ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಅಂಗಡಿಯೊಂದರ ಶಟರ್ನಲ್ಲಿ ಯಾರೋ ಕಿಡಿಗೇಡಿಗಳು ನೇಮ್ ಜಿಹಾದ್ ಎಂಬ ಬರಹವನ್ನು ಹಾಕಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೈನಾಡು ಎಂಬಲ್ಲಿ ಇದೇ ರೀತಿ ಆತಂಕಕಾರಿ ಬರವಣಿಗೆಯೊಂದು ಕಂಡು ಬಂದಿತ್ತು. ಬಳಿಕ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಇದುವರೆಗೂ ಖದೀಮರ ಕುರಿತು ಯಾವೊಂದು ಸುಳಿವು ಸಿಕ್ಕಿಲ್ಲ.
ಈ ಬೆನ್ನಲ್ಲೇ ಬಂಟ್ವಾಳ ತಾಲೂಕಿನ ವಿಟ್ಲದ ಪೇಟೆಯ ದೀಪಕ್ ವಾಚ್ ವರ್ಕ್ಸ್ನ ಶಟರ್ ಮೇಲೆ ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ನೇಮ್ ಜಿಹಾದ್ ಎಂದು ಬರೆದಿದ್ದು, ಮುಂಜಾನೆ ಅಂಗಡಿ ಮಾಲೀಕ ಬಾಗಿಲು ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅಬ್ದುಲ್ ಎಂಬುವರಿಗೆ ಸೇರಿದ ಅಂಗಡಿ ಇದಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡುಬಂದಿದೆ ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post