ಮಂಗಳೂರು ಮಾ.15: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯು ನಗರ ಒಸಿಯನ್ ಪೆರ್ಲ್ ಹೋಟೆಲ್ ನ ಸಭಾಂಗಣ ದಲ್ಲಿ ನಡೆಯಿತು..
ಕನ್ನಡ ನಾಮ ಫಲಕ ಅಳವಡಿಕೆಗೆ ಸಂಬಂಧಿಸಿದ ಹೋರಾಟವನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ನಡೆಸಲಿದ್ದೇವೆ. ನಾಡು ನುಡಿಯ ವಿಚಾರ ಬಂದಾಗ ನಾವು ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದರು
ನಾಮಫಲಕ ವಿಚಾರದಲ್ಲಿ ಮಾ.20ವರೆಗೆ ಸರಕಾರಕ್ಕೆ ಗಡುವು ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಾಮಫಲಕ ಕಡ್ಡಾಯ ಮಾಡಲು ಒತ್ತಾಯಿಸಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನ್ನಡದ ಪರ ಕೆಲಸ ಮಾಡುವ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದರು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಮೊದಲು ಧ್ವನಿ ಎತ್ತುವವರು ನಾವೇ ಆಗಿದ್ದೇವೆ. ತುಳು, ಬ್ಯಾರಿ, ಕೊಡವ, ಕೊಂಕಣಿ ನಮ್ಮ ಸಹೋದರ ಭಾಷೆಯಾಗಿದೆ ಎಂದು ನಾರಾಯಣ ಗೌಡ ಹೇಳಿದರು.
ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡ್ರು.. ಜಿಲ್ಲಾ ಅಧ್ಯಕ್ಷ ಲಯನ್ ಅನಿಲ್ ದಾಸ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ. ಸಣ್ಣೀರಪ್ಪ.. ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ್ ಅಬ್ಬಿಗೆರೆ.. ರಾಜ್ಯ ಉಪಾಧ್ಯಕ್ಷರು ವೀರ ಭದ್ರಪ್ಪ. ಭಾಗವಹಿಸದ್ದರು.. ಜಿಲ್ಲಾ ಉಪಾಧ್ಯಕ್ಷ ಮಧುಸೂಧನ್ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು..
ಅನಿಲ್ ದಾಸ್ ಮಾತಾಡಿ ತುಳು ಭಾಷೆ.. ಆಚಾರ ವಿಚಾರ ಘನತೆ.. ಹಾಗೂ ಕನ್ನಡ ಸಂಸ್ಕೃತಿ ಬಗ್ಗೆ ಮಾತಾಡಿದರು.
ಸಭೆಯಲ್ಲಿ ರಾಜಾಧ್ಯಕ್ಷ ರಾದ ಟಿ. ಎ. ನಾರಾಯಣ ಗೌಡ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು
ಆಟೋ ಘಟಕ. ಹಾಗೂ ಜಿಲ್ಲಾ ಕರವೇ ಮುಖಂಡರು ಉಪಸ್ಥಿತರಿದ್ದರು..ಪ್ರಸಾದ ತೋಮಸ್.. ರಾಜೇಶ್ ಶೆಟ್ಟಿಗಾರ್, ಅಜ್ಫರ್ ರಝಕ್..ಅರುಣ್ ಕುಮಾರ್. ಝೆರಾಲ್ಡ್. ಜೆ.ಕೆ.ಭಟ್.ಕ್ಲೇ ಮೆಂಟ್. ಸಂತೋಷ್.. ಭರತ್.. ಸುಜಯ ಪೂಜಾರಿ. ಜಲೀಲ್.. ರಿಯಾಜ್.. ಫೈರೋಜ್.. ಮೌಸೀರ್ ಸಮಾಣಿ ಗೆ.. ಪಮ್ಮಿ ಕೊಡಿಯಾಲ್ ಬೈಲ್. ಮುಂತಾದ ಮುಖಂಡರು ಭಾಗವಹಿಸಿದ್ದರು .ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಅಟ್ಟಲೂರ್. ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು..
Discover more from Coastal Times Kannada
Subscribe to get the latest posts sent to your email.
Discussion about this post