• About us
  • Contact us
  • Disclaimer
Thursday, March 5, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್, ಅತ್ಯಾಚಾರ ಯತ್ನ: ಕೇರಳದ ಪೆರಿಂಗೋಟ್ಟುಕ್ಕಾರದ ಅರ್ಚಕನ ಬಂಧನ

Coastal Times by Coastal Times
June 16, 2025
in ಕ್ರೈಮ್ ನ್ಯೂಸ್
ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್, ಅತ್ಯಾಚಾರ ಯತ್ನ: ಕೇರಳದ ಪೆರಿಂಗೋಟ್ಟುಕ್ಕಾರದ ಅರ್ಚಕನ ಬಂಧನ
107
VIEWS
WhatsappTelegramShare on FacebookShare on Twitter

ಬೆಂಗಳೂರು, ಜೂನ್ 16: ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಮಾಡಿದ ಆರೋಪದಲ್ಲಿ ಕೇರಳದ  ಪೆರಿಂಗೋಟ್ಟುಕ್ಕಾರ ದೇವಸ್ಥಾನದ  ಅರ್ಚಕ ಅರುಣ್ ಎಂಬಾತನನ್ನು ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ, ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಪೂಜೆ ಮಾಡಿಸಲೆಂದು ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ ಮಾಂತ್ರದ ಬೆದರಿಕೆಯೊಡ್ಡಿ ಮುಖ್ಯ ಅರ್ಚಕ ಹಾಗೂ ಅರ್ಚಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ, ತಮಗೆ ಮಾಟಮಂತ್ರವಿದೆ ಎಂದು ಭಾವಿಸಿ, ಪೆರಿಗೊಟ್ಟುಕ್ಕಾರ ದೇವಾಲಯಕ್ಕೆ ಪೂಜೆಗಾಗಿ ಭೇಟಿ ನೀಡಿದ್ದರು. ಈ ವೇಳೆ ದೇವಾಲಯದ ಅರ್ಚಕ ಅರುಣ್‌ ಜೊತೆ ಪರಿಚಯವಾಯಿತು. ಅರುಣ್‌, 24 ಸಾವಿರ ರೂಪಾಯಿ ನೀಡಿದರೆ ವಿಶೇಷ ಪೂಜೆ ಮಾಡುವುದಾಗಿ ಭರವಸೆ ನೀಡಿದ್ದ. ಬಳಿಕ ಮಹಿಳೆಯ ಮೊಬೈಲ್‌ ಸಂಖ್ಯೆ ಪಡೆದು, ನಿಗದಿತ ದಿನದಂದು ದೇವಾಲಯಕ್ಕೆ ಬರಲು ಸೂಚಿಸಿದ್ದ.

ಕೆಲವು ದಿನಗಳ ಬಳಿಕ, ಅರುಣ್‌ ತಡರಾತ್ರಿಯಲ್ಲಿ ಮಹಿಳೆಗೆ ನಿರಂತರ ವಾಟ್ಸ್‌ಆ್ಯಪ್‌ ಕರೆಗಳನ್ನು ಮಾಡಲಾರಂಭಿಸಿದ. ಈ ಕರೆಗಳಲ್ಲಿ ಆತ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. “ನಿಮಗೆ ಮಾಡಿರುವ ಮಾಟಮಂತ್ರ ತೆಗೆಯಬೇಕಾದರೆ ಬೆತ್ತಲಾಗಬೇಕು” ಎಂದು ಒತ್ತಾಯಿಸಿದ್ದಾನೆ.ಮಹಿಳೆ ಇದನ್ನು ನಿರಾಕರಿಸಿದಾಗ, “ಬೆತ್ತಲಾಗದಿದ್ದರೆ, ನಿಮ್ಮ ಇಬ್ಬರು ಮಕ್ಕಳು ಸಾಯುವಂತೆ ರಿಟರ್ನ್‌ ಪೂಜೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.

