• About us
  • Contact us
  • Disclaimer
Wednesday, July 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಿಜಿ ವೆಲ್ತ್ ಷೇರಿಂಗ್ ಹೆಸರಿನ ವಿದೇಶಿ ಕಂಪನಿಗೆ ಡಾಲರ್ ಲೆಕ್ಕದಲ್ಲಿ ಹೂಡಿಕೆ ಮಾಡಿ, ಕೋಟಿ! ಕೋಟಿ!.. ಕಳಕೊಂಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನರು

Coastal Times by Coastal Times
May 16, 2026
in ಕರಾವಳಿ, ಕ್ರೈಮ್ ನ್ಯೂಸ್
ಬಿಜಿ ವೆಲ್ತ್ ಷೇರಿಂಗ್ ಹೆಸರಿನ ವಿದೇಶಿ ಕಂಪನಿಗೆ ಡಾಲರ್ ಲೆಕ್ಕದಲ್ಲಿ ಹೂಡಿಕೆ ಮಾಡಿ, ಕೋಟಿ! ಕೋಟಿ!.. ಕಳಕೊಂಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನರು
201
VIEWS
WhatsappTelegramShare on FacebookShare on Twitter

ಮಂಗಳೂರು, ಮೇ 16: ಬಿಜಿ ವೆಲ್ತ್ ಷೇರಿಂಗ್ (BG Wealth Sharing) ಎನ್ನುವ ಹೆಸರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ, ಅದರ ಮೂಲಕ ಪರ್ಯಾಯ ರೂಪದಲ್ಲಿ ಹಣ ಗಳಿಕೆಯ ಬಗ್ಗೆ ನಂಬಿಸಲಾಗಿತ್ತು. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಕಳೆದೊಂದು ವರ್ಷದಲ್ಲಿ ಈ ನೆಟ್ವರ್ಕ್ ಬಿಸ್ನೆಸ್ ಭಾರೀ ಫೇಮಸ್ ಆಗಿದ್ದು ಹಣ ಇದ್ದವರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಈಗ ದಿಢೀರ್ ಎನ್ನುವಂತೆ ಕಂಪನಿ ಕಡೆಯಿಂದ ಸ್ಪಂದನೆ ಇಲ್ಲವಾಗಿದ್ದು, ದೋಖಾ ಕಂಪನಿಯ ಮೋಸ ಈಗ ಬಯಲಾಗಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸಾವಿರಾರು ಜನರು ವಂಚನೆಗೆ ಬಿದ್ದು ಕೋಟ್ಯಂತರ ರೂಪಾಯಿ ಕಳಕೊಂಡಿದ್ದಾರೆಂಬ ಸುದ್ದಿ ಹಬ್ಬಿದೆ. ಹಣ ಹೂಡಿಕೆ ಮಾಡಿದವರು ಕಂಗಾಲಾಗಿದ್ದಾರೆ.

ಮೇಲ್ನೋಟಕ್ಕೆ ಅಮೆರಿಕ, ಕೆನಡಾ ಮೂಲದ ಕಂಪನಿ ಎನ್ನಲಾಗುತ್ತಿದ್ದು, ಆಸ್ಟ್ರೇಲಿಯಾದಲ್ಲಿ ರಿಜಿಸ್ಟರ್ ಆಗಿ ಕ್ರಿಪ್ಟೋಕರೆನ್ಸಿ ಮೂಲಕ ವಹಿವಾಟು ನಡೆಸುತ್ತಿರುವುದಾಗಿ ಹೇಳಿಕೊಂಡು ಬಂದಿದೆ. ಚಿನ್ನ, ಕಚ್ಚಾತೈಲ, ಕ್ರಿಪ್ಟೋ ಕರೆನ್ಸಿಗಳ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಅವುಗಳ ಮೇಲಿನ ಹೂಡಿಕೆಯಿಂದ ಷೇರು ಮಾರ್ಕೆಟ್ ರೀತಿಯಲ್ಲೇ ಇಂತಿಷ್ಟು ಲಾಭ ನೀಡುತ್ತಿರುವುದಾಗಿ ಹೂಡಿಕೆದಾರರನ್ನು ನಂಬಿಸಲಾಗಿತ್ತು. ಉಡುಪಿ ಭಾಗದಲ್ಲಿ ಮೊದಲಿಗೆ ಪ್ರದೀಪ್ ಆಚಾರ್ಯ ಎಂಬವರು ಬಿಜಿ ವೆಲ್ತ್ ಷೇರಿಂಗ್ ಬಿಸ್ನೆಸ್ ಅನ್ನು ಪ್ರಚಾರ ಪಡಿಸಿದ್ದರು. ಆನಂತರ, ಉಡುಪಿ, ಮಂಗಳೂರು ಭಾಗದ ಓರಗೆಯ ಗೆಳೆಯರು ಕ್ರಿಪ್ಟೋ ಹೆಸರಲ್ಲಿ ಹೂಡಿಕೆ ಮಾಡುತ್ತ ಬಂದಿದ್ದರು.

