ಕಾರ್ಕಳ: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ಲು ಗುಡ್ಡದಲ್ಲಿ ನಿರ್ಮಾಣ ಮಾಡಲಾದ ಪರಶುರಾಮ ಥೀಮ್ ಪಾಕ್೯ ಗೊಂದಲದ ಗೂಡಾಗಿ ಪರಿಣಮಿಸಿದೆ. ಕಾಮಗಾರಿ ಪ್ರಾರಂಭದಿಂದಲೂ ಒಂದಲ್ಲ ಒಂದು ರೀತಿಯ ಗೊಂದಲ ಸೃಷ್ಟಿ ಯಾಗುತ್ತಾ ಬಂದಿದ್ದು ಇದೀಗ ಇಂದು ವಿಗ್ರಹ ಏಕಾಏಕಿ ಮಾಯವಾಗುವುದು ಮತ್ತಷ್ಟು ಅಕ್ರೊಶಕ್ಕೆ ಕಾರಣವಾಗಿದೆ. ಪರಶುರಾಮನ ವಿಗ್ರಹದ ಪಾದ ಹೊರತುಪಡಿಸಿ ಉಳಿದು ಬಾಗ ಕಾಣೆಯಾಗಿದ್ದು, ಈ ಕುರಿತು ದಿವ್ಯಾ ನಾಯಕ್ ವಿಗ್ರಹ ವಿಗ್ರಹ ಪತ್ತೆ ಗಾಗಿ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿರುವ ಪರುಶುರಾಮನ ಮೂರ್ತಿ ನಕಲಿ ಎನ್ನುವ ಬಗ್ಗೆ ಭಾರೀ ಆರೋಪ ಕೇಳಿಬಂದಿತ್ತು. ಇದೀಗ ಮೂರ್ತಿ ನಾಪತ್ತೆ ಆಗುತ್ತಲೇ ಹೋರಾಟಗಾರರು ಮೂರ್ತಿ ಕಾಣೆಯಾಗಿದೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೂರ್ತಿ ತೆರವು ಹಿನ್ನೆಲೆಯಲ್ಲಿ ಉಮ್ಮಿಕಲ್ ಬೆಟ್ಟಕ್ಕೆ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಭೇಟಿ ನೀಡಿದ್ದು ಶಾಸಕ ಸುನಿಲ್ ಕುಮಾರ್ ಬಗ್ಗೆ ಆರೋಪ ಮಾಡಿದ್ದಾರೆ.
33 ಅಡಿ ಎತ್ತರದ ಕಂಚಿನ ಪ್ರತಿಮೆ! ಇನ್ನು ಬೈಲೂರು ಉಮಿಕಲ್ಲು ಬೆಟ್ಟದ ಮೇಲೆ ನಿಂತಿದ್ದ ಪರಶುರಾಮನ ಮೂರ್ತಿ ಕಾಣುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೊಡಲಿ & ಬಿಲ್ಲು ಸಹ ಕಾಣ್ತಿಲ್ಲ ಅಂತಾ ಆರೋಪಿಸಲಾಗಿದೆ. ರಾತ್ರೋ ರಾತ್ರಿ ಪ್ರತಿಮೆ ಕಳ್ಳತನ ಮಾಡಲಾಯ್ತಾ? ಇಲ್ಲ ಮೂರ್ತಿ ತೆರವು ಮಾಡಿದ್ರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗೇ ಸ್ಥಳೀಯ ಶಾಸಕ ಸುನಿಲ್ ಕುಮಾರ್ ವಿರುದ್ಧ ಬೇರೆ ಪಕ್ಷಗಳ ನಾಯಕರು ಮತ್ತು ಮುಖಂಡರು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಹೋಗಿದ್ದೆಲ್ಲಿಗೆ? ಎಂಬ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ
ಒಟ್ನಲ್ಲಿ ಏಕಾಏಕಿ 33 ಅಡಿ ಎತ್ತರ ಇದ್ದ ಪರಶುರಾಮನ ಕಂಚಿನ ಪ್ರತಿಮೆ ಕಾಣೆಯಾಗಿರುವುದು ಈಗ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಂತಾ, ಸ್ಥಳೀಯರು ಆಗ್ರಹಿಸ್ತಿದಾರೆ. ಹಾಗೇ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಪೊಲೀಸ್ ಠಾಣೆಗೂ ಈ ಕುರಿತು ದೂರು ನೀಡಲಾಗಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಮುಂದೆ ಏನಾಗುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ. ಹಾಗೇ ಪೊಲೀಸರ ತನಿಖೆ ಮೇಲೆ ಎಲ್ಲಾ ನಿರ್ಧಾರವಾಗಲಿದೆ. ಆದರೆ ಆದಷ್ಟು ಬೇಗ ಪ್ರತಿಮೆ ಹೋಗಿದ್ದು ಎಲ್ಲಿಗೆ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುವ ಅಪಾಯ ಇದೆ.
