ಹೊಸದಿಲ್ಲಿ: ಮಂಗಳೂರು ಮೂಲದ ಉದ್ಯಮಿ ಹಾಗೂ ಯುವ ನಾಯಕ ಡೆನಿಸ್ ಡಿಸಿಲ್ವಾ ಅವರು, ಮೇ 23ರಂದು ಹೊಸದಿಲ್ಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯ ದಿ ಸೂರ್ಯಾ ಹೋಟೆಲ್ ನಲ್ಲಿ ನಡೆದ ವಾರ್ಷಿಕ ಗ್ಲೋಬಲ್ ಜಿಬಿಎಫ್ ಸಭೆಯಲ್ಲಿ ʼಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾ (ಜಿಬಿಎಫ್)ʼ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.
ರಾಷ್ಟ್ರ ಮಟ್ಟದ ಈ ಮಹಾಸಭೆಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನೂರಾರು ಕ್ರೈಸ್ತ ಉದ್ಯಮಿಗಳು, ವ್ಯವಹಾರ ನಾಯಕರು, ವೃತ್ತಿಪರರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದು, ಉದ್ಯಮಶೀಲತೆ, ನಾಯಕತ್ವ, ನೆಟ್‌ವರ್ಕಿಂಗ್ ಮತ್ತು ಸಮುದಾಯ ಸಬಲೀಕರಣ ಕುರಿತಾದ ಪೂರ್ಣ ದಿನದ ಸಮ್ಮೇಳನ ನಡೆಯಿತು.
ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದ (ಸಿಬಿಸಿಐ) ಯ ಕಾರ್ಯದರ್ಶಿ ಹಾಗೂ ಜಿಬಿಎಫ್‌ನ ಮುಖ್ಯ ಪೋಷಕರಾದ ಆರ್ಚ್‌ಬಿಷಪ್ ಅನಿಲ್ ಜೆ.ಟಿ. ಕೂಟೋ ಅವರು ಅಧ್ಯಕ್ಷತೆ ವಹಿಸಿದ್ದರು. ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಹಾಗೂ YMCA ರಾಷ್ಟ್ರೀಯ ಅಧ್ಯಕ್ಷರಾದ ಜಸ್ಟೀಸ್ ಕುರಿಯನ್ ಜೋಸೆಫ್ ಮುಖ್ಯ ಅತಿಥಿಯಾಗಿದ್ದರು. ಭಾರತದ ರಾಷ್ಟ್ರೀಯ ಚರ್ಚ್‌ಗಳ ಮಂಡಳಿಯ (ಎನ್‌ಸಿಐ)ಯ ಪ್ರಧಾನ ಕಾರ್ಯದರ್ಶಿಯಾದ Rev. ಅಸಿರ್ ಇಬೆನೆಝೆನ್ ಸೇರಿದಂತೆ ಅನೇಕ ಉದ್ಯಮಿಗಳು ಹಾಗೂ ಕೈಗಾರಿಕಾ ನಾಯಕರು ಉಪಸ್ಥಿತರಿದ್ದರು.

ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು:
ಬಾರ್ನಬಾಸ್ ನಾಂಗ್‌ಬಹ್, ಶಿಲ್ಲಾಂಗ್ – ಉಪಾಧ್ಯಕ್ಷರು
ಜೋಸ್ ಕುರಿಯನ್ ಯೋಹನ್ನಾನ್, ದೆಹಲಿ – ಪ್ರಧಾನ ಕಾರ್ಯದರ್ಶಿ
ಅಡ್ವೊ. ಪಿ. ಐ. ಜೋಸ್, ದೆಹಲಿ – ಕಾರ್ಯದರ್ಶಿ
ಮ್ಯಾಥ್ಯೂ ಈಪನ್, ಬೆಂಗಳೂರು – ಖಜಾಂಚಿ
ರಾಹುಲ್ ಜಾರ್ಜ್, ಬೆಂಗಳೂರು – ಸಂಯುಕ್ತ ಖಜಾಂಚಿ
ಫಾ. ಟೋಮಿ ಜೋಸೆಫ್, ದೆಹಲಿ – ಕಾರ್ಯಕಾರಿ ಮಂಡಳಿ ಸದಸ್ಯರು
ಅಸಿರ್ವಾಥಂ ಡಿ, ದೆಹಲಿ – ಕಾರ್ಯಕಾರಿ ಮಂಡಳಿ ಸದಸ್ಯರು
ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ಚ್ ಬಿಷಪ್ ಅನಿಲ್ ಜೆ. ಟಿ. ಕೂಟೋ ಅವರು ಜಿಬಿಎಫ್ ಸಂಸ್ಥೆಯ ವೇಗವಾದ ಬೆಳವಣಿಗೆಯನ್ನು ಶ್ಲಾಘಿಸಿ, ಕ್ರೈಸ್ತ ಯುವಕರು ಹಾಗೂ ಮಹಿಳೆಯರು ಉದ್ಯಮಶೀಲತೆ ಮತ್ತು ನಾಯಕತ್ವ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಕ್ರೈಸ್ತ ಉದ್ಯಮಶೀಲತೆ ಕೇವಲ ಲಾಭಕೇಂದ್ರಿತ ವಾಗಿರದೆ, ಸೇವೆ, ಪರಿವರ್ತನೆ, ನೈತಿಕ ಮೌಲ್ಯಗಳು ಹಾಗೂ ಸಮುದಾಯದ ಅಭಿವೃದ್ಧಿಯನ್ನು ಗುರಿಯಾಗಿಸಿ ಕೊಂಡ ಮೌಲ್ಯಾಧಾರಿತ ಉದ್ಯಮಶೀಲತೆಯಾಗಿ ರೂಪುಗೊಳ್ಳಬೇಕು ಎಂದು ಅವರು ಹೇಳಿದರು.
