• About us
  • Contact us
  • Disclaimer
Tuesday, April 28, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಚಿವ ರಾಮಲಿಂಗ ರೆಡ್ಡಿ ಉಳ್ಳಾಲ ಕಂಬಳಪದವಿನಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ಕೇಂದ್ರ ಉದ್ಘಾಟನೆ

Coastal Times by Coastal Times
July 14, 2025
in ಕರಾವಳಿ
ಸಚಿವ ರಾಮಲಿಂಗ ರೆಡ್ಡಿ ಉಳ್ಳಾಲ ಕಂಬಳಪದವಿನಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ಕೇಂದ್ರ ಉದ್ಘಾಟನೆ
33
VIEWS
WhatsappTelegramShare on FacebookShare on Twitter

ಉಳ್ಳಾಲ, ಜು.13 : ರಾಜ್ಯದಾದ್ಯಂತ ಪ್ರಾದೇಶಿಕ/ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಹಲವೆಡೆ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡರೆ, ಇನ್ನು ಕೆಲವೆಡೆ ಪ್ರಗತಿಯಲ್ಲಿವೆ. ರಾಜ್ಯದ ಸಾರಿಗೆ ಇಲಾಖೆಯ ಪ್ರತಿ ಅಧೀನ‌ ಕಚೇರಿಗೂ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸುವ ಉದ್ದೇಶದಡಿ, ರಾಜ್ಯದ ಏಳು ಕಡೆಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಅವು ಕಾರ್ಯ ನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಮಂಗಳೂರಿನಲ್ಲೂ 7.5 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗಿದ್ದು ದೇಶದಲ್ಲೇ ಅತೀ ಹೆಚ್ಚು ಡ್ರೈವಿಂಗ್ ಟ್ರಾಕ್ ಇರೋ ರಾಜ್ಯ ನಮ್ಮದಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ದಕ್ಷಿಣ ಕನ್ನಡ ಸಾರಿಗೆ ಇಲಾಖೆಯಿಂದ ಪಜೀರು ಗ್ರಾಮದ ಕಂಬಳಪದವಿನಲ್ಲಿ ನಿರ್ಮಾಣಗೊಂಡಿರುವ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥಗಳ ಕೇಂದ್ರವನ್ನು ಭಾನುವಾರ ಅವರು ಉದ್ಘಾಟಿಸಿ ಮಾತನಾಡಿದರು. ಪ್ರಾದೇಶಿಕ/ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮೂವತ್ತಾರು ಕೋಟಿ ವೆಚ್ಚದಲ್ಲಿ ಧಾರವಾಡ ಪೂರ್ವ, ಕೊಪ್ಪಳ, ಚಿಂತಾಮಣಿ, ಶಿರಸಿ, ದಾಂಡೇಲಿ, ಭಾಲ್ಕಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಕಟ್ಟಡ ಕಾಮಗಾರಿ ಸಂಪೂರ್ಣಗೊಂಡಿದೆ. ಬೀದರ್, ಕಲಬುರಗಿ, ಯಾದಗಿರಿ, ಚಂದಾಪುರ, ಕೆಜಿಎಫ್ ಮತ್ತು ಬೆಳಗಾವಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಒಟ್ಟು ನಲ್ವತ್ತೆರಡು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಇಪ್ಪತ್ತೆಂಟು ಕೋಟಿ ರೂಪಾಯಿ ವೆಚ್ಚದಲ್ಲಿ ರಾಣೆ ಬೆನ್ನೂರು, ಗೋಕಾಕ್, ಸಕಲೇಶಪುರ ಕಚೇರಿ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಧುಗಿರಿ ಮತ್ತು ಹೊನ್ನಾವರ ಕಚೇರಿ ಕಟ್ಟಡದ ಕಾಮಗಾರಿಗಳನ್ನ ಶೀಘ್ರ ಪಾರಂಭಿಸಲಾಗುವುದೆಂದರು. ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಎಂಟು ನಗರಕ್ಕೆ ಕೇಂದ್ರದಿಂದ‌ ತಲಾ ನೂರು ಇಲೆಕ್ಟ್ರಿಕ್ ಬಸ್ಸುಗಳು ಮಂಜೂರಾಗಿದ್ದು ಬಸ್ಸುಗಳ ನಿರ್ವಹಣೆಗೆ ನಮಗೆ ಡಿಪೋಗಳ ಅಗತ್ಯವಿದೆ. ಮಂಗಳೂರಿನಲ್ಲಿ ಜಾಗ ಕೊಟ್ಟರೆ ಡಿಪೋಗಳನ್ನ ಇಲಾಖೆಯಿಂದ ನಿರ್ಮಿಸಿಕೊಡುತ್ತೇವೆಂದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ ವಿದ್ಯುನ್ಮಾನ ವಾಹನ ಚಾಲನಾ ಪಥ ನಿರ್ಮಾಣವು ಪರೋಕ್ಷವಾಗಿ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಯೋಜನೆಯಾಗಿದೆ. ಜಿಲ್ಲೆಯ ಯಾವುದೇ ಮೂಲೆಯ ಜನರೂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಮುಂದೆ ಇಲ್ಲಿಗೆ ಬರಲೇಬೇಕು. ಜನರು ಇಲ್ಲಿಗೆ ಬರೋದರಿಂದ ಆರ್ಥಿಕ ಚಲನವಲನ ಹೆಚ್ಚಾಗಿ ಹೊಸ ಉದ್ಯಮಗಳೂ ಹುಟ್ಟಿಕೊಳ್ಳುತ್ತವೆ. ಹೊಸ ಕೇಂದ್ರದಲ್ಲಿ ಉದ್ಯೋಗಾವಕಾಶ ಇದ್ದರೆ ಅಧಿಕಾರಿಗಳು ಮೊದಲಿಗೆ ಊರವರನ್ನ ಪರಿಗಣಿಸಬೇಕು. ಮೊನ್ನೆಯಷ್ಟೇ ಉಳ್ಳಾಲದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಗೃಹ ಸಚಿವರಿಂದ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾರಿ ಭವನ ಮತ್ತು ಅಬ್ಬಕ್ಕ ಭವನ ನಿರ್ಮಾಣಕ್ಕೂ ಶೀಘ್ರದಲ್ಲೇ ಚಾಲನೆ ನೀಡಲಾಗುವುದೆಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪಡುಬಿದ್ರಿ: ಪಾದೆಬೆಟ್ಟು ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

Next Post

ಉಳ್ಳಾಲ: ಕೆಂಪು ಕಲ್ಲು, ಮರಳು ಸಮಸ್ಯೆ: ಬಿಜೆಪಿ ಪ್ರತಿಭಟನೆ

Related Posts

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ
ಕರಾವಳಿ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
60
ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ
ಕರಾವಳಿ

ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ

April 22, 2026
63
Next Post
ಉಳ್ಳಾಲ: ಕೆಂಪು ಕಲ್ಲು, ಮರಳು ಸಮಸ್ಯೆ: ಬಿಜೆಪಿ ಪ್ರತಿಭಟನೆ

ಉಳ್ಳಾಲ: ಕೆಂಪು ಕಲ್ಲು, ಮರಳು ಸಮಸ್ಯೆ: ಬಿಜೆಪಿ ಪ್ರತಿಭಟನೆ

Discussion about this post

Recent News

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
159
ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

April 26, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

April 26, 2026
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d