ಮಂಗಳೂರು: ಪಚ್ಚನಾಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಸದ ಭೂಭರ್ತಿ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಆಸುಪಾಸಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಕೆಐಒಸಿಎಲ್, ಎಸ್‌ಇಜೆಡ್, ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ಠಾಣೆಗಳ ಐದು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲು ಕ್ರಮಕೈಗೊಳ್ಳಲಾಗಿದೆ.
‘ಬೆಂಕಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಆದರೆ, ಕಸದ ರಾಶಿಯಿಂದ ದಟ್ಟವಾದ ಹೊಗೆ ಹೊರಸೂಸುತ್ತಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು. ‘ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಮಧ್ಯಾಹ್ನ 1.15ಕ್ಕೆ ಕರೆಬಂತು. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಆರಂಭಿಸಿದೆವು. 50ಕ್ಕೂ ಅಧಿಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು. ‘ಕಸದ ರಾಶಿಯಲ್ಲಿ ಉತ್ಪತ್ತಿಯಾಗುವ ಮಿಥೇನ್‌ನಿಂದ ಸ್ವಯಂ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಗಾಳಿ ಇದ್ದುದರಿಂದ ಬೆಂಕಿ ತ್ವರಿತಗತಿಯಲ್ಲಿ ವ್ಯಾಪಿಸಿದೆ’ ಎಂದು ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ತಿಳಿಸಿದರು.
‘ಬೆಂಕಿ ನಂದಿಸುವುದಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿ ಕೊಳವೆಬಾವಿಯನ್ನು ಕೊರೆಯಿಸಲಾಗಿದೆ. ಇಲ್ಲಿನ ಚಲನವಲನಗಳ ಬಗ್ಗೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಕಾವಲುಗಾರರನ್ನು ನಿಯೋಜಿಸಿ ದಿನದ 24 ಗಂಟೆಯೂ ಇಲ್ಲಿ ಕಣ್ಣಿಡಲಾಗುತ್ತಿದೆ’ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯ, ಕೇಂದ್ರದಲ್ಲಿ ಮತ್ತು ಮಂಗಳೂರು ಪಾಲಿಕೆಯಲ್ಲೂ ನಿಮ್ಮದೇ ಅಧಿಕಾರ ಇದೆ. ಯಾಕೆ ನಿಮಗೆ ತ್ಯಾಜ್ಯಕ್ಕೆ ಬೆಂಕಿ ಬಿದ್ದಿರುವುದನ್ನು ನಿಲ್ಲಿಸಲು ಆಗುತ್ತಿಲ್ಲ. ಅಲ್ಲಿನ ಜನರಿಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ ಎಂದು ಶಾಸಕರನ್ನು ಬಾವ ಪ್ರಶ್ನೆ ಮಾಡಿದರು.
2023ರ ಜ.6ರಂದೂ ಪಚ್ಚನಾಡಿ ಕಸದ ರಾಶಿಗೆ ಬೆಂಕಿ ಬಿದ್ದಿದ್ದು, ನಂದಿಸಲು 10 ದಿನಗಳಿಗೂ ಹೆಚ್ಚು ಸಮಯ ತಗುಲಿತ್ತು. ಫೆ. 5ರಂದು ಹಾಗೂ ಫೆ 15ರಂದು ಈ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು. ‘ಪಚ್ಚನಾಡಿಯಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಕಳವಳಕಾರಿ. ಇದನ್ನು ತಡೆಯಲು ಪಾಲಿಕೆ ಆಡಳಿತವು ವಿಫಲವಾಗಿದೆ. ಇದರಿಂದ ಆಸುಪಾಸಿನ ನಿವಾಸಿಗಳಿಗೆ ಹಾಗೂ ಈ ಪರಿಸರದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ನಾನುಕುಳವಾಗುತ್ತಿದೆ’ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ದೂರಿದರು.
ಜಿಲ್ಲಾಧಿಕಾರಿ, ಶಾಸಕರು, ಇತರೇ ಅಧಿಕಾರಿಗಳು ಮಾಸ್ಕ್ ಹಾಕಿ ತೆರಳುತ್ತಿದ್ದಾರೆ. ಆದರೆ 24 ಗಂಟೆ ತ್ಯಾಜ್ಯ ಹೊಗೆ ಸೇವಿಸುವ ಜನರ ಬಗ್ಗೆ ಕಾಳಜಿ ಮಾಡಿದ್ದೀರಾ. ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಆಗಬಹುದು, ಅವರ ಪಾಡು ಏನಾಗಬೇಕು ಯೋಚಿಸಿದ್ದೀರಾ. ನಾಡಿದ್ದು ಮಾ.17ರ ಶುಕ್ರವಾರ ಸಂಜೆ 4ಕ್ಕೆ ನಾವು ಸ್ಥಳೀಯ ಜನರನ್ನು ಒಟ್ಟು ಸೇರಿಸಿ ಪ್ರತಿಭಟನೆ ಮಾಡ್ತೇವೆ. ತ್ಯಾಜ್ಯ ಬೆಂಕಿಗೆ ಕೊನೆ ಇಲ್ವಾ. ಮಂಗಳೂರಿನ ಇಬ್ಬರು ಶಾಸಕರು ಕನಿಷ್ಠ ಸ್ಥಳ ವೀಕ್ಷಣೆಗೂ ಹೋಗಿಲ್ಲ. ಜನರ ಬದುಕಿನ ಮೇಲೆ ಸವಾರಿ ಮಾಡುತ್ತಿದ್ದೀರಾ.. ಜನಸಾಮಾನ್ಯರ ಜೊತೆಗೆ ನಾವು ಇದ್ದೇವೆ ಎಂದರು ಬಾವ.
ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಮತ್ತೆ ಹತ್ತು ಎಕರೆ ಭೂಮಿ ಗುರುತಿಸಿದ್ದಾರೆ. ಮತ್ತೆ ಹತ್ತೆಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡೋದು ಬೇಡ. ಅಲ್ಲಿ ಆಸುಪಾಸಿನ ದೇವಾಲಯ, ಪ್ರಾರ್ಥನಾಲಯಗಳಿಗೆ ಇದರಿಂದ ತೊಂದರೆ ಆಗಲಿದೆ. ಕಾಂಗ್ರೆಸ್ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಾವ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post