ಮಂಗಳೂರು: ಮಂಗಳೂರಿನಲ್ಲಿ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು

ಕಾರ್ಯಕ್ರಮದ ಉದ್ಘಾಟನೆ ಯನ್ನು ರಿಬ್ಬನ್ ಕತ್ತಾರಿಸುವ ಮೂಲಕ , ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಅತೀ ವಂದನೀಯ ಧರ್ಮ ಧ್ಯಕ್ಷ ರಾದ ಡಾ ಹೆನ್ರಿ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಆಶೀರ್ವಾದಿಸಿದರು

ನಂತರ ರಾಮಕೃಷ್ಣ ಮಠ ದ ಸ್ವಾಮೀಜಿ ಯುಗಾನಂದ ರವರು ದೀಪ ಪ್ರಜ್ವಲನೆ, ಆಶೀರ್ವಚನ ನೀಡಿದರು ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಅತೀ ವಂದನೀಯ ಡಾ ಹೆನ್ರಿ ಡಿಸೋಜಾ ರವರು ವಿದ್ಯಾರ್ಥಿಗಳಿಗೆ ನಾವೂ ಎಲ್ಲಿ ಹುಟ್ಟಿದ್ದು ಮುಖ್ಯವಲ್ಲಾ ಎಲ್ಲಿಗೆ ಗುರಿ ಮುಟ್ಟುತ್ತೇವೆ ಏನೂ ಸಾಧನೆ ಮಾಡುತ್ತೇವೆ ಮತ್ತು ಎಷ್ಟ್ಟು ಸಾಧಕ ರಾಗುತ್ತೇವೆ ಅದು ಮುಖ್ಯ ಎಂದು ಸಲಹೆ ನೀಡಿದರು ಮುಖ್ಯ ಅತಿಥಿ ಗಳಾದ ಸ್ವಾಮಿ ಯುಗಾನಂದ ರವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಶಿಕ್ಷಣ ವಾಣಿಜ್ಯ ಬ್ಯಾಂಕಿಂಗ್ ವೈದಕೀಯ ಕ್ಷೆತ್ರದಲ್ಲಿ ಮುಂಚೂಣಿ ಯಲ್ಲಿ ಇದೆ ರಾಷ್ಟ್ರೀಯ ಬ್ಯಾಂಕ್ ಗಳು ಇಲ್ಲಿಂದ ಆರಂಭ ಗೊಂಡಿದ್ದು ಕೆಲವರಿಗೂ ಈ ವಿಷಯ ಗೊತ್ತಿಲ್ಲ ಈ ಜಿಲ್ಲೆ ಯಲ್ಲಿ ಐಎಎಸ್ ತರಬೇತಿ ಯಾವುದೇ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಗಳು ಇಲ್ಲದ್ದು ತುಂಬಾ ಬೇಸರ ತಂದಿದೆ ಇದನ್ನು ಅರಿತು ಈಗ ಈ ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಇಲ್ಲಿ ಆರಂಭ ಗೊಂಡಿದ್ದು ಸಂತೋಷ ದಾಯಕ ವಾಗಿದೆ ಇದರಿಂದ ತುಂಬಾ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿ ಎಂದುಶುಭ ಹಾರೈಸಿದರು.

ಡೈಜಿ ವರ್ಲ್ಡ್ ಇದರ ನಿರ್ದೇಶಕರಾದ ವಾಲ್ಟರ್ ನಂದಲಿಕೆ ಯವರು ನನಗೂ ಪೊಲೀಸ್ ಇಲಾಖೆ ಗೆ ಸೇರಲು ಅಸೆ ಇತ್ತು ಅವಾಗ ನನಗೆ ಗೈಡ್ ಮಾಡಲು ಯಾರು ಇರಲಿಲ್ಲ ಈಗ ಎಷ್ಟೋ ತರಬೇತಿ ಕೇಂದ್ರ ಗಳು ಇವೆ ಯಾವ ಮಾಹಿತಿ ಬೇಕಾದರೂ ಸುಲಭ ರೀತಿಯಲ್ಲಿ ತಿಳಿಯಬಹುದು ಇಲ್ಲಿ ಹುಡುಗಿಯರ ಸಂಖ್ಯೆ ನೋಡುವಾಗ ತುಂಬಾ ಖುಷಿ ಯಾಗುತ್ತದೆ ಯಾಕೆಂದರೆ ಅವರನ್ನು ಅಧಿಕಾರಿಗಳ ಸಮವಸ್ತ್ರ ದಲ್ಲಿ ನೋಡಲು ಮತ್ತು ಗೌರವ ಕೊಡಲು ಖುಷಿ ಯಾಗುತ್ತದೆ ನಾನು ಇಂತಹ ತರಬೇತಿ ಕೇಂದ್ರ ಗಳನ್ನು ನಮ್ಮ ಜಿಲ್ಲೆ ಯಲ್ಲಿ ಆಗ ಬೇಕು ಎಂದು ಹಲವು ಬಾರಿ ಪ್ರಯತ್ನ ಮಾಡಿದ್ದೂ ಈಗ ಇಲ್ಲಿ ಈ ಕೇಂದ್ರ ಆರಂಭ ವಾಗಿದ್ದು ಇದರ ಸದುಪಯೋಗ ಎಲ್ಲಾ ವಿದ್ಯಾರ್ಥಿಗಳಿಗೆ ಲಭಿಸಲಿ ನಮ್ಮ ಜಿಲ್ಲೆ ಯ ಪತಾಕೆ ಪ್ರಪಂಚದಡೆ ವಿಸ್ತರ ವಾಗಲಿ ಎಂದು ಶುಭ ಹಾರೈಸಿದರು
ಸಂದೇಶ ಫೌಂಡೇಶನ್ ನಿರ್ದೇಶಕರಾದ ವಂದನೀಯ ರೋಷನ್ ರೋಸಾರಿಯೋರವರು ಸ್ವಾಗತಿ ಸಿದರು Mangalore IAS ಸಂಸ್ಥೆಯ ಸಂಸ್ಥಾಪಕರಾದ ಸಂತೋಷ್ ರಾವ್ . ಅವರು ಸಂಸ್ಥೆಯ ಉದ್ದೇಶ ಹಾಗೂ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿದರು ಸಂದೇಶ ಸಂಸ್ಥೆ ಯ ಟ್ರಸ್ಟಿ ಶ್ರೀಮಾನ್ ರೊಯ್ ಕ್ಯಾಸ್ಟಲಿನೋ ರವರು ಧನ್ಯವಾದ ಗೈದರು ಜಾಸ್ಮಿನ್ ಜೇನಿಫರ್ ಕಾರ್ಯಕ್ರಮ ನಿರೂಪಿಸಿದರು ರಾಷ್ಟ್ರ ಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತ ವಾಹಿತು


Discover more from Coastal Times Kannada
Subscribe to get the latest posts sent to your email.







Discussion about this post