ನವದೆಹಲಿ: ದೇಶಿಯ ಗ್ಯಾಜೆಟ್ ಕಂಪನಿ ಲಾವಾ, ನೂತನ ಪ್ರೊಬಡ್ಸ್ 21 ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ, 9 ಗಂಟೆಗಳವರೆಗೆ ಪ್ಲೇಬ್ಯಾಕ್ ಅವಧಿ ದೊರೆಯಲಿದೆ ಎಂದು ಕಂಪನಿ ಹೇಳಿದೆ.
ಸ್ಟೋರೇಜ್ ಕೇಸ್‌ನಲ್ಲಿ 500mAh ಬ್ಯಾಟರಿ ಇದ್ದು, ಇಯರ್‌ಬಡ್ಸ್ ಅನ್ನು ಐದು ಬಾರಿ ಚಾರ್ಜ್ ಮಾಡಬಹುದು. ಜತೆಗೆ ಮ್ಯೂಸಿಕ್, ಕರೆ ನಿಯಂತ್ರಣ ಫೀಚರ್ ಕೂಡ ಲಭ್ಯವಿರುತ್ತದೆ.
ಲಾವಾ ಪ್ರೊಬಡ್ಸ್ 21ರಲ್ಲಿ 12mm ಡೈನಾಮಿಕ್ ಡ್ರೈವರ್ಸ್ ಇದ್ದು, ದೇಶದಲ್ಲಿ ₹1,499 ದರ ಹೊಂದಿದೆ ಎಂದು ಲಾವಾ ತಿಳಿಸಿದೆ. ಆರಂಭಿಕ ಕೊಡುಗೆಯಾಗಿ ಲಾವಾ ಇ–ಸ್ಟೋರ್ ಮತ್ತು ಅಮೆಜಾನ್ ಮೂಲಕ ₹1,299 ದರಕ್ಕೆ ದೊರೆಯಲಿದ್ದು, ಮಾರ್ಚ್ 24ರವರೆಗೆ ಆಫರ್ ದರ ಇರುತ್ತದೆ.
ಕ್ವಿಕ್ ಚಾರ್ಜ್ ತಂತ್ರಜ್ಞಾನದ ಮೂಲಕ 20 ನಿಮಿಷದ ಚಾರ್ಜ್‌ನಿಂದ 200 ನಿಮಿಷದ ಪ್ಲೇಟೈಮ್ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post