ಅರುಣ್‌ನ ಬೆದರಿಕೆಗೆ ಭಯಗೊಂಡ ಮಹಿಳೆ, ಒತ್ತಾಯಕ್ಕೆ ಮಣಿದು ಬೆತ್ತಲೆಯಾದಾಗ, ಆತ ಆ ಕ್ಷಣವನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾನೆ. ಈ ವಿಡಿಯೋ ಬಳಸಿ, ಮಹಿಳೆಯನ್ನು ಕೇರಳಕ್ಕೆ ಕರೆಸಿದ್ದಾನೆ. “ನೀವು ಬಂದರೆ ರೂಂ ಬುಕ್‌ ಮಾಡುತ್ತೇನೆ” ಎಂದು ಹಿಂಸೆ ನೀಡಿದ್ದಾನೆ. ಈ ಒತ್ತಡಕ್ಕೆ ಸಿಲುಕಿ, ಮಹಿಳೆ ಕೇರಳಕ್ಕೆ ತೆರಳಿದ್ದಾರೆ. ಕೇರಳದಲ್ಲಿ, ಅರುಣ್‌ ಮತ್ತು ಮುಖ್ಯ ಅರ್ಚಕ ಉನ್ನಿ ದಾಮೋದರನ್‌ ಇಬ್ಬರೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮಹಿಳೆ ಉಲ್ಲೇಖಿಸಿದ್ದಾರೆ.

ಇಬ್ಬರ ಹಿಂಸೆಗೆ ಬೇಸತ್ತ ಮಹಿಳೆ, ಬೆಂಗಳೂರಿನ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಡರಾತ್ರಿ ಅರುಣ್‌ ಕಳುಹಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಮತ್ತು ರೂಂಗೆ ಬರಲು ಒತ್ತಾಯಿಸಿದ ಕರೆಯ ರೆಕಾರ್ಡಿಂಗ್‌ಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಅರುಣ್‌ನನ್ನು ಬಂಧಿಸಿದ್ದಾರೆ. ಆದರೆ, ಮುಖ್ಯ ಆರೋಪಿ ಉನ್ನಿ ದಾಮೋದರನ್‌ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ನೀರುಮಾರ್ಗ, ಪುದುವಿನಲ್ಲಿ ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ ಎದೆನಡುಗಿಸುತ್ತೆ ಭಯಾನಕ ದೃಶ್ಯ!

Next Post

ಪುತ್ತೂರು: ಪುತ್ತಿಲ ಪರಿವಾರದ ಮುಖಂಡನ ಪತ್ನಿ, ಏಳು ತಿಂಗಳ ಗರ್ಭಿಣಿ ಆತ್ಮಹತ್ಯೆ

Related Posts

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ
ಕ್ರೈಮ್ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
101
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು
ಕ್ರೈಮ್ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು

March 3, 2026
74
Next Post
ಪುತ್ತೂರು: ಪುತ್ತಿಲ ಪರಿವಾರದ ಮುಖಂಡನ ಪತ್ನಿ, ಏಳು ತಿಂಗಳ ಗರ್ಭಿಣಿ ಆತ್ಮಹತ್ಯೆ

ಪುತ್ತೂರು: ಪುತ್ತಿಲ ಪರಿವಾರದ ಮುಖಂಡನ ಪತ್ನಿ, ಏಳು ತಿಂಗಳ ಗರ್ಭಿಣಿ ಆತ್ಮಹತ್ಯೆ

Discussion about this post

Recent News

ಮಂಗಳೂರು: 2025 26ನೇ ಸಾಲಿನಲ್ಲಿ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomus status) ಪಡೆದಿದೆ.

ಮಂಗಳೂರು: 2025 26ನೇ ಸಾಲಿನಲ್ಲಿ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomus status) ಪಡೆದಿದೆ.

March 4, 2026
13
ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

March 4, 2026
29
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: 2025 26ನೇ ಸಾಲಿನಲ್ಲಿ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomus status) ಪಡೆದಿದೆ.

ಮಂಗಳೂರು: 2025 26ನೇ ಸಾಲಿನಲ್ಲಿ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomus status) ಪಡೆದಿದೆ.

March 4, 2026
ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

March 4, 2026
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d