ಮಂಗಳೂರು, ಸೆ.15: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ , ದಕ್ಷಿಣ ಕನ್ನಡ ಮತ್ತು ಉಡುಪಿ ಶಾಖೆ, ಮಂಗಳೂರು ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ (ನಿ). ಬಂದರ್ ಮಂಗಳೂರು ಇವುಗಳ ನೇತ್ರೃತ್ವದಲ್ಲಿ ಹಾಗೂ ಕರ್ನಾಟಕ ರಾಜ್ಯ ಮತ್ತು ದ.ಕ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಮಂಗಳೂರು. ಇದರ ಸಹಯೋಗದಲ್ಲಿ ಸೆ. 27 ರಿಂದ 30ರ ವರೆಗೆ ನಡೆಯಲಿರುವ ದಿವಂಗತ ಲೋಕನಾಥ್ ಬೋಳಾರ್ ಸ್ಮರಣಾರ್ಥ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳೂರು ನಗರ ಖಾಸಾಗಿ ಹೊಟೇಲ್‌ನಲ್ಲಿ ಬುಧವಾರ ನಡೆಯಿತು.
ಮತ್ಸೋದ್ಯಮಿ ಆನಂದ ಪಿ ಸುವರ್ಣ ಮಲ್ಪೆ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿ ಬಂದರ್ ಮಂಗಳೂರು ಇದರ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಈ ಸಂದರ್ಭದಲ್ಲಿ ಮಾತನಾಡಿದ ಅವರು ಲೋಕನಾಥ್ ಬೋಳಾರ್ ಮೀನುಗಾರರಿಗೆ ಒಂದು ಶಕ್ತಿಯಾಗಿದ್ದರು, ಅವರು ಮೀನುಗಾರಿಕೆ ಪ್ರವೇಶ ಮಾಡಿದ ಮೇಲೆ ಮೀನುಗಾರರ ಬದುಕು ಹಸನಾಯಿತು, ಅವರು ಮೀನುಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ, ಅಂತರ್‌ರಾಷ್ಟ್ರೀಯ ಕ್ರೀಡಾಪಟುವಾಗಿದ್ದ ಬೋಳಾರ್ ಸ್ಮರಣಾರ್ಥ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಪ್ರಯತ್ನ ನಡೆದಿದೆ ಎಂದರು.
ಮೂಡಾದ ಮಾಜಿ ಅಧ್ಯಕ್ಷ ತೇಜೋಮಯರು ಮಾತನಾಡಿ ಲೋಕನಾಥ್ ಬೋಳಾರ್ ರವರು ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ದಕ್ಷಿಣ ಭಾರತೀಯರಲ್ಲಿ ಅಗ್ರಗಣ್ಯರು, ಅವರು ಕ್ರೀಡಾಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪೂರ್ಚವಾದುದು ಅವರು ಮೀನುಗಾರ ಸಮುದಾಯಕ್ಕೆ ನೀಡಿದ ಸೇವೆಗೆ ಮಂಗಳೂರು ಮೀನುಗಾರಿಕಾ ಬಂದರ್‌ಗೆ ಅವರ ಹೆಸರನ್ನು ಇಡುವಂತೆ ಸರಕಾರಕ್ಕೆ ಮನವಿ ಮಾಡಬೇಕಾಗಿದೆ ಎಂದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್ ರವರು ಕ್ರೀಡೋತ್ಸವದ ವಿವರವನ್ನಿತ್ತರು, ಆಕರ್ಷಕ ಮೆರವಣಿಗೆಯನ್ನು ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಮಂಗಳಾ ಕ್ರೀಡಾಂಗಣವರೆಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಚಂಡೆ, ಕೊಡೆ, ಟ್ಯಾಬ್ಲೋ, ಕಲ್ಲಡ್ಕ ಬೊಂಬೆ, ಹುಲಿ ಮುಂತಾದ ಸಾಂಸ್ಕೃತಿಕ ವೈಭವಗಳು ಇರಲಿವೆ ಎಂದರು
ಪತ್ರಿಕಾಗೋಷ್ಠಿಯಲ್ಲಿ : ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷಣ್ ಕೋಡಿಕಲ್, ಮಂಗಳೂರು ಟ್ರಾಲ್ ಬೋಟು ಸೊಸೈಟಿ ಅಧ್ಯಕ್ಷ ನಿತಿನ್ ಕುಮಾರ್, ಬೆಂಗಳೂರು ಮೊಗವೀರ ಸಂಘದ ಮಾಜಿ ಅಧ್ಯಕ್ಷ ಮೋನಪ್ಪ ಸುವರ್ಣ, ದ.ಕ ಅತ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ತಾರನಾಥ ಶೆಟ್ಟಿ, ಸದಾಶಿವ ಕೋಟ್ಯಾನ್, ಭರತ್ ಕುಮಾರ್ ಎರ್ಮಾಳ್, ಮೋಹನ್ ಕೋಡಿಕಲ್, ಆಶಾ ಸುವರ್ಣ, ಬಾಲಕೃಷ್ಣ ಸುವರ್ಣ, ಯತೀಶ್ ಬೈಕಂಪಾಡಿ, ಶೋಭೇಂದ್ರ ಸಸಿಹಿತ್ಲು, ಕವಿತಾ, ವರದರಾಜ್ ಬಂಗೇರ, ಶಾಮ್ ಲಾಲ್ ಬೋಳೂರು, ಬಾಬು ಸಾಲ್ಯಾನ್ ದೇವಾನಂದ ಬೋಳೂರು, ಅಶೋಕ್ ಸುವರ್ಣ, ಕೆ ಎಲ್ ಬಂಗೇರ, ಜಿ. ಕೆ ರಮೇಶ್, ಕೃಷ್ಣ ಶೆಣೈ, ಮೋಹನ್ ಬೆಂಗ್ರೆ, ಸುಧೀರ ವಿ ಅಮೀನ್, ಪವನ್, ಸುಭಾಶ್ಚಂದ್ರ ಬೋಳಾರ್, ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post