ನವದೆಹಲಿ, ಜೂ 13: ಪೆಟ್ರೋಲ್ ಬಂಕ್ ನಲ್ಲಿ ಯುವತಿಯೊಬ್ಬಳು ಬಂಕ್ ಸಿಬ್ಬಂದಿಗೆ ತನ್ನ ಪ್ಯಾಂಟ್ ಬಿಚ್ಚಿ ತೋರಿಸಿರುವ ಅಸಹ್ಯಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ದೃಶ್ಯ ಪೆಟ್ರೋಲ್ ಬಂಕ್ ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಪೆಟ್ರೋಲ್ ಬಂಕ್ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ಸ್ಕೂಟರ್ ನಲ್ಲಿ ಬಂದ ಇಬ್ಬರು ಯುವತಿಯರು ಪೆಟ್ರೋಲ್ ತುಂಬಿಸಿಕೊಂಡಿದ್ದರು. ಬಳಿಕ ಬಂಕ್ ಸಿಬಂದಿ ಹಣ ಪಾವತಿಸುವಂತೆ ಕೇಳಿದ್ದ, ಆಗ ಯುವತಿ ಸ್ಕೂಟರ್ ನಿಂದ ಕೆಳಗೆ ಇಳಿದು, ಬಂಕ್ ಸಿಬಂದಿ ಎದುರು ಏಕಾಏಕಿ ತನ್ನ ಪ್ಯಾಂಟ್ ಅನ್ನು ಕೆಳಗೆ ಜಾರಿಸಿ ಪೇಮೆಂಟ್ ಆಯ್ತು ಎಂದಿದ್ದಳೆ. ಆಕೆ ಕೆಳಗಿಳಿದು ಪ್ಯಾಂಟ್ ಜಾರಿಸಿ ಪೇಮೆಂಟ್ ಆಯ್ತು ಎಂದಾಗ, ಸ್ಕೂಟರ್ ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ಈ ಎಲ್ಲಾ ನಾಚಿಕೆಗೆಟ್ಟ ನಡವಳಿಕೆಯನ್ನು ಸುಮ್ಮನೆ ಕುಳಿತು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕೃತ್ಯವನ್ನು ಸೆರೆಹಿಡಿದಿರುವ ಸಿಸಿಟಿವಿ ಕ್ಯಾಮೆರಾದ ಸಮಯ ಮಧ್ಯರಾತ್ರಿ 02:03 ಎಂದು ತೋರಿಸಿದ್ದು, ಆಘಾತಕಾರಿ ಘಟನೆ ತಡರಾತ್ರಿ ನಡೆದಿದೆ. ಆದಾಗ್ಯೂ, ಈಗಿನಂತೆ, ನಿಖರವಾದ ಸ್ಥಳ ಮತ್ತು ವೀಡಿಯೊ ರೆಕಾರ್ಡ್ ಮಾಡಿದ ದಿನದ ಬಗ್ಗೆ ಯಾವುದೇ ದೃಢಪಡಿಸಿದ ವರದಿಗಳಿಲ್ಲ. ಕೆಲವು ನೆಟಿಜನ್‌ಗಳು ವೀಡಿಯೊದಲ್ಲಿ ಕಂಡುಬಂದ ಮಹಿಳೆ ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿದ್ದಾರೆ, ಆದರೆ ಅಧಿಕೃತ ಮಾಹಿತಿ ಇಲ್ಲ
ಪೆಟ್ರೋಲ್ ಪಂಪ್‌ನ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಲಾಗಿದೆ. ಯುವತಿ ಏಕಾಏಕಿ ಸ್ಕೂಟರ್‌ನಿದ ಇಳಿದ ಪ್ಯಾಂಟ್ ಬಿಚ್ಚಿದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಯುವತಿ ಈ ರೀತಿ ಮಾಡಿದ್ದು ಸರಿಯಲ್ಲ. ಯುವತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. ಆದರೆ, ಇಂಥ ನಡತೆಗೇನು ಕಾರಣ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post