ಡಾಲರ್ ಲೆಕ್ಕದಲ್ಲಿ ಕೋಟಿ ಕೋಟಿ ಹೂಡಿಕೆ ; ಪೂರ್ತಿ ವಿದೇಶಿ ಕಂಪನಿಯಾಗಿದ್ದರಿಂದ ಡಾಲರ್ ಲೆಕ್ಕದಲ್ಲಿ ಇದರ ಹೂಡಿಕೆ, ಜೊತೆಗೆ ಎಲ್ಲವೂ ವಿದೇಶದಿಂದಲೇ ಕಂಟ್ರೋಲ್ ಇತ್ತು. ಕಂಪನಿ ಹೆಸರಲ್ಲಿ ಫೇಸ್ಬುಕ್ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಲಾಗಿದ್ದು, ಹೂಡಿಕೆ ಹೇಗೆ, ಲಾಭ ಗಳಿಕೆ ಹೇಗೆ ಎನ್ನುವ ಬಗ್ಗೆ ಮಾಹಿತಿಗಳನ್ನು ನೀಡಲಾಗಿತ್ತು. ಕನಿಷ್ಠ 300 ಡಾಲರ್ ಹೂಡಿಕೆ, ಹೆಚ್ಚು ಎಷ್ಟು ಬೇಕಾದರೂ ಮಾಡಬಹುದೆಂದು ತಿಳಿಸಲಾಗಿತ್ತು. 300 ಡಾಲರ್ ನಷ್ಟು ಹೂಡಿಕೆ ಮಾಡಿದರೆ ದಿನಕ್ಕೆ 3-4 ಡಾಲರ್ ಲಾಭ ಬರುತ್ತದೆ, ಇದರ ಜೊತೆಗೆ ಹೆಚ್ಚುವರಿ ಹೂಡಿಕೆದಾರರನ್ನು ಸೇರಿಸಿದರೆ ಹತ್ತು ಪರ್ಸೆಂಟ್ ಕಮಿಷನ್ ಬರುತ್ತದೆ ಎಂದು ತಿಳಿಸಲಾಗಿತ್ತು. ಇದೇ ಪ್ರಕಾರ, ಹೆಚ್ಚಿನವರಿಗೆ ರಿಟರ್ನ್ಸ್ ಬರುತ್ತಿತ್ತು ಎಂದು ಹೂಡಿಕೆ ಮಾಡಿದವರು ಹೇಳುತ್ತಾರೆ. ಇಲ್ಲಿ ದೂಡ್ಡ ದೊಡ್ಡ ನೆಟ್ ವರ್ಕ್ ಲೀಡರ್ ಗಳು ಶ್ರೀಮಂತರಿಂದ ಕೋಟಿ ಕೋಟಿ ಈ ಬಿಜಿ ವೆಲ್ತ್ ಷೇರಿಂಗ್ (BG Wealth Sharing) ಹೂಡಿಕೆ ಮಾಡಿಸಿ ತಿಂಗಳಿಗೆ 18 ಲಕ್ಷಕ್ಕೊ ಹೆಚ್ಚು ಕಮಿಷನ್ ಗಳಿಸಿದವರು ಇದ್ದಾರೆ.

ಕ್ರಿಪ್ಟೋ ವ್ಯಾಲೆಟ್ ನಲ್ಲಿ ಹೂಡಿಕೆಯ ಮಾಹಿತಿ ಮತ್ತು ಷೇರು ಮಾರುಕಟ್ಟೆಯ ರೀತಿ ಏರಿಳಿತಗಳನ್ನು ಏಪ್ ನಲ್ಲಿ ತೋರಿಸುತ್ತಿದ್ದರು. ಒಬ್ಬ ಹೂಡಿಕೆ ಮಾಡಿದರೆ, ಆತನ ಹೆಸರಲ್ಲಿ ಹೊಸ ಕೋಡ್ ಏಕ್ಟಿವ್ ಮಾಡುತ್ತಿದ್ದರು. ದಿನವೂ ರಿಟರ್ನ್ಸ್ ಬರುತ್ತಿರುವುದನ್ನು ನೋಡಿ ಬೇರೆ ಬೇರೆ ನೆಟ್ವರ್ಕ್ ವ್ಯವವಹಾರದಲ್ಲಿ ತೊಡಗಿಸಿದ್ದವರು ಹೂಡಿಕೆ ಮಾಡಲಾರಂಭಿಸಿದ್ದರು. ಎಲ್ಲವೂ ಎಐ ಜನರೇಟೆಡ್ ಏಪ್ ನಲ್ಲಿ ವ್ಯವಹಾರ ನಡೆಯುತ್ತಿತ್ತು. ಭಾರತದ ರೂಪಾಯಿ ಕರೆನ್ಸಿಯನ್ನು ಡಾಲರಿಗೆ ಪರಿವರ್ತಿಸಿ ಕಂಪನಿಗೆ ಹೂಡಿಕೆ ಮಾಡುತ್ತಿದ್ದರೂ, ಇದನ್ನು ಯಾರು ನಿಯಂತ್ರಣ ಮಾಡುತ್ತಿದ್ದಾರೆ, ಇದು ನಿಜಕ್ಕೂ ಭಾರತದ ಕಾನೂನು ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿದೆಯಾ ಎನ್ನುವ ಬಗ್ಗೆ ಯಾರೂ ಚಿಂತಿಸಿರಲಿಲ್ಲ. ಕೆಲವರು ಅಪನಂಬಿಕೆಯಲ್ಲೇ ಹೂಡಿಕೆ ಮಾಡಿದ್ದರೆ, ಕೆಲವರು ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಬರುತ್ತದೆಯೆಂದು ಹೆಚ್ಚೆಚ್ಚು ಮೊತ್ತವನ್ನು ವ್ಯಾಲೆಟ್ ಗೆ ಹಾಕಿದ್ದರು.

