ಮಂಗಳೂರು ನ.14: ಶ್ರೀ ವೀರನಾರಾಯಣ ದೇವಸ್ಥಾನ, ಪದವು ಗ್ರಾಮ, ಕುಲಶೇಖರದಲ್ಲಿ ಪ್ರಸ್ತುತ ಆಡಳಿತ ನಡೆಸುವ ಸಮಿತಿಯು ಪೋರ್ಜರಿ ದಾಖಲೆಗಳ ಮೂಲಕ ದೇವಳದ, ಸಮಸ್ತ ಆಸ್ತಿಯನ್ನು ಕಬಳಿಸಿರುವ ಮತ್ತು ಸಾರ್ವಜನಿಕ ದೇವಸ್ಥಾನವನ್ನು ಒಂದು ಸಮುದಾಯದ ಆಸ್ತಿ ಎಂದು ತಪ್ಪು ಸಂದೇಶವನ್ನು ನೀಡಿ ಭಕ್ತರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಪರಿಸರದ ಭಕ್ತಾಧಿಗಳು ಮತ್ತು ಸುಮಾರು 32 ಸಮಿತಿಗಳು ಸೇರಿ ದೇವಸ್ಥಾನದ ಸಮೀಪ ಪ್ರತಿಭಟನೆ ನಡೆಸಿತು.
ಶ್ರೀ ವೀರನಾರಾಯಣ ಸದ್ಭಕ್ತ ಸಮಿತಿ ಕುಲಶೇಖರ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನು ಸಮಿತಿಯ ಗೌರವಾಧ್ಯಕ್ಷ ಪಿ. ತ್ಯಾಂಪಣ್ಣ ಉದ್ಘಾಟಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ವಿಶ್ವಜೀತ್ ದೇವಸ್ಥಾನದ, ಸೇವಾ ರಶೀದಿ, ದೇವಸ್ಥಾನದ ನಾಮಫಲಕಗಳಲ್ಲಿ, ಆಮಂತ್ರಣ ಪತ್ರಿಕೆಗಳಲ್ಲಿ ಒಂದು ಸಮಾಜದ ಆಡಳಿತಕ್ಕೆ ಒಳಪಟ್ಟಿದೆಯೆಂದು ಪ್ರದರ್ಶಿಸುವವರ ಬಗ್ಗೆ ತೀವ್ರವಾಗಿ ಖಂಡಿಸುತ್ತೇವೆ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳನ್ನು ನಿಲ್ಲಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಐತಿಹಾಸಿಕ ಹಿನ್ನಲೆಯಲ್ಲಿ ಕುಲಶೇಖರ ರಾಜ ನಿಂದ ಸ್ಥಾಪಿಸಲ್ಪಟ್ಟ ದೇವಳದಲ್ಲಿ ಅವರ ಸಂಬಂಧಪಟ್ಟ ಶಾಸನಗಳು ಲಭ್ಯವಿದ್ದು ಈಗಾಗಲೇ ಹಿಂದೂ ದೇವಸ್ಥಾನವು ಒಂದು ಸಮಾಜಕ್ಕೆ ಪರಿವರ್ತನೆಯಾಗುವುದನ್ನು ನಾವೆಲ್ಲರೂ ಸೇರಿ ಪ್ರತಿಭಟಿಸಬೇಕಾದುದು ಅನಿವಾರ್ಯವಾಗಿರುತ್ತದೆ. ದೇವಸ್ಥಾನದ ಆಡಳಿತವು ಊರಿನ ಎಲ್ಲಾ ಹಿಂದೂ ಸಮಾಜ ಬಾಂಧವರಿಗೆ ಒಳಪಟ್ಟಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿಯನ್ನು ತಕ್ಷಣವೇ ವಿಸರ್ಜಿಸಬೇಕು. ಹಿಂದೂ ಸಮಾಜದ ಎಲ್ಲಾ ವರ್ಗದ ಹಿರಿಯರನ್ನು ಸೇರಿಸಿಕೊಂಡು ಹೊಸದಾಗಿ ಆಡಳಿತ ಮಂಡಳಿಯನ್ನು ರಚಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಮುಂದಾಗಬೇಕು. ಕಾಯ್ದೆ 23 ರನ್ವಯ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಗೊಳಿಸುವ ಮೂಲಕ ಹಿಂದೂ ಸಮಾಜದ ಎಲ್ಲಾ ವರ್ಗಗಳಿಗೂ ಸಾಮಾಜಿಕ ಹಕ್ಕನ್ನು ನೀಡಿ ಎಂದು ಆಗ್ರಹಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಪ್ರಕಾಶ್ಚಂದ್ರ ಮಾತನಾಡಿ ಶ್ರೀ ವೀರನಾರಾಯಣ ದೇವಸ್ಥಾನಕ್ಕೆ ತನ್ನದೇ ಆದ ಅಸ್ತಿತ್ವವಿದ್ದು ಸುಮಾರು 1200 ವರ್ಷಗಳ ಇತಿಹಾಸವಿದೆ ಪ್ರಸ್ತುತ ದೇವಸ್ಥಾನವು ಒಂದು ವರ್ಗದ ದೇವಸ್ಥಾನವಾಗಿ ಪರಿವರ್ತಿಸಲ್ಪಡುತ್ತಿರುವುದು ಬಹಳ ಖೇದಕರ, ದೇವಸ್ಥಾನವು ಹಿಂದೂ ಸಮಾಜದ ಸೊತ್ತು ಅದು ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಅದರಲ್ಲೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ದೇವಳದ ಆಸ್ತಿಯನ್ನು ಸ್ವಾದೀನ ಪಡಿಸಿರುವುದು ಅಪರಾಧ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಸ್ಕರ ಪ್ರಭು, ರವಿ ಕುಮಾರ್ ಭಟ್ ಕಕ್ಕೆ ಬೆಟ್ಟು, ಶ್ರೀ ವೀರನಾರಾಯಣ ದೇವಸ್ಥಾನ ದ ಮಾಜಿ ಮೊಕ್ತೇಸರರಾದ ಸಚ್ಚಿದಾನಂದ, ಸತ್ಯನಾರಾಯಣ ಮರಾಠೆ, ದೇವಳದ ಪರಿಸರದ ಭಕ್ತಾಧಿಗಳು, ಪದವು ಗ್ರಾಮದ ಸಾರ್ವಜನಿಕ ಸಂಘ ಸಂಸ್ಥೆಗಳು ಹಾಗೂ ಶ್ರೀ ದೇವರ ಕಟ್ಟೆ ಬಲಿ ಸವಾರಿ ಪೂಜಾ ಸಮಿತಿಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಏಕನಾಥ್ ಕಟ್ಟೆಫ್ರೆಂಡ್ಸ್ ,ಪುಷ್ಪರಾಜ್, ತಾರನಾಥ್, ಶಿವಾನಂದ ಕೊಟ್ಯಾನ್ ಪ್ರಕಾಶ್ ಪೂಜಾರಿ, ಗಣೇಶ್ ಆಚಾರ್ಯ ಹಿಂ ಸೇ ಸ, ಗಣೇಶ್ ಹೆಬ್ಬಾರ್, ಜಯರಾಮ ಪೂಜಾರಿ, ರಮೇಶ್ ಕೋಟಿಮುರ, ಸುಧಾ ಅನಂತಪ್ರಭು, ರತ್ನಾವತಿ ಪ್ರಭು, ಹರಿಣಿ, ಲಲಿತಾ, ಅನುರಾಧ ಪ್ರಭು, ಗಣೇಶ್ ಪ್ರಭು, ಪ್ರಕಾಶ್ ಪ್ರಭು, ಮೋಹನ್ ಪ್ರಭು ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post