• About us
  • Contact us
  • Disclaimer
Sunday, September 6, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ಬಾಗಿಲು ತೆಗೆದು ಹೊರಗೆ ಹಾರಿದ ಪ್ರಯಾಣಿಕ

Coastal Times by Coastal Times
May 3, 2026
in ರಾಷ್ಟ್ರೀಯ ಸುದ್ದಿ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ಬಾಗಿಲು ತೆಗೆದು ಹೊರಗೆ ಹಾರಿದ ಪ್ರಯಾಣಿಕ
57
VIEWS
WhatsappTelegramShare on FacebookShare on Twitter

ಚೆನ್ನೈ : ಶಾರ್ಜಾದಿಂದ ಆಗಮಿಸಿ ಚೆನ್ನೈ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಇಳಿಯುವಾಗ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರ ತೆರೆದು, ಅದರಿಂದ ಹೊರಗೆ ಜಿಗಿದಿದ್ದಾನೆ. ಈ ಘಟನೆಯು ವಿಮಾನದಲ್ಲಿ ಇತರ ಪ್ರಯಾಣಿಕರ ಜೀವಕ್ಕೆ ಆಪತ್ತು ತರುವ ಅಪಾಯ ಸೃಷ್ಟಿಸಿತ್ತು.

217 ಪ್ರಯಾಣಿಕರನ್ನು ಹೊತ್ತ ಏರ್ ಅರೇಬಿಯಾ ವಿಮಾನವು ಇಂದು ಬೆಳಗಿನಜಾವ ಸುಮಾರು 3:30 ಕ್ಕೆ ಶಾರ್ಜಾದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು. ವಿಮಾನವು ರನ್‌ವೇಯಲ್ಲಿ ಇಳಿದು ಟ್ಯಾಕ್ಸಿವೇಯಲ್ಲಿ ಸಾಗಿ ನಿಗದಿತ ಸ್ಥಳದಲ್ಲಿ ನಿಲ್ಲಲು ಚಲಿಸುತ್ತಿತ್ತು. ಈ ವೇಳೆ, ವಿಮಾನದಲ್ಲಿದ್ದ ಪುದುಕ್ಕೊಟ್ಟೈ ಜಿಲ್ಲೆಯ ಮೊಹಮ್ಮದ್ ನಿಜಾಮುದ್ದೀನ್ ಶೆರಿಫ್ (30) ಎಂಬಾತ ಇದ್ದಕ್ಕಿದ್ದಂತೆ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು, ಕೆಳಗೆ ಹಾರಿ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಇದು ವಿಮಾನದಲ್ಲಿದ್ದ ಇತರೆ ಪ್ರಯಾಣಿಕರನ್ನು ತೀವ್ರ ಆಘಾತಕ್ಕೀಡು ಮಾಡಿತು.

ಘಟನೆಯು ವಿಮಾನ ನಿಲ್ದಾಣದಲ್ಲಿ ಭಾರಿ ಭೀತಿ ಸೃಷ್ಟಿಸಿತು. ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ನಿರ್ಗಮನ ದ್ವಾರ ತೆರೆದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದವನನ್ನು ಬಂಧಿಸಿದರು. ಇದರಿಂದ, ವಿಮಾನವನ್ನು ನಿಗದಿತ ಸಮಯಕ್ಕೆ ಅದರ ಗೊತ್ತುಪಡಿಸಿದ ಪಾರ್ಕಿಂಗ್ ಸ್ಥಳಕ್ಕೆ ತರದೆ ಟ್ಯಾಕ್ಸಿವೇಯಲ್ಲಿ ನಿಲ್ಲಿಸಲಾಯಿತು.

ಈ ಘಟನೆಯಿಂದ ಇದೇ ರನ್​ವೇಯಲ್ಲಿ ಇಳಿಯಬೇಕಿದ್ದ ಲಂಡನ್‌ನಿಂದ ಚೆನ್ನೈಗೆ ಆಗಮಿಸುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವು ಇಳಿಯಲು ಅವಕಾಶ ಇಲ್ಲದ ಕಾರಣ ಅದನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಯಿತು.

ತುರ್ತು ದ್ವಾರ ತೆಗೆದಿದ್ದೇಕೆ? ಕೇಂದ್ರ ಗುಪ್ತಚರ ಬ್ಯೂರೋದ ಅಧಿಕಾರಿಗಳು ಮತ್ತು ಚೆನ್ನೈ ವಿಮಾನ ನಿಲ್ದಾಣದ ಭದ್ರತಾ ತಂಡದ ಉನ್ನತ ಅಧಿಕಾರಿಗಳು ಆರೋಪಿ ಮೊಹಮ್ಮದ್ ನಿಜಾಮುದ್ದೀನ್ ಶೆರಿಫ್​​ನ ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಆತ ವಿರೋಧಾಭಾಸ ಹೇಳಿಕೆಗಳನ್ನು ನೀಡಿದ್ದಾನೆ. ಯಾರೋ ತನ್ನನ್ನು ಕೊಲ್ಲಲು ಯತ್ನಿಸಿದರು. ಭಯದಿಂದ ವಿಮಾನದಿಂದ ಹೊರಗೆ ಹಾರಿದೆ ಎಂದು ಹೇಳಿದ್ದಾನೆ. ಆತನ ನಡವಳಿಕೆಯು ಇನ್ನಷ್ಟು ಅನುಮಾನ ಮೂಡಿಸಿವೆ. ಹೀಗಾಗಿ, ಆತನ ಹಿನ್ನೆಲೆ ಮತ್ತು ವಿವಿಧ ಕೋನಗಳಿಂದ ತೀವ್ರ ತನಿಖೆ ನಡೆಯುತ್ತಿದೆ.

ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದು ಕೆಳಗೆ ಹಾರಿದ್ದರಿಂದ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚೆನ್ನೈ ವಿಮಾನ ನಿಲ್ದಾಣದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಸ್ತುತ ಭದ್ರತಾ ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಇಡೀ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿತ್ತು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

Next Post

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

Related Posts

ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ
ರಾಷ್ಟ್ರೀಯ ಸುದ್ದಿ

ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

September 5, 2026
77
ನಿತಿನ್ ನಬಿನ್ ಅವರ ನೇತೃತ್ವದ ಬಿಜೆಪಿಯ ಹೊಸ ತಂಡ ರೆಡಿ: ರಾಮ್ ಮಾಧವ್, ಸ್ಮೃತಿ ಇರಾನಿಗೆ ಪ್ರಮುಖ ಹೊಣೆ, ಯುವಮೋರ್ಚಾಕ್ಕೆ ಹೊಸ ಸಾರಥಿ ನೇಮಕ
ರಾಜಕೀಯ

ನಿತಿನ್ ನಬಿನ್ ಅವರ ನೇತೃತ್ವದ ಬಿಜೆಪಿಯ ಹೊಸ ತಂಡ ರೆಡಿ: ರಾಮ್ ಮಾಧವ್, ಸ್ಮೃತಿ ಇರಾನಿಗೆ ಪ್ರಮುಖ ಹೊಣೆ, ಯುವಮೋರ್ಚಾಕ್ಕೆ ಹೊಸ ಸಾರಥಿ ನೇಮಕ

August 18, 2026
35
Next Post
ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

Discussion about this post

Recent News

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
28
ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

September 6, 2026
11
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

September 6, 2026
ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

September 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d