ಈಗ ಕಟ್ಟಿದ ಹಣವನ್ನಾದರೂ ಹಿಂತಿರುಗಿಸಲು ಮನವಿ ಮಾಡಿದರೆ 20 ಶೇ. ಟ್ಯಾಕ್ಸ್, 12 ಶೇ. ಶುಲ್ಕ ಸೇರಿ 32 ಶೇ. ಹೆಚ್ಚುವರಿ ಮೊತ್ತವನ್ನು ಕಟ್ಟಲು ಸೂಚಿಸಲಾಗಿದೆಯಂತೆ. ಮಂಗಳೂರಿನ ವ್ಯಕ್ತಿಯೊಬ್ಬರು ಇದೇ ಪ್ರಕಾರ, 7 ಲಕ್ಷ ರೂ. ಟ್ಯಾಕ್ಸ್ ಕಟ್ಟಿದರೂ ತಾನು ಕಟ್ಟಿದ ಹಣ ಬಂದಿಲ್ಲ ಎಂದು ನೊಂದುಕೊಂಡಿದ್ದಾರೆ. ಇದೇ ರೀತಿ ಹಲವಾರು ಮಂದಿ ಹೂಡಿಕೆ ಮಾಡಿದ್ದು ಗರಿಷ್ಠ ಲಾಭಕ್ಕೆ ಹೋಗಿ ಗುನ್ನಾ ತೋಡಿಕೊಂಡಿದ್ದಾರೆ. ಪಕ್ಕಾ ವಿದೇಶಿ ಕಂಪನಿ ಮತ್ತು ಭಾರತಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲದಿರುವುದರಿಂದ ಪೊಲೀಸ್ ಕೇಸು ಕೊಡುವುದಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ.

ಗೂಗಲ್ ನಲ್ಲಿ ಮಾಹಿತಿ ಕೇಳಿದರೆ, ಅಮೆರಿಕದಲ್ಲಿ ಈ ಕಂಪನಿಯ ವೆಬ್ ಸೈಟ್ ಸೀಜ್ ಮಾಡಲಾಗಿದ್ದು, 150 ಮಿಲಿಯನ್ ಡಾಲರ್ ವಹಿವಾಟು ಆಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದಲ್ಲದೆ, 41 ಮಿಲಿಯನ್ ಡಾಲರ್ ಮೊತ್ತವನ್ನು ಅಮೆರಿಕದ ತನಿಖಾ ಏಜನ್ಸಿಗಳು ಸೀಜ್ ಮಾಡಿರುವುದಾಗಿ ಮಾಹಿತಿ ಇದೆ. ಈಗ ಹಾಕಿರುವ ಹಣ ಹಿಂತೆಗೆಯಲು 12 ಶೇ. ಶುಲ್ಕದ ಹೆಸರಲ್ಲಿ ಗ್ರಾಹಕರನ್ನು ಮತ್ತೊಮ್ಮೆ ಯಾಮಾರಿಸುವ ಯತ್ನ ಆಗುತ್ತಿರುವುದಾಗಿಯೂ ಅಮೆರಿಕದ ಮಾಧ್ಯಮಗಳು ಹೇಳುತ್ತಿವೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ರಾಜ್ಯ ಮಟ್ಟದಲ್ಲಿ ಮಿಂಚಿದ ಚಿಂತನ್ ಎಸ್ ಶೆಟ್ಟಿ; ರಾಷ್ಟ್ರೀಯ ಜಲಕ್ರೀಡಾಕೂಟಕ್ಕೆ ಕರ್ನಾಟಕ ತಂಡಕ್ಕೆ ಆಯ್ಕೆ

Next Post

ಬೆಳಗಾವಿ: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್

Related Posts

ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್
ಕರಾವಳಿ

ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

June 30, 2026
33
ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕ್ನನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್
ಕರಾವಳಿ

ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕ್ನನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್

June 30, 2026
43
Next Post
ಬೆಳಗಾವಿ: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್

ಬೆಳಗಾವಿ: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್

Discussion about this post

Recent News

ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

June 30, 2026
33
ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕ್ನನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್

ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕ್ನನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್

June 30, 2026
43
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

June 30, 2026
ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕ್ನನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್

ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕ್ನನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್

June 30, 2026
ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

June 29, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d