• About us
  • Contact us
  • Disclaimer
Sunday, May 10, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ

Coastal Times by Coastal Times
May 6, 2026
in ಕ್ರೈಮ್ ನ್ಯೂಸ್
ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ
28
VIEWS
WhatsappTelegramShare on FacebookShare on Twitter

ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಶಿವಾಜಿನಗರ‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸೈಯದ್ ಅಮೀರ್ ಮತ್ತು ಅಮಿರ್ ಅಹ್ಮದ್ ಎಂದು ಗುರುತಿಸಲಾಗಿದೆ.

ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ವರ್ಷಗಳಿಂದ ಗುಟ್ಟಾಗಿ ನಡೆದಿದ್ದ ಕಳ್ಳತನದ ಅಸಲಿಯತ್ತು ಹೊರಬಿದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಅಮೀನ್ ಮತ್ತು ಆತನ ಸ್ನೇಹಿತ ಅಮಿರ್ ಅಹ್ಮದ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.​ಬಂಧಿತ ಸೈಯದ್ ಅಮೀನ್, ಸಚಿವ ಜಮೀರ್ ತಾಯಿಯ ಹತ್ತಿರದ ಸಂಬಂಧಿ. ಈ ನಂಟಿನಿಂದಾಗಿ ಸಚಿವರ ಮನೆಗೆ ಈತನಿಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬಂದು ಒಳ್ಳೆಯವನಂತೆ ನಟಿಸುತ್ತಿದ್ದ ಅಮೀನ್, ಯಾರೂ ಇಲ್ಲದ ಸಮಯ ನೋಡಿ ಕಳೆದ 2025 ರಿಂದಲೂ ಹಂತ ಹಂತವಾಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿ ಮದುವೆ ಸಮಾರಂಭಗಳು ಇದ್ದಾಗ ಆಭರಣಗಳನ್ನು ಎಗರಿಸುವುದು ಈತನ ಚಾಳಿಯಾಗಿತ್ತು.

ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ಆರೋಪಿಗಳು ಕೋವಿಡ್ ಅವಧಿಯಲ್ಲಿ ನಷ್ಟ ಅನುಭವಿಸಿದ್ದರು. ಫೈನಾನ್ಸ್ ಅಥವಾ ಸಾಲ ಸಿಗದಿದ್ದಾಗ ಅಂತಿಮವಾಗಿ ತಮ್ಮದೇ ಸಂಬಂಧಿಯಾದ ಸಚಿವರ ಮನೆ ಮೇಲೆ ಕಣ್ಣು ಹಾಕಿದ್ದರು. ಕದ್ದ ಚಿನ್ನಾಭರಣಗಳನ್ನು ಅಡವಿಟ್ಟು ಆ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಯೋಜಿಸಿದ್ದರು.

ಸೈಯದ್ ಅಮೀರ್ ರಕ್ತಸಂಬಂಧಿಯಾಗಿದ್ದರಿಂದ ಪ್ರತಿದಿನ ಜಮೀರ್ ಅವರ ಮನೆಗೆ ಬಂದು ಹೋಗುತ್ತಿದ್ದ. ಮನೆಯವರೊಂದಿಗೆ ಅತ್ಯಂತ ಆತ್ಮೀಯವಾಗಿ, ಒಳ್ಳೆಯವನಂತೆ ನಟಿಸುತ್ತಿದ್ದ. ಇದೇ ನಂಬಿಕೆಯನ್ನು ಬಳಸಿಕೊಂಡು 2023ರಿಂದಲೇ ಸಣ್ಣ ಸಣ್ಣದಾಗಿ ಚಿನ್ನಾಭರಣಗಳನ್ನು ಕದಿಯಲು ಶುರು ಮಾಡಿದ್ದ. ಹೀಗೆ ಒಟ್ಟು 1 ಕೆ.ಜಿ 200 ಗ್ರಾಂ ಚಿನ್ನಾಭರಣಗಳನ್ನು ಇಬ್ಬರೂ ಎಗರಿಸಿದ್ದರು.

ಕಳ್ಳತನದ ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆಯೇ ಆರೋಪಿ ಅಮೀರ್ ನಡವಳಿಕೆ ಬದಲಾಗಿದ್ದು ಪೊಲೀಸರಿಗೆ ಕ್ಲ್ಯೂ ನೀಡಿತ್ತು. ಆಗಾಗ ಜಮೀರ್ ಮನೆ ಬರುತ್ತಿದ್ದವನು ಕಳ್ಳತನವಾದ ನಂತರ ಬರುವುದನ್ನೇ ನಿಲ್ಲಿಸಿದ್ದ. ಸಚಿವರ ತಾಯಿ ಫೋನ್ ಮಾಡಿದರೂ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದ.​ಯಾವಾಗ ಇವನ ಮೊಬೈಲ್ ಸ್ವಿಚ್ ಆಫ್ ಆಯ್ತೋ, ಆಗ ಪೊಲೀಸರಿಗೆ ಇವನೇ ಆರೋಪಿ ಎಂಬುದು ಗೊತ್ತಾಗಿತ್ತು. ಸದ್ಯ ಕಾರ್ಯಾಚರಣೆ ನಡೆಸಿ ಇಬ್ಬರು ಖದೀಮರ ಹೆಡೆಮುರಿ ಕಟ್ಟಿರುವ ಪೊಲೀಸರ ವಿಚಾರಣೆ ವೇಳೆ ಈತ ತನ್ನ ಪಾಪದ ಪುರಾಣವನ್ನು ಬಿಚ್ಚಿಟ್ಟಿದ್ದಾನೆ. ಸದ್ಯ ಬಂಧಿತರಿಂದ ಒಟ್ಟು 759 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರಿಂದ ಪೊಲೀಸರು ಸುಮಾರು 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಉಳಿದ ಆಭರಣಗಳಿಗೆ ತನಿಖೆ ನಡೆಸುತ್ತಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮೇ 9 -10 ರಂದು : ಸುರತ್ಕಲ್ ನಲ್ಲಿ ರಾಜ್ಯಮಟ್ಟದ “ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ – 5” ಹಿರಿಯರ ಕ್ರಿಕೆಟ್ ಹಬ್ಬ

Next Post

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

Related Posts

ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ
ಕ್ರೈಮ್ ನ್ಯೂಸ್

ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

May 3, 2026
19
ಪೂಜೆ ನೆಪದಲ್ಲಿ ಜ್ಯೋತಿಷಿಯೊಬ್ಬ ಬ್ಯೂಟಿಷಿಯನ್ ಮೇಲೆ ನಿರಂತರ ಅತ್ಯಾಚಾರ
ಕ್ರೈಮ್ ನ್ಯೂಸ್

ಪೂಜೆ ನೆಪದಲ್ಲಿ ಜ್ಯೋತಿಷಿಯೊಬ್ಬ ಬ್ಯೂಟಿಷಿಯನ್ ಮೇಲೆ ನಿರಂತರ ಅತ್ಯಾಚಾರ

May 3, 2026
79
Next Post
ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

Discussion about this post

Recent News

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

May 9, 2026
69
ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

May 8, 2026
51
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

May 9, 2026
ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

May 8, 2026
ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

May 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d