• About us
  • Contact us
  • Disclaimer
Friday, June 19, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

Coastal Times by Coastal Times
May 3, 2026
in ರಾಷ್ಟ್ರೀಯ ಸುದ್ದಿ
ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!
36
VIEWS
WhatsappTelegramShare on FacebookShare on Twitter

ಲಕ್ನೋ : ಸಾವನ್ನೂ ಲೆಕ್ಕಿಸದೆ ರೀಲ್ಸ್​ ಮಾಡುವ ಹುಚ್ಚು ಕೆಲವರದ್ದು. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್​ ಮಾಡಲು ಹೋಗಿ ಎಷ್ಟೋ ಜನರು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಅಂಥದ್ದೇ ಮತ್ತೊಂದು ಪ್ರಕರಣ ಶನಿವಾರ (ಮೇ 2) ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿನ ತೀವ್ರ ಶಿಥಿಲಗೊಂಡಿದ್ದ ನೀರಿನ ಟ್ಯಾಂಕರ್​​ ಮೇಲೆ ರೀಲ್ಸ್​ ಮಾಡಲು ಐವರು ಯುವಕರು ತೆರಳುವಾಗ ಏಣಿ ಕುಸಿದುಬಿದ್ದು ಓರ್ವ ಸಾವಿಗೀಡಾದರೆ, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಇನ್ನಿಬ್ಬರು ಹೇಗೋ ಪಾರಾಗಿ ನೀರಿನ ಟ್ಯಾಂಕರ್​ ಮೇಲೆಯೇ 16 ಗಂಟೆ ಸಿಲುಕಿದ್ದರು. ಕೊನೆಗೆ ವಾಯುಪಡೆಯ ನೆರವಿನಿಂದ ಅವರನ್ನು ರಕ್ಷಿಸಲಾಗಿದೆ.

ಟ್ಯಾಂಕರ್​ ಹತ್ತುವಾಗ ಕುಸಿದ ಏಣಿ: ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ರೀಲ್ಸ್​ ಚಿತ್ರೀಕರಿಸಲೆಂದು ಸಿದ್ಧಾರ್ಥ್, ಶನಿ, ಗೋಲು, ಪವನ್ ಮತ್ತು ಕಲ್ಲು ಎಂಬ ಐವರು ಊರಲ್ಲಿನ ಹಳೆಯ ಮತ್ತು ತೀವ್ರ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಅನ್ನು ಹತ್ತಿದ್ದರು. ಅವರು ಹತ್ತುತ್ತಿರುವಾಗ, ಶಿಥಿಲಗೊಂಡ ಟ್ಯಾಂಕರ್​​ನ ಮೆಟ್ಟಿಲುಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿವೆ.

ಇದರಿಂದ, ಸಿದ್ಧಾರ್ಥ್, ಶನಿ ಮತ್ತು ಗೋಲು ಮೇಲಿನಿಂದ ಬಿದ್ದಿದ್ದಾರೆ. ದೊಡ್ಡ ಗಾತ್ರದ ಸಿಮೆಂಟ್​ ತುಂಡುಗಳು ಅವರ ಮೇಲೆ ಬಿದ್ದ ಕಾರಣ ಸಿದ್ದಾರ್ಥ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಅದೃಷ್ಟವಶಾತ್​​ ಪವನ್ ಮತ್ತು ಕಲ್ಲು ಎಂಬಿಬ್ಬರು ಟ್ಯಾಂಕ್‌ನ ಮೇಲ್ಭಾಗವನ್ನು ತಲುಪಿದ್ದಾರೆ. ತೀವ್ರ ಗಾಯಗೊಂಡ ಶನಿ ಮತ್ತು ಗೋಲು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಳಿಯಲು ಮಾರ್ಗವಿಲ್ಲದೆ 16 ಗಂಟೆ ಸಿಲುಕಿದ್ದರು: ಟ್ಯಾಂಕರ್​ ಹತ್ತಿದ್ದ ಇಬ್ಬರು ಯುವಕರು ಇಳಿಯಲು ಮಾರ್ಗವಿಲ್ಲದೇ ಅಲ್ಲಿಯೇ ಸಿಲುಕಿದ್ದರು. ಈ ಕುರಿತಂತೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಆದರೆ, ಹೈಡ್ರಾಲಿಕ್ ಲಿಫ್ಟ್ ಬಳಸಿದರೂ, ಟ್ಯಾಂಕರ್​ ಎತ್ತರವಾಗಿದ್ದ ಕಾರಣ, ಅಲ್ಲಿದ್ದ ಯುವಕರನ್ನು ಕರೆತರಲು ಸಾಧ್ಯವಾಗಿಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆ ವಿಫಲವಾಗಿತ್ತು.