ಜಸ್ಟೀಸ್ ಕುರಿಯನ್ ಜೋಸೆಫ್ ಅವರು ಜಿಬಿಎಫ್ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಇಂದಿನ ಸಮಾಜದಲ್ಲಿ ನೈತಿಕ ಮತ್ತು ಮೌಲ್ಯಾಧಾರಿತ ಉದ್ಯಮ ನಾಯಕತ್ವದ ಅಗತ್ಯವನ್ನು ಒತ್ತಿಹೇಳಿದರು. ಯುವಜನರ ಉದ್ಯಮಶೀಲತೆ, ನಾಯಕತ್ವ ಹಾಗೂ ಕೌಶಲ್ಯಾಭಿವೃದ್ಧಿಗಾಗಿ ಜಿಬಿಎಫ್ ಮತ್ತು ಭಾರತದ ರಾಷ್ಟ್ರೀಯ ವೈಎಂಸಿಎಗಳ ಮಂಡಳಿ ನಡುವೆ ಭವಿಷ್ಯದಲ್ಲಿ ಉತ್ತಮ ಸಹಕಾರ ಸಾಧ್ಯವೆಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
“Collaboration Over Competition” ಎಂಬ ವಿಷಯಾಧಾರಿತ ಈ ಸಮ್ಮೇಳನದಲ್ಲಿ ಪ್ರಮುಖ ಉಪನ್ಯಾಸಗಳು, ನೆಟ್‌ವರ್ಕಿಂಗ್ ಸಂವಾದಗಳು, ಹೂಡಿಕೆ ಚರ್ಚೆಗಳು, ಸ್ಟಾರ್ಟ್‌ಅಪ್ ಪ್ರಸ್ತುತಿಗಳು, ಪ್ರಾದೇಶಿಕ ವ್ಯವಹಾರ ಪ್ರಸ್ತಾವನೆಗಳು ಹಾಗೂ ಪ್ಯಾನೆಲ್ ಚರ್ಚೆಗಳು ನಡೆದವು. ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಉದ್ಯಮಿಗಳು, ಜಿಬಿಎಫ್ ನೆಟ್‌ವರ್ಕ್ ಮೂಲಕ ಉದ್ಯಮ ವೃದ್ಧಿ, ಮಾರ್ಗದರ್ಶನ, ಪಾಲುದಾರಿಕೆ ಹಾಗೂ ಸಹಯೋಗದ ಅವಕಾಶಗಳು ದೊರೆತಿರುವ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಡೆನಿಸ್ ಡಿಸಿಲ್ವಾ ಅವರು ಕರ್ನಾಟಕ ರಾಜ್ಯದ (ICYM) ನ ಮಾಜಿ ರಾಜ್ಯಾಧ್ಯಕ್ಷರಾಗಿದ್ದಾರೆ. ಉದ್ಯಮ ಮತ್ತು ಸಾಮಾಜಿಕ ಚಟುವಟಿಕೆಗಳ ಜೊತೆಗೆ ಅವರು ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೊಂಕಣಿ ಸಾಂಸ್ಕೃತಿಕ ಚಳವಳಿಗಳಲ್ಲಿಯೂ ಸಕ್ರಿಯರಾಗಿದ್ದು, ಕರಾವಳಿ ಕರ್ನಾಟಕದ ಪ್ರಸಿದ್ಧ ಬ್ರಾಸ್ ಬ್ಯಾಂಡ್ ಉತ್ಸವ “ಪೆಪೆರೆ ಪೆಪೆ ದಮ್ ” ಹಿನ್ನಲೆಯ ಪ್ರಮುಖ ಸಾಂಸ್ಕೃತಿಕ ಸಂಸ್ಥೆಯಾದ ಅಮಿ ಅನಿ ಅಮ್ಚಿಮ್ ನ ಸಂಘಟನೆಯ ಅಧ್ಯಕ್ಷರಾಗಿದ್ದಾರೆ.
ಉದ್ಯಮ, ಯುವ ಸಬಲೀಕರಣ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಮುದಾಯ ಸೇವೆಯ ಮೂಲಕ ಡೆನಿಸ್ ಡಿಸಿಲ್ವಾ ಅವರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ತಮ್ಮ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post