• About us
  • Contact us
  • Disclaimer
Monday, February 16, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ ಕೋಟೆಪುರ ; ದೆಹಲಿ ಮೂಲದ ಮಹಿಳೆಯನ್ನ ಚೂರಿಯಿಂದ ಇರಿದು ಹತ್ಯೆ

Coastal Times by Coastal Times
March 16, 2023
in ಕ್ರೈಮ್ ನ್ಯೂಸ್
ಉಳ್ಳಾಲ ಕೋಟೆಪುರ ; ದೆಹಲಿ ಮೂಲದ ಮಹಿಳೆಯನ್ನ ಚೂರಿಯಿಂದ ಇರಿದು ಹತ್ಯೆ
221
VIEWS
WhatsappTelegramShare on FacebookShare on Twitter

ಉಳ್ಳಾಲ, ಮಾ.16 : ಚೂರಿಯಿಂದ ಇರಿಯಲ್ಪಟ್ಟು ಹತ್ಯೆಯಾದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.

ಮೃತರನ್ನು ದೆಹಲಿ ಮೂಲದ ಸುಮಾರು 45 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ  ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸಲೂನ್ ಮಾಲೀಕರ ಮೂಲಕ ಸಂಪರ್ಕಿಸಿ, ಹಮೀದ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಬಟ್ಟೆ ವ್ಯಾಪಾರ ನಡೆಸುತ್ತೇವೆ ಎಂದು ಅವರು ತಿಳಿಸಿದ್ದರು. ಬಟ್ಟೆಗಳು ಶೀಘ್ರದಲ್ಲೇ ಬರಲಿವೆ ಎಂದು ತಿಳಿಸಿ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಗುರುವಾರ ಸಂಜೆಯಾದರೂ ಮನೆಯಿಂದ ಯಾರೂ ಹೊರಗೆ ಬಂದಿರಲಿಲ್ಲ. ಯುವಕನೊಬ್ಬ ಅವರಿದ್ದ ಮನೆಗೆ ಹೋಗಿ ನೋಡಿದಾಗ ಶೌಚಾಲಯದಲ್ಲಿ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು. ಸ್ಥಳಕ್ಕೆ ಉಳ್ಳಾಲ ಪೊಲೀಸರು, ವಿಧಿ ವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಬಾಡಿಗೆ ಮನೆ ಮಾಲೀಕರು ಯಾವುದೇ ಗುರುತಿನ ಚೀಟಿಯನ್ನು ಪಡೆದುಕೊಳ್ಳದೇ ಇರುವುದರಿಂದ ಪೊಲೀಸರಿಗೆ ಮೃತ ಮಹಿಳೆಯ ಗುರುತು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಸ್ಥಳದಲ್ಲಿ ಆರೋಪಿಯ ಆಧಾರ್ ಕಾರ್ಡ್ ದೊರೆತಿದ್ದು, ಇದರಲ್ಲಿ ದೆಹಲಿ ನಿವಾಸಿ ನಯೀಮ್ ಎಂಬ ದಾಖಲೆಗಳಿವೆ. ಪೊಲೀಸರು ಆರೋಪಿತನ ಮೊಬೈಲ್ ನಂಬರ್ ಪರಿಶೀಲಿಸಿದಾಗ ಅದು ಪಶ್ಚಿಮ ಬಂಗಾಳದ ಆಧಾರಗಳನ್ನು ಒಳಗೊಂಡಿದೆ. ಹಾಗಾಗಿ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಅಸಲಿಯ ಅಥವಾ ನಕಲಿಯ ಅನ್ನುವುದನ್ನು ತನಿಖೆ ನಡೆಸಬೇಕಿದೆ. ಬಾಡಿಗೆ ಮನೆ ಪಡೆಯುವ ಸಂದರ್ಭ ಆರೋಪಿತ ಜತೆಗಿರುವ ಮಹಿಳೆ ತಾಯಿಯ ಸಹೋದರಿ ಎಂದೂ ತಿಳಿಸಿದ್ದು, ಆದರೆ ಇಬ್ಬರ ವಯಸ್ಸಿನಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುತ್ತಿಲ್ಲ ಅನ್ನುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕೋಟೆಪುರ ಪರಿಸರದಲ್ಲಿ ಮೀನಿನ ತೈಲ ತೆಗೆಯುವ ಅನೇಕ ಕಾರ್ಖಾನೆಗಳಿವೆ. ಇಲ್ಲಿಗೆ ಹೊರರಾಜ್ಯಗಳ ಕಾರ್ಮಿಕರು ಅನೇಕರು ಬರುತ್ತಿರುತ್ತಾರೆ. ಬಾಡಿಗೆ ಮನೆ ಕೊಡುವವರು ಸೂಕ್ತ ದಾಖಲೆಗಳನ್ನು ಪಡೆದುಕೊಂಡೇ ಬಾಡಿಗೆ ಮನೆಯನ್ನು ನೀಡಬೇಕು ಎಂದು ಉಳ್ಳಾಲ ಠಾಣಾಧಿಕಾರಿ ಸಂದೀಪ್ ತಿಳಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಕ್ರಿಪ್ಟೊ ಕರೆನ್ಸಿ ಹೆಸರಿನಲ್ಲಿ ಹೂಡಿಕೆ ರೂ.1.15 ಕೋಟಿ ವಂಚನೆ

