ಮಂಗಳೂರು: ನಗರದ ಯೆಯ್ಯಾಡಿ ಎಂಬಲ್ಲಿ ನಡೆದಿದೆ. ಮಹಿಳೆಯರಿಬ್ಬರ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯರ ನಡೆಗೆ ದೈವಾರಾಧಕರು ಕಿಡಿಕಾರಿದ್ದಾರೆ. ‘ಆಟಿಡೊಂಜಿ ದಿನ’ ಹೆಸರಲ್ಲಿ ತುಳುವರ ಆಟಿ(ಆಷಾಢ) ತಿಂಗಳನ್ನು ನೆನಪಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಭರ್ಜರಿ ಊಟದ ಜೊತೆಗೆ, ಮನರಂಜನಾ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದು ಜನಸಾಮಾನ್ಯರೆಲ್ಲ ಪಾಲ್ಗೊಳ್ಳುತ್ತಿದ್ದಾರೆ. ಮಂಗಳೂರಿನ ಯೆಯ್ಯಾಡಿಯಲ್ಲಿ ಆಯೋಜಿಸಿದ್ದ ‘ಆಟಿದ ನೆಂಪು’ ಎನ್ನುವ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ದೈವದ ಪಾತ್ರಧಾರಿಯ ರೀತಿ ಕುಣಿದಿದ್ದು ಅದರ ವಿಡಿಯೋ ವೈರಲ್ ಆಗಿದ್ದಲ್ಲದೆ, ಈ ರೀತಿಯ ವರ್ತನೆ ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ‘ವಾ ಪೊರ್ಲುಯಾ’ ಹಾಡನ್ನು ಹಾಡಿದ್ದು, ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ತಾಳಕ್ಕೆ ತಕ್ಕಂತೆ ದೈವದ ಕುಣಿತದ ಮಾದರಿಯನ್ನು ಪ್ರದರ್ಶನ ಮಾಡಿದ್ದಾರೆ. ಮಹಿಳೆ ದೈವ ಪಾತ್ರಧಾರಿಯ ರೀತಿ ಕುಣಿದಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ- ವಿರೋಧ ಅಭಿಪ್ರಾಯ ಕೇಳಿಬಂದಿದೆ. ತುಳುನಾಡು ಪರ ಹೋರಾಟಗಾರರು ಈ ರೀತಿ ಕುಣಿದಿರುವುದು ದೈವ ನರ್ತನಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಳುನಾಡು ಹೋರಾಟಗಾರಲ್ಲಿ ಒಬ್ಬರಾದ ರೋಶನ್ ಎಂಬವರು, ಕಾರ್ಯಕ್ರಮ ಆಯೋಜಕರಿಗೆ ಮತ್ತು ಆ ಮಹಿಳೆಗೆ ಕರೆ ಮಾಡಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆ ದೈವಸ್ಥಾನದ ಎದುರು ನಿಂತು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post