• About us
  • Contact us
  • Disclaimer
Wednesday, July 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಳೆದು ಹೋದ ಮೊಬೈಲ್‌ ಪತ್ತೆಗೆ ಸಿಇಐಆರ್‌ ಪೋರ್ಟಲ್‌ : ಯಾವ ಮೂಲೆಯಲ್ಲಿ ಮೊಬೈಲ್ ಬಚ್ಚಿಟ್ಟರೂ ಎತ್ತಿ ತೋರಿಸುತ್ತೆ ಹೊಸ ತಂತ್ರಜ್ಞಾನ

Coastal Times by Coastal Times
March 17, 2023
in ಕರಾವಳಿ
ಕಳೆದು ಹೋದ ಮೊಬೈಲ್‌ ಪತ್ತೆಗೆ ಸಿಇಐಆರ್‌ ಪೋರ್ಟಲ್‌ : ಯಾವ ಮೂಲೆಯಲ್ಲಿ ಮೊಬೈಲ್ ಬಚ್ಚಿಟ್ಟರೂ ಎತ್ತಿ ತೋರಿಸುತ್ತೆ ಹೊಸ ತಂತ್ರಜ್ಞಾನ
206
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಕಳೆದುಹೋದ/ಕಳವಾದ 39 ಮೊಬೈಲ್‌ಗ‌ಳನ್ನು ಸಿಇಐಆರ್‌ ಪೋರ್ಟಲ್‌ ಮೂಲಕ ಪತ್ತೆ ಹಚ್ಚಲಾಗಿದ್ದು ಅದನ್ನು ಗುರುವಾರದಂದು ಪೊಲೀಸ್‌ ಆಯುಕ್ತರು ವಾರಸುದಾರರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಅವರು, ಕಳೆದ 5 ತಿಂಗಳಲ್ಲಿ ಕಮಿಷನರೆಟ್‌ ವ್ಯಾಪ್ತಿಯಲ್ಲಿ 402 ಮಂದಿ ಮೊಬೈಲ್‌ ಕಳೆದುಕೊಂಡಿರುವ ಬಗ್ಗೆ ದೂರು ನೀಡಿದ್ದಾರೆ. ಆ ಪೈಕಿ 124 ಮೊಬೈಲ್‌ಗ‌ಳನ್ನು ಪತ್ತೆ ಹಚ್ಚಲಾಗಿದ್ದು 39 ಮೊಬೈಲ್‌ನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 7 ಲ.ರೂ.ಗಳಾಗಿವೆ. ಉಳಿದ ಮೊಬೈಲ್‌ಗ‌ಳನ್ನು ಕೂಡ ಶೀಘ್ರದಲ್ಲೇ ಜಪ್ತಿ ಮಾಡಲಾಗುವುದು. ಸಿಇಐಆರ್‌ ಪೋರ್ಟಲ್‌ನ್ನು ಪೊಲೀಸರು ಅಥವಾ ಮೊಬೈಲ್‌ ಕಳೆದುಕೊಂಡವರು ನೇರವಾಗಿ ಬಳಕೆ ಮಾಡಬಹುದು. ಇದರಿಂದ ಮೊಬೈಲ್‌ ಪೋನ್‌ ಪತ್ತೆಗೆ ಹಾಗೂ ಅದರ ಮಾಲಕರಿಗೆ ಮರಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಏನಿದು ಸಿಇಐಆರ್‌ ಪೋರ್ಟಲ್‌? : ಕಳ್ಳತನ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮೊಬೈಲ್‌ ಫೋನ್‌ ಕಳೆದುಕೊಂಡರೆ ಅದನ್ನು ಬ್ಲಾಕ್‌ ಮಾಡಲು ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಹೊಸ ವಿಧಾನವೇ ಸಿಇಐಆರ್‌ ಪೋರ್ಟಲ್‌(CEIR- Central Equipment Identity Registration Portal). ಮೊಬೈಲ್‌ ಫೋನ್‌ ಕಳೆದುಹೋದ ಕೂಡಲೇ ಹತ್ತಿರದ ಪೊಲೀಸಂ ಠಾಣೆಯಲ್ಲಿ ಅಥವಾ ಕೆಎಸ್‌ಪಿ ಆ್ಯಪ್‌ನಲ್ಲಿ ದೂರು ಸಲ್ಲಿಸಿ ಸ್ವೀಕೃತಿ/ ಡಿಜಿಟಲ್‌ ಇ-ಸ್ವೀಕೃತಿ ಪಡೆದುಕೊಳ್ಳಬೇಕು. ಕಳೆದುಕೊಂಡಿರುವ ಮೊಬೈಲ್‌ ನಂಬರ್‌ನ ನಕಲಿ ಸಿಮ್‌ ಕಾರ್ಡ್‌ನ್ನು ಈ ಹಿಂದೆ ಸೇವೆ ಪಡೆಯುತ್ತಿದ್ದ ಸರ್ವಿಸ್‌ ಪ್ರೊವೈಡರ್‌ನಿಂದ(ಉದಾ: ಏರ್‌ಟೆಲ್‌, ಜಿಯೋ, ಬಿಎಸ್‌ಎನ್‌ಎಲ್‌ ಇತ್ಯಾದಿ) ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಓಟಿಪಿ ಪಡೆಯಲು ಅದನ್ನು ಚಾಲನೆ ಮಾಡಿಟ್ಟುಕೊಳ್ಳಬೇಕು. ಅನಂತರ http://www.ceir.gov.in ವೆಬ್‌ಸೈಟ್‌ನಲ್ಲಿ ಕಳೆದುಕೊಂಡ ಮೊಬೈಲ್‌ ಫೋನ್‌ನ ಮಾಹಿತಿ ನಮೂದಿಸಬೇಕು. ಮಾಹಿತಿ ನಮೂದಿಸಿದ 24 ಗಂಟೆಗಳೊಳಗೆ ಮೊಬೈಲ್‌ಫೋನ್‌ ಬ್ಲಾಕ್‌ ಆಗುತ್ತದೆ. ಒಂದು ವೇಳೆ ಮೊಬೈಲ್‌ ಫೋನ್‌ ಪತ್ತೆಯಾದರೆ CEIR ಪೋರ್ಟಲ್‌ನಲ್ಲಿ ಲಾಗಿನ್‌ ಆಗಿ ಅನ್‌ಬ್ಲಾಕ್‌ ಮಾಡಿ ಉಪಯೋಗಿಸಬಹುದು.

