ಬೆಳ್ತಂಗಡಿ: ಶಿರಾಡಿ ಘಾಟಿಯಲ್ಲಿ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಕಾರಿನಲ್ಲಿದ್ದ ಕೊಕ್ಕಡದ ಉದ್ಯಮಿ ಚಂದ್ರಶೆಖರ, ಕಕ್ಕಿಂಜೆಯ ಶ್ರೀಧರ ಹಾಗೂ ಜನಾರ್ದನ ಎಂಬವರು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಆಸ್ಪತ್ರೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಕೊಕ್ಕಡ ನಿವಾಸಿ ಚಂದ್ರಶೇಖರ್ ಗೌಡ, ಉಜಿರೆ ನಿವಾಸಿ ಶ್ರೀಧರ್, ಜನಾರ್ದನ ಕೆರಿಮಾರ್ ಮೃತರು. ಘಟನೆಯಲ್ಲಿ ಸುರೇಶ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸಾವನ್ನಪ್ಪಿದ ಮೂರು ಜನ ಕೂಡ ಸಂಬಂಧಿಕರಾಗಿದ್ದಾರೆ. ಶ್ರೀಧರ ಎಂಬವರು ಕಾರು ಚಾಲನೆ ಮಾಡುತ್ತಿದ್ದರು.
ಬೆಳ್ತಂಗಡಿಯಿಂದ ಇವರು ಸಕಲೇಶಪುರಕ್ಕೆ ಮದುವೆಗಾಗಿ ತೆರಳಿದ್ದು ವಾಪಸ್ ಬರುತ್ತಿದ್ದಾಗ ಬಸ್ಸಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post