Next Post

ಕಳೆದು ಹೋದ ಮೊಬೈಲ್‌ ಪತ್ತೆಗೆ ಸಿಇಐಆರ್‌ ಪೋರ್ಟಲ್‌ : ಯಾವ ಮೂಲೆಯಲ್ಲಿ ಮೊಬೈಲ್ ಬಚ್ಚಿಟ್ಟರೂ ಎತ್ತಿ ತೋರಿಸುತ್ತೆ ಹೊಸ ತಂತ್ರಜ್ಞಾನ

Related Posts

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು
ಕ್ರೈಮ್ ನ್ಯೂಸ್

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

February 15, 2026
91
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಗ್ ಖರೀದಿಸಿ ತಲಪಾಡಿಯಲ್ಲಿ ಮಾರಾಟಕ್ಕೆ ಯತ್ನ, 11.90 ಲಕ್ಷ ರೂ. ಮೌಲ್ಯದ MDMA ವಶ
ಕ್ರೈಮ್ ನ್ಯೂಸ್

ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಗ್ ಖರೀದಿಸಿ ತಲಪಾಡಿಯಲ್ಲಿ ಮಾರಾಟಕ್ಕೆ ಯತ್ನ, 11.90 ಲಕ್ಷ ರೂ. ಮೌಲ್ಯದ MDMA ವಶ

February 14, 2026
21
Next Post
ಕಳೆದು ಹೋದ ಮೊಬೈಲ್‌ ಪತ್ತೆಗೆ ಸಿಇಐಆರ್‌ ಪೋರ್ಟಲ್‌ : ಯಾವ ಮೂಲೆಯಲ್ಲಿ ಮೊಬೈಲ್ ಬಚ್ಚಿಟ್ಟರೂ ಎತ್ತಿ ತೋರಿಸುತ್ತೆ ಹೊಸ ತಂತ್ರಜ್ಞಾನ

ಕಳೆದು ಹೋದ ಮೊಬೈಲ್‌ ಪತ್ತೆಗೆ ಸಿಇಐಆರ್‌ ಪೋರ್ಟಲ್‌ : ಯಾವ ಮೂಲೆಯಲ್ಲಿ ಮೊಬೈಲ್ ಬಚ್ಚಿಟ್ಟರೂ ಎತ್ತಿ ತೋರಿಸುತ್ತೆ ಹೊಸ ತಂತ್ರಜ್ಞಾನ

Discussion about this post

Recent News

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

February 16, 2026
17
ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

February 15, 2026
91
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

February 16, 2026
ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

February 15, 2026
ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದ ಅತೀ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್ !

ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದ ಅತೀ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್ !

February 14, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d