ಸಿಗುವ ವಿಶ್ವಾಸ ಇರಲಿಲ್ಲ : ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಗುರುವಾರ ಸಂಜೆ 34 ಮಂದಿಯನ್ನು ಕರೆದು ಅವರ ಮೊಬೈಲ್ ಗಳನ್ನು ಹಿಂತಿರುಗಿಸಿದ್ದಾರೆ. ಅಲ್ಲದೆ, ಈ ಏಪ್ ಕಾರ್ಯ ನಿರ್ವಹಣೆ ಮತ್ತು ಅದಕ್ಕೆ ಸಾರ್ವಜನಿಕರೇ ನೇರವಾಗಿ ದೂರು ಸಲ್ಲಿಕೆ ಮಾಡಬಹುದು ಎನ್ನುವ ಬಗ್ಗೆಯೂ ವಿವರಣೆ ನೀಡಿದ್ದಾರೆ. ಮಂಗಳೂರಿನ ಪ್ರೀತಿಶ್ ಎಂಬವರು ಕೆಲವು ದಿನಗಳ ಹಿಂದಷ್ಟೇ ಮೊಬೈಲ್ ಕಳಕೊಂಡಿದ್ದರು. ಅದು ಮರಳಿ ಸಿಗುವ ಸಾಧ್ಯತೆ ಇಲ್ಲ ಎಂದೇ ನಂಬಿದ್ದರು. ಆದರೂ ದೂರು ಕೊಟ್ಟು ಬಿಡೋಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೂರಿತ್ತ ಎರಡೇ ದಿನದಲ್ಲಿ ಮೊಬೈಲನ್ನು ಪೊಲೀಸರು ಟ್ರೇಸ್ ಮಾಡಿದ್ದು, ಗುರುವಾರ ಪ್ರೀತಿಶ್ ಕೈಗಿತ್ತಿದ್ದಾರೆ.