ಉಮಿಕಲ್ಲು ಗುಡ್ಡ ದಲ್ಲಿ 33 ಅಡಿಯ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಇದೀಗ ಡ್ರೋಣ್ ಕ್ಯಾಮರ ಮೂಲಕ ಮೂರ್ತಿ ಮಾಯವಾಗಿರುವ ಬಹಿರಂಗವಾಗಿದೆ. ಬೈಲೂರಿನ ಉಮ್ಮಿಕಲ್ಲ್ ಬೆಟ್ಟದ ಮೇಲೆ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕಿನಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿ ಪೈಭರ್ ಪ್ರತಿಮೆ ನಿರ್ಮಿಸಿ ಜನತೆಗೆ ನಂಬಿಕೆ ದ್ರೋಹವೆಸಗಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಕಾರ್ಕಳ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ. ಸೋಮವಾರ ಪ್ರತಿಭಟನಕಾರರು ಕಾರ್ಕಳ ಪುಲ್ಕೇರಿ ಬೈಪಾನ್ ವೃತ್ತದಿಂದ ಒಟ್ಟಾಗಿ ವಾಹನದಲ್ಲಿ ತೆರಳಿ ಬೆಟ್ಟದ ತಪ್ಪಲನ್ನು ತಲುಪಿ ಮುತ್ತಿಗೆಯನ್ನು ಹಾಕಲಿದ್ದಾರೆ.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಮಾದ್ಯಮ ದೊಂದಿಗೆ ಮಾತನಾಡಿ ಈಗಾಗಲೇ ಸ್ಥಾಪಿತವಾದ ವಿಗ್ರಹ ಈ ನಕಲಿಯಾಗಿದ್ದು ಈ ನಕಲಿ ವಿಗ್ರಹ ಬಗ್ಗೆ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ. ಅದ್ದರಿಂದ ಕೂಡಲೇ ಅಸಲಿ ವಿಗ್ರಹವನ್ನು ಸ್ಥಾಪನೆ ಮಾಡಬೇಕು ಮತ್ತು ಕಾರ್ಕಳ ಜನತೆಯ ಬಳಿ ಕ್ಷಮೆ ಯಾಚ ಬೇಕು. ಮುಂದಿನ ದಿನಗಳಲ್ಲಿ ಅಸಲಿ ವಿಗ್ರಹ ಸ್ಥಾಪನೆ ಹಂತ ಹಂತವಾಗಿ ಕ್ರಮ ಬದ್ದವಾಗಿ ಕಾಮಗಾರಿ ನಡೆಸಲಿ. ಹಾಗೂ ಈಗಾಗಲೇ ಕಾಮಗಾರಿ ಕೈಗೆತ್ತಿಕೊಂಡಿದ್ದು ಅದರ ಗುಣಮಟ್ಟ ಹಾಗೂ ತಾಂತ್ರಿಕತೆಯ ಬಗ್ಗೆ ಎನ್.ಐ.ಟಿ.ಕೆ ಯಿಂದ ಮಾಹಿತಿ ಪಡೆದು ವಿಗ್ರಹ ಅಡಿಪಾಯ ವನ್ನು ಭದ್ರಗೊಳಿಸಬೇಕಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post