ಅಬುಧಾಬಿ: ಕುವೈತ್ ಮಂಗಾಫ್‌ನಲ್ಲಿ ಬೆಂಕಿ ಅವಘಡದಲ್ಲಿ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ(IAF) ವಿಮಾನ ಇಂದು ಶುಕ್ರವಾರ ಬೆಳಗ್ಗೆ 8:30ಕ್ಕೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿದೆ. ನಿನ್ನೆ ಗುರುವಾರ ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಮೃತದೇಹಗಳನ್ನು ತವರೂರಿಗೆ ಕರೆತರಲು ಕ್ರಮ ಕೈಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
45 ಮಂದಿ ಮೃತರಲ್ಲಿ 31 ಮೃತದೇಹಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದೆ. ನಂತರ ವಿಮಾನವು ಉಳಿದ ಮೃತದೇಹಗಳನ್ನು ಹೊತ್ತು ದೆಹಲಿಗೆ ತೆರಳಲಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ ಏಳು ಮಂದಿ ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿಗೆ ತರಲಾಗುತ್ತಿದೆ.
ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ. .
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸಚಿವರು ವಿಮಾನ ನಿಲ್ದಾಣದಲ್ಲಿ ಮೃತರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಮೃತದೇಹಗಳನ್ನು ಅವರವರ ಮನೆಗೆ ಸಾಗಿಸಲು ರಾಜ್ಯ ಸರ್ಕಾರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ.
ಕಟ್ಟಡದ ಬೆಂಕಿ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕೇರಳಿಗರು:
1. ಪತ್ತನಂತಿಟ್ಟದ ಪಂದಳಂನ ಆಕಾಶ್ ನಾಯರ್
2. ಪತ್ತನಂತಿಟ್ಟದ ವಜಮುತ್ತಂನ ಮುರಳೀಧರನ್ ನಾಯರ್
3. ಪತ್ತನಂತಿಟ್ಟದ ಕೊನ್ನಿಯ ಸಾಜು ವರ್ಗೀಸ್
4. ಪತ್ತನಂತಿಟ್ಟದ ಕೀಜ್ವೈಪುರದ ಸಿಬಿನ್ ಅಬ್ರಹಾಂ
5. ಪತ್ತನಂತಿಟ್ಟದ ತಿರುವಲ್ಲಾದ ಥಾಮಸ್ ಉಮ್ಮನ್
6. ಕೊಲ್ಲಂನ ಕರವಲೂರಿನ ಸಜನ್ ಜಾರ್ಜ್
7. ಕೊಲ್ಲಂನ ವಯ್ಯಂಕರ ಶಮೀರ್ ಉಮರುದ್ದೀನ್
8. ಕೊಲ್ಲಂನ ವೆಲಿಚಿಕ್ಕಲದ ಲೂಕೋಸ್ ವಡಕ್ಕೊಟ್ಟು
9. ಕೊಲ್ಲಂನ ಪೆರಿನಾಡಿನ ಸುಮೇಶ್ ಪಿಳ್ಳೈ
10. ಕಣ್ಣೂರಿನ ಧರ್ಮದೊಳದ ವಿಶ್ವಾಸ್ ಕೃಷ್ಣ
11. ಕಣ್ಣೂರಿನ ಕಡಲಾಯಿಯ ಅನೀಶ್ ಕುಮಾರ್
12. ಕಣ್ಣೂರಿನ ಪಡಿಯೋಚ್ಚಲ್‌ನ ನಿತಿನ್ ಕೂತೂರ್
13. ಕೊಟ್ಟಾಯಂನ ಚಂಗನಾಶ್ಸೆರಿಯ ಶ್ರೀಹರಿ ಪ್ರದೀಪ್
14. ಕೊಟ್ಟಾಯಂನ ಪಂಪಾಡಿಯ ಸ್ಟೆಫಿನ್ ಅಬ್ರಹಾಂ
15. ಕೊಟ್ಟಾಯಂನ ಪೈಪ್ಪಾಡ್‌ನ ಶಿಬು ವರ್ಗೀಸ್
16. ಮಲಪ್ಪುರಂನ ಕೂಟ್ಟಾಯಿಯ ನೂಹು ಕೆ ಪಿ
17. ಮಲಪ್ಪುರಂನ ಪುಲಮಂತೋಲ್‌ನ ಎಂ ಪಿ ಬಾಹುಲೇಯನ್
18. ತಿರುವನಂತಪುರದ ನೆಡುಮಂಗಡದ ಅರುಣ್ ಬಾಬು
19. ತಿರುವನಂತಪುರದ ಎಡವದ ಶ್ರೀಜೇಶ್ ನಾಯರ್
20. ಕಾಸರಗೋಡಿನ ತೃಕ್ಕರಿಪುರದ ಕೇಲು ಪೊನ್ಮಲೇರಿ
21. ಕಾಸರಗೋಡಿನ ಚೆರ್ಕಳದ ರೆಂಜಿತ್ ಕೆ ಆರ್
22. ತ್ರಿಶೂರ್‌ನ ಚಾವಕ್ಕಾಡ್‌ನ ಬಿನೋಯ್ ಥಾಮಸ್
23. ಅಲಪ್ಪುಳದ ಚೆಂಗನ್ನೂರಿನ ಮ್ಯಾಥ್ಯೂ ಜಾರ್ಜ್
Discover more from Coastal Times Kannada
Subscribe to get the latest posts sent to your email.
Discussion about this post