ಮಂಗಳೂರು, ಅ.13 : ಬಿಜೈ ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ಮಹಿಳಾ ಅಧಿಕಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯೆಯ್ಯಾಡಿಯಲ್ಲಿ ನಡೆದಿದೆ. ಪದ್ಮಾವತಿ(52) ಮೃತ ಮಹಿಳೆಯಾಗಿದ್ದು ಯೆಯ್ಯಾಡಿಯಲ್ಲಿ ಇತ್ತೀಚೆಗಷ್ಟೇ ಖರೀದಿಸಿದ್ದ ಫ್ಲ್ಯಾಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮೂಲತಃ ಶಕ್ತಿನಗರ ನಿವಾಸಿಯಾಗಿದ್ದ ಪದ್ಮಾವತಿಯವರು ಇತ್ತೀಚೆಗಷ್ಟೆಶರ್ಬತ್ ಕಟ್ಟೆ ಬಳಿ ಹೊಸ ಪ್ಲ್ಯಾಟ್ ಖರೀದಿಸಿದ್ದರು. ಅದರ ಗೃಹಪ್ರವೇಶ ಕಾರ್ಯಕ್ರಮ ಕಳೆದ ಸೋಮವಾರ ನಡೆದಿತ್ತು. ಬುಧವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪದ್ಮಾವತಿ ಅವರು ಬುಧವಾರ ಬೆಳಗ್ಗೆ ಬ್ಯಾಂಕಿನ ಕೀಗಳನ್ನು ಗಂಡನ ಬಳಿ ಕಳುಹಿಸಿ ಕೊಟ್ಟಿದ್ದರು. ಅಲ್ಲದೆ, ಮನೆಯಲ್ಲಿ ನೈಲಾನ್ ದಾರದ ಬಗ್ಗೆಯೂ ವಿಚಾರಿಸಿದ್ದರು. ಅವರ ತಂಗಿ ಫೋನ್ ಕರೆ ಮಾಡಿದಾಗ, ಸ್ವೀಕರಿಸದ್ದರಿಂದ ಪರಿಶೀಲನೆ ನಡೆಸಿದಾಗ ಫ್ಲಾಟಿನಲ್ಲಿ ಫ್ಯಾನಿಗೆ ನೇಣು ಹಾಕ್ಕೊಂಡಿದ್ದು ಕಂಡುಬಂದಿದೆ. ಈ ಬಗ್ಗೆ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬ್ಯಾಂಕಿನ ಹಿರಿಯ ಅಧಿಕಾರಿಗಳ ಕಿರುಕುಳವೇ ಪದ್ಮಾವತಿ ಸಾವಿಗೆ ಕಾರಣ ಎಂಬ ಮಾತು ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ. ಡೆತ್ ನೋಟ್ ಸಿಕ್ಕಿದೆ ಎನ್ನಲಾಗುತ್ತಿದ್ದು ಪೊಲೀಸರು ಈ ಬಗ್ಗೆ ಮಾಹಿತಿ ನೀಡಿಲ್ಲ.
Discussion about this post