ಘಟನೆಯ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು. ಬಳಿಕ, ಅಧಿಕಾರಿಗಳು ಭಾರತೀಯ ವಾಯುಪಡೆಯ ನೆರವು ಕೋರಿದ್ದರು. ಸೇನಾಪಡೆಯು ತನ್ನ Mi-17 V5 ಹೆಲಿಕಾಪ್ಟರ್ ಅನ್ನು ಬಳಸಿ ಇಬ್ಬರು ಯುವಕರನ್ನು ಟ್ಯಾಂಕರ್​​ನಿಂದ ಯಶಸ್ವಿಯಾಗಿ ರಕ್ಷಿಸಿದೆ. ಸುಮಾರು 16 ಗಂಟೆಗಳ ಕಾಲ ಇಬ್ಬರು ಅಲ್ಲಿಯೇ ಅನ್ನ, ನೀರಿಲ್ಲದೆ ಸಿಲುಕಿದ್ದರು. ಭಾರತೀಯ ವಾಯುಪಡೆಯು ತನ್ನ ಎಕ್ಸ್​ ಖಾತೆಯಲ್ಲಿ ಕಾರ್ಯಾಚರಣೆಯ ದೃಶ್ಯಗಳನ್ನು ಹಂಚಿಕೊಂಡಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ಬಾಗಿಲು ತೆಗೆದು ಹೊರಗೆ ಹಾರಿದ ಪ್ರಯಾಣಿಕ

Next Post

ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

Related Posts

ಭಾರತೀಯ ವಾಯುಪಡೆಯ AN-32 ವಿಮಾನ ಅಪಘಾತ: ಲ್ಯಾಂಡಿಂಗ್ ಬೆನ್ನಲ್ಲೇ ಹೊತ್ತಿ ಉರಿದ ಯುದ್ಧ ವಿಮಾನ, ಪೈಲಟ್ ಮೃತಪಟ್ಟಿರುವ ಶಂಕೆ
ರಾಷ್ಟ್ರೀಯ ಸುದ್ದಿ

ಭಾರತೀಯ ವಾಯುಪಡೆಯ AN-32 ವಿಮಾನ ಅಪಘಾತ: ಲ್ಯಾಂಡಿಂಗ್ ಬೆನ್ನಲ್ಲೇ ಹೊತ್ತಿ ಉರಿದ ಯುದ್ಧ ವಿಮಾನ, ಪೈಲಟ್ ಮೃತಪಟ್ಟಿರುವ ಶಂಕೆ

June 13, 2026
31
ಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಮಂಗಳೂರಿನ ಯುವ ನಾಯಕ ಡೆನಿಸ್ ಡಿಸಿಲ್ವಾ ಆಯ್ಕೆ
ಕರಾವಳಿ

ಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಮಂಗಳೂರಿನ ಯುವ ನಾಯಕ ಡೆನಿಸ್ ಡಿಸಿಲ್ವಾ ಆಯ್ಕೆ

May 27, 2026
40
Next Post
ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

ವಿವಾದಗಳನ್ನು ಮೆಟ್ಟಿ ನಿಂತ 'ಜನನಾಯಕ' ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

Discussion about this post

Recent News

ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.

ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.

June 18, 2026
11
ಸೆನೆಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಹೊಸ ದಾಖಲೆ ಬರೆದ ಫ್ರಾನ್ಸ್​ ಫುಟ್ಬಾಲ್​ ಸ್ಟಾರ್​ ಎಂಬಪ್ಪೆ!

ಸೆನೆಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಹೊಸ ದಾಖಲೆ ಬರೆದ ಫ್ರಾನ್ಸ್​ ಫುಟ್ಬಾಲ್​ ಸ್ಟಾರ್​ ಎಂಬಪ್ಪೆ!

June 18, 2026
30
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.

ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.

June 18, 2026
ಸೆನೆಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಹೊಸ ದಾಖಲೆ ಬರೆದ ಫ್ರಾನ್ಸ್​ ಫುಟ್ಬಾಲ್​ ಸ್ಟಾರ್​ ಎಂಬಪ್ಪೆ!

ಸೆನೆಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಹೊಸ ದಾಖಲೆ ಬರೆದ ಫ್ರಾನ್ಸ್​ ಫುಟ್ಬಾಲ್​ ಸ್ಟಾರ್​ ಎಂಬಪ್ಪೆ!

June 18, 2026
ವಿವಾಹಿತ ಮಹಿಳೆಗೆ ವಿಡಿಯೋ ಕಳಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ, ದಂಪತಿ ಸೇರಿ ಮೂವರು ಅರೆಸ್ಟ್​

ವಿವಾಹಿತ ಮಹಿಳೆಗೆ ವಿಡಿಯೋ ಕಳಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ, ದಂಪತಿ ಸೇರಿ ಮೂವರು ಅರೆಸ್ಟ್​

June 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d