ಲಂಡನ್: ಟೆನ್ನಿಸ್‌ನಲ್ಲಿ ಹೊಸ ಯುಗ ಬಂದಿದೆ ಎಂಬ ಘೋಷಣೆಯೊಂದಿಗೆ ಕಾರ್ಲೋಸ್ ಅಲ್ಕರಾಜ್ ಅವರು 7 ಬಾರಿಯ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ಭಾನುವಾರ, ಜುಲೈ 14ರಂದು ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ 2024ರ ವಿಂಬಲ್ಡನ್ ಪುರುಷರ ರೋಚಕ ಫೈನಲ್‌ನಲ್ಲಿ ಸೆರ್ಬಿಯಾದ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಅವರನ್ನು ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ಮಣಿಸಿದರು.
ವಿಂಬಲ್ಡನ್‌ನಲ್ಲಿ ತಮ್ಮ ಪುರುಷರ ಸಿಂಗಲ್ಸ್ ಕಿರೀಟವನ್ನು ಯಶಸ್ವಿಯಾಗಿ ಉಳಿಸಿಕೊಳ್ಳಲು ಕಾರ್ಲೋಸ್ ಅಲ್ಕರಾಝ್ ಅವರು ಭಾನುವಾರದಂದು ನೊವಾಕ್ ಜೊಕೊವಿಕ್ ಅವರನ್ನು 6-2, 6-2, 7-6 (7-4) ನೇರ ಸೆಟ್‌ಗಳಿಂದ ಸೋಲಿಸಿದರು. ಕಳೆದ ವರ್ಷದ ಫೈನಲ್‌ನ ಮರುಪಂದ್ಯದಲ್ಲಿ, ಕಿಕ್ಕಿರಿದ ಪ್ರೇಕ್ಷಕರ ಎದುರು ಪಂದ್ಯವನ್ನು ಗೆಲ್ಲಲು ಯುವ ಆಟಗಾರ ಕಾರ್ಲೋಸ್ ಅಲ್ಕರಾಝ್ 2 ಗಂಟೆ 27 ನಿಮಿಷಗಳನ್ನು ತೆಗೆದುಕೊಂಡರು. ಕಳೆದ ವರ್ಷ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಲು ಸುಮಾರು 5 ಗಂಟೆಗಳ ಕಾಲ ಕಾರ್ಲೋಸ್ ಅಲ್ಕಾರಾಝ್ ಹೋರಾಡಬೇಕಾಯಿತು. ಆದರೆ ಈ ಬಾರಿ ಯುವ ಟೆನ್ನಿಸ್ ತಾರೆಯ ಪರವಾಗಿ ಹೆಚ್ಚು ಕಡಿಮೆ ಏಕಮುಖ ಆಟವಾಗಿತ್ತು.
ವಿಶ್ವದ ಅತ್ಯಂತ ಕಿರಿಯ ನಂ.1 ಆಟಗಾರನಾಗಿ ಉಳಿದಿರುವ ಕಾರ್ಲೋಸ್ ಅಲ್ಕಾರಾಝ್, ಮ್ಯಾಟ್ಸ್ ವಿಲಾಂಡರ್, ಜಾರ್ನ್ ಬೋರ್ಗ್ ಮತ್ತು ಬೋರಿಸ್ ಬೆಕರ್ ಬಳಿಕ, 21 ವರ್ಷದೊಳಗಿನವರು 4 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದ ನಾಲ್ಕನೇ ಆಟಗಾರರಾದರು. ಕಾರ್ಲೋಸ್ ಅಲ್ಕಾರಾಝ್ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳಲ್ಲಿ ಅಜೇಯರಾಗಿ ಉಳಿದಿದ್ದು, ಎಲ್ಲಾ 4 ಫೈನಲ್ ಪಂದ್ಯಗಳಲ್ಲಿ ಗೆದ್ದು ಬೀಗಿದ್ದಾರೆ. ಈ ವಿಜಯೋತ್ಸವದೊಂದಿಗೆ ಕಾರ್ಲೋಸ್ ಅಲ್ಕಾರಾಝ್ ಇತಿಹಾಸದಲ್ಲಿ ಸತತ ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಸ್ಪ್ಯಾನಿಷ್ ಆಟಗಾರನಾದರು.
Discover more from Coastal Times Kannada
Subscribe to get the latest posts sent to your email.
Discussion about this post