ಶ್ರಾವ್ಯಾ, ವಿದ್ಯಾರ್ಥಿನಿ ಬಿಜೈ  6 ತಿಂಗಳ ಹಿಂದೆ ಕಳೆದುಕೊಂಡಿದ್ದೆ : ಸೆ.29ಕ್ಕೆ ಕುದ್ರೋಳಿ ಜಾತ್ರೆಯ ಸಂದರ್ಭ ನನ್ನ ಬ್ಯಾಗ್‌ನ ಒಳಗಿದ್ದ ಮೊಬೈಲ್‌ ಕಳವಾಗಿತ್ತು. ಬಂದರು ಪೊಲೀಸರಿಗೆ ದೂರು ನೀಡಿದ್ದೆ. ಕೊರಗಜ್ಜನಿಗೂ ಪ್ರಾರ್ಥನೆ ಮಾಡಿದ್ದೆ. ನಾನು ಆನ್‌ಲೈನ್‌ನಲ್ಲಿ ಮೊಬೈಲ್‌ ಪತ್ತೆಯ ಬಗ್ಗೆ ಹುಡುಕುತ್ತಾ ಇದ್ದೆ. ಆಗ ಸಿಇಐಆರ್‌ ವೆಬ್‌ಸೈಟ್‌ ಬಗ್ಗೆ ಗೊತ್ತಾಯಿತು. ಅದರಲ್ಲಿ ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮಾಹಿತಿ ಹಾಗೂ ಮೊಬೈಲ್‌ಗೆ ಸಂಬಂಧಿಸಿದ ಮಾಹಿತಿ ನಮೂದಿಸಿದ್ದೆ. ಈಗ ನನ್ನ ಮೊಬೈಲ್‌ ಸಿಕ್ಕಿದೆ.

ಡಿಸಿಪಿಗಳಾದ ಅಂಶುಕುಮಾರ್‌, ದಿನೇಶ್‌ ಕುಮಾರ್‌, ಎಸಿಪಿ ಪಿ.ಎ ಹೆಗಡೆ ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ ಕೋಟೆಪುರ ; ದೆಹಲಿ ಮೂಲದ ಮಹಿಳೆಯನ್ನ ಚೂರಿಯಿಂದ ಇರಿದು ಹತ್ಯೆ

Next Post

ಶಿರಾಡಿ ಹಾಗೂ ಅಡ್ಡಹೊಳೆ ಸರ್ವೀಸ್ ರಸ್ತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ; ಎನ್ ಹೆಚ್ ಎ ಯೋಜನಾ ನಿರ್ದೇಶಕರಿಂದ ಬೇಡಿಕೆ ಈಡೇರಿಕೆ ಭರವಸೆ

Related Posts

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ
ಕರಾವಳಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
20
ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ
ಕರಾವಳಿ

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

July 21, 2026
29
Next Post
ಶಿರಾಡಿ ಹಾಗೂ ಅಡ್ಡಹೊಳೆ ಸರ್ವೀಸ್ ರಸ್ತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ; ಎನ್ ಹೆಚ್ ಎ ಯೋಜನಾ ನಿರ್ದೇಶಕರಿಂದ ಬೇಡಿಕೆ ಈಡೇರಿಕೆ ಭರವಸೆ

ಶಿರಾಡಿ ಹಾಗೂ ಅಡ್ಡಹೊಳೆ ಸರ್ವೀಸ್ ರಸ್ತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ; ಎನ್ ಹೆಚ್ ಎ ಯೋಜನಾ ನಿರ್ದೇಶಕರಿಂದ ಬೇಡಿಕೆ ಈಡೇರಿಕೆ ಭರವಸೆ

Discussion about this post

Recent News

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
20
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
33
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

July 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d