ಮಂಗಳೂರು, ಸೆ. 13: ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ನಗರ ಮದುವಣಗಿತ್ತಿಯಂತೇ ಸಿಂಗಾರಗೊಂಡಿತ್ತು. ನಗರದ ರಾಜಮಾರ್ಗಗಳು ಮರು ಡಾಂಬಾರೀಕರಣ ಗೊಂಡು ಅಂದವಾಗಿತ್ತು..ಆದರೆ ಪ್ರಧಾನಿ ಬಂದು ಹೋದ ಹತ್ತೇ ದಿನದಲ್ಲಿ ರಸ್ತೆಯಲ್ಲಿ ಹೊಂಡ ಬಿದ್ದಿದೆ. ಹೊಂಡ ಬಿದ್ದಿದೆ. ಆದರೆ ರಸ್ತೆ ಹೊಂಡ ಬಿದ್ದಿರುವ ಚಿತ್ರಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾತ್ರೋ ರಾತ್ರಿ ಹೊಂಡವನ್ನು ಮುಚ್ಚಿ ತೇಪೆ ಕಾರ್ಯ ಮಾಡಿದೆ. ಮಂಗಳೂರು ನಗರ ಹೊರವಲಯದ ಕುಳೂರಿನ ಸೇತುವೆ ಮಳೆಗಾಲದ ಅವಧಿಯಲ್ಲಿ ಸಂಪೂರ್ಣ ಹೊಂಡ-ಗುಂಡಿಗಳಿಂದ ತುಂಬಿ ಹೋಗಿತ್ತು. ಪ್ರತಿದಿನ ಘನ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಜನ ಪಡಬಾರದ ಕಷ್ಟವನ್ನು ಅನುಭವಿಸಿ ಪ್ರಯಾಣ ಮಾಡುತ್ತಿದ್ದರು.
10 ದಿನವೂ ಬಾರದ ರಸ್ತೆ : ಕೂಳೂರು ಹಾಗೂ ಪಣಂಬೂರು ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣವಾಗಿದ್ದ ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ನಾಲ್ಕು ತಿಂಗಳಿನಿಂದ ಜನ ಒತ್ತಾಯಿಸಿದ್ದರು. ಆದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಕಡೆಗಣಿಸಿತ್ತು. ಆದರೆ ಪ್ರಧಾನಿ ಬರುವ ಕಾರ್ಯಕ್ರಮ ನಿಗದಿಯಾದ ನಾಲ್ಕೇ ದಿನಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ನಡೆಸಿದ್ದರು, ಆದರೆ ತಾರಾತುರಿ ಕೆಲಸ 10 ದಿನಗಳಲ್ಲಿ ಗುಂಡಿ ಬಿದ್ದು ಮತ್ತದೇ ಸ್ಥಿತಿ ತಲುಪಿದೆ. ಪ್ರಧಾನಿ ಬಂದ ನಂತರವಾದರೂ ರಸ್ತೆ ಸರಿ ಆಗಿದೆ ಎಂದು ಹೇಳಿಕೊಂಡು ಖುಷಿ ಪಡುತ್ತಿದ್ದ ಕೇವಲ 10 ದಿನಗಳಲ್ಲಿ ತೀವ್ರ ನಿರಾಸೆ ಅನುಭವಿಸುವಂತಾಗಿದೆ. ಡಾಂಬಾರು ಕಿತ್ತು ಹೋಗಿ ಸೇತುವೆಯ ಕಾಂಕ್ರೀಟ್ ಕಾಣಿಸಿಕೊಳ್ಳುವಷ್ಟು ಬೃಹತ್ ಗುಂಡಿ ನಿರ್ಮಾಣ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಳಪೆ ಕಾಮಗಾರಿ ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ರಾತ್ರೋರಾತ್ರಿ ಸೇತುವೆ ಮೇಲೆಬಿದ್ದ ಗುಂಡಿಗೆ ತೇಪೆ ಕಾರ್ಯ ಹಾಕಿದ್ದಾರೆ.. ತೇಪೆ ಹಾಕಿದ ಸ್ಥಳದ ಸ್ವಲ್ಪ ದೂರದಲ್ಲೇ ಮತ್ತೊಂದು ಗುಂಡಿಯೂ ಬಿದ್ದಿದ್ದು, ಮಳೆ ಜಾಸ್ತಿಯಾದರೆ ಅದೂ ಆಳವಾಗುವ ಸಾಧ್ಯತೆಗಳಿವೆ..
ನಿಮ್ಮ ಸರ್ಕಾರದ 40% ಕಮಿಷನ್ ಲೂಟಿಗೆ ಇನ್ಯಾವ ಸಾಕ್ಷಿ ಬೇಕು @BSBommai ಅವರೇ,
ಇದೇ ರಸ್ತೆಯ ಮೇಲೆ ಬಂದು "ಡಬಲ್ ಇಂಜಿನ್ ಅಭಿವೃದ್ಧಿಯಾಗುತ್ತದೆ" ಎಂದು ಭಾಷಣ ಮಾಡಿದ್ದ @narendramodi ಅವರೇ,
ಈ ಲೂಟಿ ತನಿಖೆಗೆ ಅರ್ಹವಲ್ಲವೇ?ಬಿಜೆಪಿ ಸರ್ಕಾರದ ರಸ್ತೆ ಡಾಂಬಾರಿಗಿಂತ ಅಡುಗೆ ಮನೆಯಲ್ಲಿ ರೊಟ್ಟಿಗೆ ಕಲಸುವ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್! pic.twitter.com/WDjp6UeTgc
— Karnataka Congress (@INCKarnataka) September 13, 2022
Discover more from Coastal Times Kannada
Subscribe to get the latest posts sent to your email.
Discussion about this post