲಿ ಕೋರಲಾಗಿದೆ. ಈ ದೂರು ಆಧರಿಸಿ ಸಂಪಿಗೆಹಳ್ಳಿ ಠಾಣೆ ಪೊಲೀಸರು ಹಕ್ಕು ಸ್ವಾಮ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ತನಿಖೆ ನಡೆಸಿ ಬ್ರಿಸ್ಟೋ ಬೇವರೇಜಸ್ ಹಾಗೂ ರಾಯಲ್ ಅಕ್ವಾ ಇಂಡಸ್ಟ್ರೀಸ್ ಕಂಪನಿಯ ಮಾಲಕರ ಬಂಧಿಸಿ ಎರಡೂ ಕಂಪನಿಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post