• About us
  • Contact us
  • Disclaimer
Friday, September 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ನಕಲಿ ಜಾಮೀನಿಗೆ 5 ಸಾವಿರ! ದಂಧೆ ಬಯಲಿಗೆಳೆದ ಪೊಲೀಸರು, 13 ಮಂದಿ ಸೆರೆ

Coastal Times by Coastal Times
December 14, 2024
in ಕ್ರೈಮ್ ನ್ಯೂಸ್
ನಕಲಿ ಜಾಮೀನಿಗೆ 5 ಸಾವಿರ! ದಂಧೆ ಬಯಲಿಗೆಳೆದ ಪೊಲೀಸರು, 13 ಮಂದಿ ಸೆರೆ
70
VIEWS
WhatsappTelegramShare on FacebookShare on Twitter

ಬೆಂಗಳೂರು: ರಾಜಧಾನಿಯಲ್ಲಿ ಜಾಮೀನು ಮಾಫಿಯಾ ಸಕ್ರಿಯವಾಗಿದೆ. ನಕಲಿ ದಾಖಲಾತಿ ಸಲ್ಲಿಸಿ ಆರೋಪಿಗಳಿಗೆ ಜಾಮೀನು ನೀಡುತ್ತಿದ್ದ 13 ಮಂದಿ ನಕಲಿ ಜಾಮೀನುದಾರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಮ್ಯಾಜಿಸ್ಟ್ರೇಟ್, ಸಿಟಿ ಸಿವಿಲ್ ಸೇರಿದಂತೆ ಇನ್ನಿತರ ನ್ಯಾಯಾಲಯಗಳಿಗೆ ನಕಲಿ ದಾಖಲಾತಿ ನೀಡಿ ಆರೋಪಿಗಳಿಗೆ ಜಾಮೀನುದಾರರಾಗಿದ್ದ ಮಂಜುನಾಥ್, ಆನಂದ್, ಇಂದ್ರೇಶ್, ದೊಡ್ಡಯ್ಯ, ಚಂದ್ರಶೇಖರ್, ಸಂತೋಷ್ ಕುಮಾರ್, ದಾದಾ ಹಯಾತ್ ಖಲಂದರ್, ಸ್ವರೂಪ್, ಮನೋಜ್, ಆನಂದ್ ಕುಮಾರ್, ಕೆಂಪೇಗೌಡ ಹಾಗೂ ವಿನಾಯಕ್ ಎಂಬವರನ್ನು ಬಂಧಿಸಲಾಗಿದೆ.

ಇವರಿಂದ 139 ವಿವಿಧ ಹೆಸರುಗಳು ಹಾಗೂ ಆಧಾರ್ ಕಾರ್ಡ್​ಗಳು, 43 ಪಡಿತರ ಚೀಟಿ, 16 ಪ್ಯಾನ್ ಕಾರ್ಡ್​, ವಿವಿಧ ಹೆಸರಿನ 35 ಜಮೀನಿನ ಪಹಣಿ ಪತ್ರ, ಮ್ಯೂಟೇಷನ್ ಪ್ರತಿಗಳು ಹಾಗೂ 13 ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದು, ಶೋಧ ಕಾರ್ಯ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಗರದ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಈ ಆರೋಪಿಗಳು ನಕಲಿ ದಾಖಲಾತಿ ಇಟ್ಟುಕೊಂಡು ಶ್ಯೂರಿಟಿ ನೀಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ನಕಲಿ ಜಾಮೀನು ಮಾಫಿಯಾ ಬೆಳಕಿಗೆ ಬಂದಿದೆ.

ಆರೋಪಿ ಮಂಜುನಾಥ್ ಸೇರಿ ಇನ್ನಿತರರು ಹಲವು ವರ್ಷಗಳಿಂದ ದಂಧೆಯಲ್ಲಿ ಭಾಗಿಯಾಗಿದ್ದರು. ಇದುವರೆಗೆ ಸುಮಾರು 40ಕ್ಕಿಂತ ಹೆಚ್ಚು ಆರೋಪಿಗಳಿಗೆ ನಕಲಿ ಜಾಮೀನು ನೀಡಿರುವುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಧಿನಗರ ಕಚೇರಿಯಲ್ಲಿ ವ್ಯವಸ್ಥಿತವಾಗಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ಅಸಲಿ ಆಸ್ತಿ ಮಾಲೀಕರ ವಿವರವನ್ನು ಕಂದಾಯ ಇಲಾಖೆಯ ಭೂಮಿ ಜಾಲತಾಣದಲ್ಲಿ ಪಡೆಯುತ್ತಿದ್ದರು. ಸರ್ವೇ ನಂಬರ್, ಮನೆ ವಿಳಾಸ ಸೇರಿದಂತೆ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದರು. ನಕಲಿ ಆಧಾರ್ ಕಾರ್ಡ್​ನಲ್ಲಿ ಆರೋಪಿಯ ಭಾವಚಿತ್ರ, ನಕಲಿ ಸಂಖ್ಯೆ ಹಾಗೂ ಅಸಲಿ ಮಾಲೀಕರ ವಿಳಾಸ ಹಾಕುತ್ತಿದ್ದರು. ಅಲ್ಲದೇ, ಪಹಣಿ ಪತ್ರವನ್ನೂ ಇದೇ ಮಾದರಿಯಲ್ಲಿ ನಕಲಿಸುತ್ತಿದ್ದರು. ಬ್ಯಾಂಕ್ ಲೋನ್ ತೆಗೆದುಕೊಳ್ಳದ ಆಸ್ತಿ ಮಾಲೀಕರ ಪಹಣಿ ಪತ್ರವನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಒಂದು ನಕಲಿ ಜಾಮೀನಿಗೆ 5 ಸಾವಿರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದಾಗ ಶ್ಯೂರಿಟಿ ಒದಗಿಸುವುದು ಕಡ್ಡಾಯ. ಆರೋಪಿಗಳಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬರದಿದ್ದಾಗ ಇದನ್ನರಿತು ಸಂಪರ್ಕಿಸುತ್ತಿದ್ದ ಆರೋಪಿಗಳು ನ್ಯಾಯಾಲಯಕ್ಕೆ ನಕಲಿ ದಾಖಲಾತಿ ಸಲ್ಲಿಸಿ ವಂಚಿಸುತ್ತಿದ್ದರು. ಒಂದು ಫೇಕ್ ಶ್ಯೂರಿಟಿಗೆ ಸುಮಾರು 5 ಸಾವಿರ ರೂ ಪಡೆಯುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿದ್ದ ಸಿಮೆಂಟ್ ಲಾರಿ, 8ನೇ ತರಗತಿಯ ನಾಲ್ವರು ಯುವತಿಯರ ಬಲಿ

