ಮೂಡುಬಿದಿರೆ: ಸೋನಿ ಟಿವಿಯ ಇಂಡಿಯನ್ ಐಡೋಲ್ ಗಾಯನ ರಿಯಾಲಿಟಿ ಶೋ ಸ್ಪರ್ಧೆಯ ಅಂತಿಮ ಕಣಕ್ಕೆ ಮೂಡುಬಿದಿರೆಯ ಕಡಲಕೆರೆ ಪರಿಸರದ ನಿಹಾಲ್ ತಾವ್ರೋ ಕೂಡ ಆಯ್ಕೆಯಾಗಿದ್ದಾರೆ. ಒಟ್ಟು 6 ಮಂದಿ ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ. ಈ ಅವಕಾಶ ಪಡೆದ ಮೊದಲ ಕನ್ನಡಿಗ ತಾವ್ರೋ ಆಗಿದ್ದಾರೆ.
ಸೋನಿ ಟಿ.ವಿಯಲ್ಲಿ ಆಗಸ್ಟ್ 15ರಂದು ನಡೆಯಲಿರುವ ಫೈನಲ್ ಫಲಿತಾಂಶದ ಬಗ್ಗೆ ಕುತೂಹಲ ಮೂಡಿಸಿದೆ. ಈ ಫೈನಲ್ ಕಾರ್ಯಕ್ರಮದಲ್ಲಿ ಹಲವಾರು ಬಾಲಿವುಡ್ ನಟರು, ಗಾಯಕರು ಭಾಗವಹಿಸಲಿದ್ದಾರೆ.
ನಿಹಾಲ್ ತಾವ್ರೊ ಅವರು ಮೂಡುಬಿದಿರೆ ಅಲಂಗಾರು ಮೂಲದ ಬ್ಯಾಂಕ್ ಉದ್ಯೋಗಿ ಹೆರಾಲ್ಡ್ ತಾವ್ರೊ ಹಾಗೂ ಶಿಕ್ಷಕಿ ಪ್ರೆಸಿಲ್ಲಾ ದಂಪತಿಯ ಪುತ್ರ.
ಮೂರನೇ ತರಗತಿಯಲ್ಲಿರುವಾಗಲೇ ಆಲ್ಬಂ ಸಾಂಗ್ ಒಂದಕ್ಕೆ ಯಾವುದೇ ತರಬೇತಿ, ರಿಹರ್ಸಲ್ ಇಲ್ಲದೆ ಹಾಡಿದ್ದ ನಿಹಾಲ್ ಅಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿ. ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿಯಲ್ಲದೇ ಹಲವು ಟಿ ವಿ ಷೋಗಳಲ್ಲಿ ಭಾಗವಹಿಸಿದವರು. ನಾದಬ್ರಹ್ಮ ಹಂಸಲೇಖ ಅವರು “ನಿಹಾಲ್ ತಾವ್ರೋ ಅಲ್ಲಪ್ಪಾ ನಿಹಾಲ್ ದೇವ್ರು’ ಎಂದಿದ್ದರೆ, ಗಾಯಕ ವಿಜಯ ಪ್ರಕಾಶ್ “ನಿಹಾಲ್ ವಿಶ್ವದ ಗಮನ ಸೆಳೆಯುವ ಗಾಯಕನಾಗುತ್ತಾನೆ,’ ಎಂದು ಝೀ ಕನ್ನಡದ ಷೋದಲ್ಲಿ ಭವಿಷ್ಯ ನುಡಿದಿದ್ದರು..
Discover more from Coastal Times Kannada
Subscribe to get the latest posts sent to your email.
Discussion about this post