ಮಂಗಳೂರು: ಕರಾವಳಿ ಕಲ್ಯಾಣ ಪರಿಷತ್ ಕರ್ನಾಟಕದ ನೇತೃತ್ವದಲ್ಲಿ ಸೆ.17ರಂದು ಬೆಳಿಗ್ಗೆ 7ರಿಂದ 11 ಗಂಟೆಯವರೆಗೆ ‘ಸ್ವಚ್ಛ ಸಾಗರ ಸುರಕ್ಷಿತ ಸಾಗರ’ ಅಭಿಯಾನವು ಕಡಲತೀರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಮಹಾನಗರ ಸಂಯೋಜಕ ಸತೀಶ್ ತಿಳಿಸಿದರು. ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂತರರಾಷ್ಟ್ರೀಯ ಸಮುದ್ರದಂಡೆ ಸ್ವಚ್ಛತೆ ದಿನವಾದ ಸೆ.17ರಂದು ದೇಶದಾದ್ಯಂತ ಸುಮಾರು 7,500 ಕಿ.ಮೀ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಇದರ ಭಾಗವಾಗಿ ನಮ್ಮ ಕರಾವಳಿಯಲ್ಲೂ ಸ್ವಚ್ಛತಾ ಕಾರ್ಯ ನಡೆಸಲಾಗುವುದು. ಮಿತ್ರ ಪಟ್ಟಣ ಮುಕ್ತ, ಎನ್‌ಐಟಿಕೆ, ದೊಡ್ಡಕೊಪ್ಪ, ಗುಡ್ಡೆಕೊಪ್ಪ, ಇಡ್ಯಾ, ಹೊಸಬೆಟ್ಟು, ಚಿತ್ರಾಪುರ, ಮೀನಕಳಿಯ, ಎನ್‌ಎಂಪಿಟಿ, ತಣ್ಣೀರುಬಾವಿ, ಬೇಂಗ್ರೆ ಹೀಗೆ ಒಟ್ಟು 11 ಪ್ರದೇಶಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರು ಇಲ್ಲಿ ಬಂದು ಸೇರಿಕೊಳ್ಳಬೇಕು. ಜನರ ಸಹಭಾಗಿತ್ವ ಇದ್ದರೆ ಅಭಿಯಾನ ಯಶಸ್ವಿಯಾಗುತ್ತದೆ’ ಎಂದರು. ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಪ್ಲೇ ಸ್ಟೋರ್‌ನಿಂದ Eco Mitram ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೈಗೆತ್ತಿಕೊಂಡಿರುವ ಪರಿಸರ ರಕ್ಷಣೆ ಕಾರ್ಯಕ್ಕೆ ಜನರು ಕೈಜೋಡಿಸಬೇಕು ಎಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರ್ಯಾವರಣ ಗತಿ ವಿಧಿ ನಗರ ಸಂಯೋಜಕ ಶ್ರೀ ಸತೀಶ್, ಕರಾವಳಿ ಕಲ್ಯಾಣ ಪರಿಷತ್ತು ಸಂಯೋಜಕ ಪ್ರಮೋದ್ ಅಂಚನ್, ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷರಾದ ಶ್ರೀ ಮಾಧವ ಸುವರ್ಣ, ಮಂಗಳೂರು ರಾಮಕೃಷ್ಣ ಮಿಷನ್ ನ ಸ್ವಯಂಸೇವಕರಾದ ಶ್ರೀ ಹರೀಶ್ ಪ್ರಭು ಪರ್ಯಾವರಣ ಗತಿ ವಿಧಿ ಸುರತ್ಕಲ್ ನಗರದ ಸಹಸಂಯೋಜಕ ಹಾಗೂ ಕೂಳೂರು ಮೊಗವೀರ ಮಹಾಸಭಾದ ಗೌರವ ಸಲಹೆಗಾರರಾಗಿರುವ ಶ್ರೀ ಶುಭೋದ್ ಹಾಗೂ ವಿಭಾಗ ಸಹ ಸಂಯೋಜಕ ಶ್ರೀ ಚಂದ್ರಹಾಸ ಕನೀರ್ ತೋಟ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post