• About us
  • Contact us
  • Disclaimer
Friday, April 3, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

Coastal Times by Coastal Times
February 15, 2026
in ಕ್ರೈಮ್ ನ್ಯೂಸ್
ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು
113
VIEWS
WhatsappTelegramShare on FacebookShare on Twitter

ಮಂಗಳೂರು, ಫೆ 15: ಮ್ಯಾಟ್ರಿಮನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ನಂಬಿಸಿ ಹಣ ಪಡೆದು ವ್ಯಕ್ತಿಯೋರ್ವ ವಂಚಿಸಿರುವ ಘಟನೆ ಮಾಸುವ ಮುನ್ನವೇ ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಮತ್ತೊಬ್ಬನ ಕಹಾನಿ ಬಯಲಾಗಿದೆ. ಈಗಾಗಲೇ ಮೂರ್ನಾಲ್ಕು ಮದುವೆಯಾಗಿ ವಂಚಿಸಿದ್ದಾನೆಂದು ಸ್ವತಃ ಪತ್ನಿಯೇ ಬಟಾ ಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.

ಸಂತ್ರಸ್ತೆ ಪ್ರೀತಿಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ಮನೀಶ್​​, ಬ್ಲ್ಯಾಕ್​​ಮೇಲ್​​ ಮಾಡಿ ಆಕೆಯನ್ನು ಮದುವೆ ಆಗಿದ್ದ ಎಂದು ದೂರಲಾಗಿದೆ. ಮದುವೆಗೆ ಮೂರು ದಿನ ಇರುವಾಗ ಹಣ ಇಲ್ಲ ಎಂದು ಈತ ಆತ್ಮಹತ್ಯೆ ನಾಟಕವಾಡಿದ್ದ. ಹೀಗಾಗಿ ಮದುವೆಯ ಎಲ್ಲ ಖರ್ಚನ್ನು ತಾವೇ ನೋಡಿಕೊಂಡು ಪ್ರೀತಿ ಪೋಷಕರು ವಿವಾಹ ಕಾರ್ಯ ನಡೆಸಿದ್ದರು. ಮದುವೆಯಾದ ಬಳಿಕ ಎರಡು ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್​​ಗೆ ಕೆಲಸ ಕೊಡಿಸಲು ಕೂಡ ಪ್ರೀತಿ ಸಹಾಯ ಮಾಡಿದ್ದರು. ಆದ್ರೆ ದುಬೈಗೆ ಹೋದ ಈತ ಬಹರೇನ್​​ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ. ವಿಚಾರ ತಿಳಿದು ಈತನ ಇತಿಹಾಸವನ್ನು ಪ್ರೀತಿ ಕೆದಕಿದ್ದು, ಈ ವೇಳೆ ಮನೀಶ್​​ನ ನಿಜರೂಪ ಬಯಲಾಗಿದೆ.

ಮದುವೆಗೆ ಮೂರು ದಿನ ಇರುವಾಗ ಆತ್ಮಹತ್ಯೆ ಯತ್ನದ ನಾಟಕವಾಡಿದ್ದ. ಮದುವೆಗೆ ಹಣ ಇಲ್ಲ, ನೀವೇ ಏನಾದ್ರೂ ಮಾಡಬೇಕೆಂದು ಕಳ್ಳಾಟ ತೋರಿಸಿದ್ದ. ಆಬಳಿಕ ಮದುವೆಯ ಎಲ್ಲಾ ಖರ್ಚನ್ನು ನಮ್ಮ ಪೋಷಕರೇ ಹಾಕಿ ಮದುವೆ ಮಾಡಿಸಿದ್ದರು. ನನ್ನ ತಂದೆ ಪೈಂಟರ್ ಆಗಿದ್ದು ಕಷ್ಟಪಟ್ಟು ದುಡಿದ ಹಣದಲ್ಲಿ ಮದುವೆ ಮಾಡಿಸಿದ್ದರು‌. ಆದರೆ ಆತನಿಗೆ ಹಣದ ಬೆಲೆ ಗೊತ್ತಿಲ್ಲ. ಮದುವೆ ಬಳಿಕ ಎರಡು ಲಕ್ಷ ಕೊಟ್ಟು ವಿದೇಶದಲ್ಲಿ ಕೆಲಸ ಕೊಡಿಸುವುದಕ್ಕೂ ಸಹಾಯ ಮಾಡಿದ್ದೆ. ಆದರೆ, ದುಬೈಗೆ ಹೋದ ಬಳಿಕ ಬದಲಾಗಿದ್ದು ಅಲ್ಲಿ ಬಹರೇನ್ ನಲ್ಲಿರುವ ಮಂಗಳೂರು ಮೂಲದ ಮಹಿಳೆಯ ಜೊತೆ ಪ್ರೀತಿ ನಾಟಕ ಶುರು ಮಾಡಿದ್ದಾನೆ. ಇದರ ಬಗ್ಗೆ ತಿಳಿಯುತ್ತಲೇ ಮನೀಶ್ ಇತಿಹಾಸ ಕೆದಕಿದಾಗ, ಮದುವೆಗೂ ಮುನ್ನ ಈತ ಹಲವು ಯುವತಿಯರ ಜೊತೆ ಆಫೇರ್ ಹೊಂದಿದ್ದುದು ಬಯಲಾಗಿದೆ. ಅವರೆಲ್ಲರ ಬಳಿಯೂ ಹಣ ಪಡೆದು ಮೋಸ ಮಾಡಿದ್ದಾಗಿ ಯುವತಿ ಮಾಹಿತಿ ಸಂಗ್ರಹಿಸಿದ್ದಾಳೆ.