Next Post

ತಬಲಾ ಮಾಂತ್ರಿಕ ಜಾಕಿರ್​ ಹುಸೇನ್ ಇನ್ನಿಲ್ಲ ! ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನ

Related Posts

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು
ಕ್ರೈಮ್ ನ್ಯೂಸ್

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, 1.80 ಲಕ್ಷ ನಗದು ಕಳವು

September 16, 2026
49
ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ
ಕ್ರೈಮ್ ನ್ಯೂಸ್

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
50
Next Post
ತಬಲಾ ಮಾಂತ್ರಿಕ ಜಾಕಿರ್​ ಹುಸೇನ್ ಇನ್ನಿಲ್ಲ ! ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನ

ತಬಲಾ ಮಾಂತ್ರಿಕ ಜಾಕಿರ್​ ಹುಸೇನ್ ಇನ್ನಿಲ್ಲ ! ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನ

Discussion about this post

Recent News

ಬಡವರರಿಗಾಗಿ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ: ಸಚಿವ ಕೆ.ಹೆಚ್. ಮುನಿಯಪ್ಪ

ಬಡವರರಿಗಾಗಿ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ: ಸಚಿವ ಕೆ.ಹೆಚ್. ಮುನಿಯಪ್ಪ

September 18, 2026
4
ಕುತ್ತಾರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ; ಮೂವರಿಗೆ ಜೀವ ಕೊಟ್ಟ ವರ್ಷಿತ್ ಕುಲಾಲ್, ವಿವಿಧ ಆಸ್ಪತ್ರೆಗಳಿಗೆ ಅಂಗಾಂಗಳ ರವಾನೆ

ಕುತ್ತಾರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ; ಮೂವರಿಗೆ ಜೀವ ಕೊಟ್ಟ ವರ್ಷಿತ್ ಕುಲಾಲ್, ವಿವಿಧ ಆಸ್ಪತ್ರೆಗಳಿಗೆ ಅಂಗಾಂಗಳ ರವಾನೆ

September 17, 2026
45
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಡವರರಿಗಾಗಿ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ: ಸಚಿವ ಕೆ.ಹೆಚ್. ಮುನಿಯಪ್ಪ

ಬಡವರರಿಗಾಗಿ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ: ಸಚಿವ ಕೆ.ಹೆಚ್. ಮುನಿಯಪ್ಪ

September 18, 2026
ಕುತ್ತಾರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ; ಮೂವರಿಗೆ ಜೀವ ಕೊಟ್ಟ ವರ್ಷಿತ್ ಕುಲಾಲ್, ವಿವಿಧ ಆಸ್ಪತ್ರೆಗಳಿಗೆ ಅಂಗಾಂಗಳ ರವಾನೆ

ಕುತ್ತಾರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯ; ಮೂವರಿಗೆ ಜೀವ ಕೊಟ್ಟ ವರ್ಷಿತ್ ಕುಲಾಲ್, ವಿವಿಧ ಆಸ್ಪತ್ರೆಗಳಿಗೆ ಅಂಗಾಂಗಳ ರವಾನೆ

September 17, 2026
ಕೊಂಕಣಿ ಸಮುದಾಯಗಳನ್ನು ಒಗ್ಗೂಡಿಸಲು ‘ಕೊಂಕನಿಜ್’ ವೇದಿಕೆ ಆರಂಭ

ಕೊಂಕಣಿ ಸಮುದಾಯಗಳನ್ನು ಒಗ್ಗೂಡಿಸಲು ‘ಕೊಂಕನಿಜ್’ ವೇದಿಕೆ ಆರಂಭ

September 17, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d