ಉಳ್ಳಾಲ: ಕೆಂಪು ಕಲ್ಲು ಮತ್ತು ಮರಳಿನ ಪರವಾನಿಗೆಯನ್ನು ಏಕಾ ಏಕಿ ತಡೆಹಿಡಿಯುವ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನ ಕುಂಠಿತ ಗೊಳಿಸುವ ಕಾರ್ಯವನ್ನು ಸರಕಾರ ಮಾಡಿದೆ ಎಂದು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಜಿಲ್ಲೆಯಲ್ಲಿ ತಲೆದೋರಿರುವ ಕೆಂಪು ಕಲ್ಲು ಮತ್ತು ಮರಳು ಅಭಾವದ ಸಮಸ್ಯೆಗಳನ್ನ ಪರಿಹರಿಸದ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ಖಂಡಿಸಿ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟಿನ ಫ್ಲೈಓವರ್ ಕೆಳಗಡೆ ಸೋಮವಾರದಂದು ನಡೆದ ಪ್ರತಿಭಟನೆಯನ್ನುದ್ಧೇಶಿಸಿ ಅವರು ಮಾತನಾಡಿದರು.
ಕೆಂಪು ಕಲ್ಲನ್ನು ಅಧಿಕಾರಿಗಳು ಗಣಿಗಾರಿಕೆಯ ಪಟ್ಟಿಗೆ ಸೇರಿಸಿದ ಪರಿಣಾಮ ಇವತ್ತು ಕೋರೆಗಳಲ್ಲಿ ಯಾವುದೇ ರೀತಿಯ ಕೆಲಸ ನಿರ್ವಹಿಸದಂತಾಗಿದೆ. ಪರಿಣಾಮ 32 ರೂಪಾಯಿಗೆ ಸಿಗುವ ಕೆಂಪು ಕಲ್ಲಿನ ದರ 52 ರೂಪಾಯಿಗೆ ಏರಿಕೆಯಾಗುವಂತಾಗಿದೆ.ಈ ಸಮಸ್ಯೆ ಪರಿಹಾರ ಮಾಡುವ ಯೋಚನೆಯಡಿ ಅಧಿಕಾರಿಗಳಿಗೆ ಒತ್ತಡ ತರುವ ಕೆಲಸವನ್ನು ಅನೇಕ ಬಾರಿ ಮಾಡಲಾಗಿದೆ.ಸರಕಾರ ಮಾತ್ರ ಇದನ್ಯಾವು ದನ್ನೂ ಪರಿಗಣಿಸದೆ ಜನವಿರೋಧಿ ನೀತಿ ಅನುಸರಿಸಿದೆ. ಶೀಘ್ರನೆ ಕೆಂಪು ಕಲ್ಲು ಮತ್ತು ಮರಳುಗಾರಿಕೆಗೆ ಹೇರಿರುವ ಕಾನೂನನ್ನು ಸರಕಾರ ಸಡಿಲಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಮುಖಂಡರಾದ ಟಿ.ಜಿ.ರಾಜಾರಾಮ ಭಟ್, ಸೀತಾರಾಮ ಬಂಗೇರ,ಲಲಿತಾ ಸುಂದರ್ ,ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು ಮಂಡಲ ಉಪಾಧ್ಯಕ್ಷರುಗಳಾದ ರವಿಶಂಕರ್ ಸೋಮೇಶ್ವರ, ಸುರೇಶ್ ಆಳ್ವ ಸಾಂತ್ಯಗುತ್ತು,ಸುಮನಾ ಶೆಟ್ಟಿ,ಪ್ರಧಾನ ಕಾರ್ಯದರ್ಶಿಗಳಾದ, ದಯಾನಂದ ತೊಕ್ಕೊಟ್ಟು, ಕಾರ್ಯದರ್ಶಿ ರಮೇಶ್ ಬೆದ್ರೋಳಿಕೆ, ಮಂಡಲ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚದ ಜಿಲ್ಲಾ ಉಪಾಧ್ಯಕ್ಷರಾದ ನಿಶಾಂತ್ ಪೂಜಾರಿ, ಮಂಡಲ ಅಧ್ಯಕ್ಷರಾದ ಮುರಳಿ ಕೊಣಾಜೆ, ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯಾ ಸತೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಸೋಮೇಶ್ವರ ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ, ಸಪ್ನ ಶೆಟ್ಟಿ, ಹರೀಶ್ ಕುಂಪಲ, ಪ್ರಮುಖರಾದ ಜಯಶ್ರೀ ಕರ್ಕೇರ, ಸತೀಶ್ ಕರ್ಕೇರ, ಮನೋಜ್ ನಾಣ್ಯ, ಹೇಮಂತ್ ಶೆಟ್ಟಿ, ಹರೀಶ್ ಅಂಬ್ಲಮೊಗರು, ಧನಲಕ್ಷ್ಮೀ ಗಟ್ಟಿ, ಜೀವನ್ ಕುಮಾರ್ ಕೆರೆಬೈಲು ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post