ಹಣ ವಾಪಸ್ ಕೇಳಿದ್ರೆ ಎಲ್ಲಾ ಯುವತಿಯರ ಬಳಿ ಒಂದೇ ರೀತಿಯ ನಾಟಕ ಮಾಡ್ತಿದ್ದ. ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡುತ್ತಿದ್ದ. ಆನಂತರ, ಟಿಕ್ ಟಾಕ್ ಮಾಡಿ ಹೊಸ ಯುವತಿಯರಿಗೆ ಗಾಳ ಹಾಕಿ ಬಲೆಗೆ ಹಾಕುತ್ತಿದ್ದ ಎಂದು ಆತನ ಪತ್ನಿ ಈಗ ಆರೋಪ ಮಾಡಿದ್ದಾಳೆ. ಇಂತಹ ಗಂಡ ತನಗೆಂದೂ ಬೇಡ, ಮತ್ತೆ ಯಾರೊಬ್ಬ ಯುವತಿಯೂ ಈತನಿಂದ ಮೋಸ ಹೋಗಬಾರದು ಎಂದು ಹೇಳಿ ಪೊಲೀಸ್ ದೂರು ನೀಡುತ್ತಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದ ಅತೀ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್ !

Next Post

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

Related Posts

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು
ಕ್ರೈಮ್ ನ್ಯೂಸ್

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

March 31, 2026
104
ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ
ಕ್ರೈಮ್ ನ್ಯೂಸ್

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

March 29, 2026
64
Next Post
T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

Discussion about this post

Recent News

ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯು 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ ಏಪ್ರಿಲ್ 5 ಭಾನುವಾರ ನಡೆಯಲಿದೆ

ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯು 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ ಏಪ್ರಿಲ್ 5 ಭಾನುವಾರ ನಡೆಯಲಿದೆ

April 2, 2026
24
ಬಂಟ್ವಾಳ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ; ಹತ್ತಡಿ ದೂರಕ್ಕೆ ಹಾರಿ ಬಿದ್ದ ಮಹಿಳೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಂಟ್ವಾಳ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ; ಹತ್ತಡಿ ದೂರಕ್ಕೆ ಹಾರಿ ಬಿದ್ದ ಮಹಿಳೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

April 1, 2026
107
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯು 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ ಏಪ್ರಿಲ್ 5 ಭಾನುವಾರ ನಡೆಯಲಿದೆ

ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯು 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ ಏಪ್ರಿಲ್ 5 ಭಾನುವಾರ ನಡೆಯಲಿದೆ

April 2, 2026
ಬಂಟ್ವಾಳ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ; ಹತ್ತಡಿ ದೂರಕ್ಕೆ ಹಾರಿ ಬಿದ್ದ ಮಹಿಳೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಂಟ್ವಾಳ: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ; ಹತ್ತಡಿ ದೂರಕ್ಕೆ ಹಾರಿ ಬಿದ್ದ ಮಹಿಳೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

April 1, 2026
ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

March 31, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d