ಮಂಗಳೂರು, : ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಅವರು ಮಂಗಳೂರಿಗೆ ಆಗಮಿಸಿದ್ದು, ಅವರ ಕರ್ನಾಟಕ–ಕೇರಳ ಯಾತ್ರೆಗೆ ಚಾಲನೆ ದೊರೆತಿದೆ. ಮಂಗಳೂರಿನ ಬೋಳೂರಿನಲ್ಲಿರುವ ಬ್ರಹ್ಮಸ್ಥಾನದಲ್ಲಿ ಮೇ 28 ಮತ್ತು 29ರಂದು ನಡೆಯಲಿರುವ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಅಮ್ಮ ಭಾಗವಹಿಸಲಿದ್ದಾರೆ.
ಏಳು ವರ್ಷಗಳ ಬಳಿಕ ಅಮ್ಮ ಮಂಗಳೂರಿಗೆ ಭೇಟಿ ನೀಡಿದ್ದು, ಮಾತಾ ಅಮೃತಾನಂದಮಯಿ ಮಠದ ಭಕ್ತರು ಹಾಗೂ ಆಶ್ರಮ ಪ್ರತಿನಿಧಿಗಳು ಪರಂಪರಾಗತ ವಾದ್ಯಘೋಷ ಮತ್ತು ಮಂತ್ರೋಚ್ಚಾರಗಳೊಂದಿಗೆ ಭವ್ಯ ಸ್ವಾಗತ ಕೋರಿದರು. ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ನೇತೃತ್ವದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು.




ಅಮೃತಪುರಿ ಆಶ್ರಮದ ಹಿರಿಯ ಸಂನ್ಯಾಸ ಶಿಷ್ಯರು, ಬ್ರಹ್ಮಚಾರಿಗಳು, ಬ್ರಹ್ಮಚಾರಿಣಿಯರು ಹಾಗೂ ಆಶ್ರಮ ನಿವಾಸಿಗಳು ಅಮ್ಮ ಅವರೊಂದಿಗೆ ಮಂಗಳೂರಿಗೆ ಆಗಮಿಸಿದರು. ಬ್ರಹ್ಮಸ್ಥಾನ ಮಹೋತ್ಸವವು ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ.
ಮೇ 28ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಅಮ್ಮ ವಿಶೇಷವಾಗಿ ಸಿದ್ಧಪಡಿಸಲಾದ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧ್ಯಾನ, ಸತ್ಸಂಗ, ಭಜನೆ ಹಾಗೂ ದರ್ಶನ ಕಾರ್ಯಕ್ರಮಗಳು ನಡೆಯಲಿವೆ. ಎರಡು ದಿನಗಳ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಆಶ್ರಮ ಹಾಗೂ ಬ್ರಹ್ಮಸ್ಥಾನದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಅನ್ನಸಂತರ್ಪಣೆಯ ವ್ಯವಸ್ಥೆಯೂ ಮಾಡಲಾಗಿದೆ.

Discover more from Coastal Times Kannada
Subscribe to get the latest posts sent to your email.







Discussion about this post