ಮಂಗಳೂರು: ಮಂಗಳೂರಿನ ಬಜರಂಗದಳದ ಮುಖಂಡ ಪುನೀತ್ ಅತ್ತಾವರರನ್ನು ಮಂಡ್ಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಡ್ಯದ ಪಾಂಡವಪುರದ RSS ಕಾರ್ಯಲಯಕ್ಕೆ ಆಗಮಿಸುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮ ವರದಿಯಾಗಿದೆ. ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಸಂಧರ್ಭ ನಡೆದ ಹಿಂಸಾಚಾರ ನಂತರ ಪೊಲೀಸರು ಬಿಗಿ ಬಂದೋಬಸ್ತ್ ಹಾಕಿದ್ದಾರೆ.
ಈ ನಡುವೆ ಮಂಗಳೂರಿನ ಬಂಟ್ವಾಳದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಮಾಡಿದ್ದ ಭಾಷಣಕ್ಕೆ ವ್ಯಕ್ತಿಯೋರ್ವ ಆಡಿಯೋ ರಿಲೀಸ್ ಮಾಡಿದ್ದು ತಾಕತ್ತಿದ್ದರೆ ಸೋಮವಾರದ ಈದ್ ಮಿಲಾದ್ ರ್ಯಾಲಿ ತಡೆಯಿರಿ ಎಂದು ಸವಾಲೋಡಿದ್ದರು. ಈ ಸವಾಲು ಸ್ವೀಕರಿಸಿದ ಪುನೀತ್ ಅತ್ತಾವರ ಬಿ.ಸಿ ರೋಡ್ ಚಲೋ ಮಾಡುವುದಾಗಿ ಘೋಷಿಸಿದ್ದರು. ಈ ನಡುವೆ ಮಧ್ಯರಾತ್ರಿ ಪೊಲೀಸರು ಪುನೀತ್ ಅತ್ತಾವರರನ್ನು ಮಂಡ್ಯದಲ್ಲಿ ವಶಕ್ಕೆ ಪಡೆದಿದ್ದಾರೆ.
ಆಡಿಯೋ ರಿಲೀಸ್ ಮಾಡಿದ ಓರ್ವ ಪೊಲೀಸ್ ವಶಕ್ಕೆ : ಶರಣ್ ಪಂಪ್ವೆಲ್ ಮಾಡಿದ್ದ ಭಾಷಣಕ್ಕೆ ಸವಾಲೆಸೆದ ಬಂಟ್ವಾಳದ ಇಬ್ಬರಲ್ಲಿ ಓರ್ವ ಕಾಂಗ್ರೇಸ್ ಮುಖಂಡ ಮಹಮ್ಮದ್ ಶರೀಫ್ ಎಂಬವರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆಡಿಯೋ ಬಿಡುಗಡೆ ಮಾಡಿದ ಹಸೈನರ್ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ.
ಕೋಮು ಗಲಾಬೆ ಎಬ್ಬಿಸುವ ಯತ್ನ ನಡೆಯುತ್ತಿದೆ ಎಂಬ ಗುಪ್ತಚಾರ ಇಲಾಖೆಯ ಮಾಹಿತಿ ಮೆರೆಗೆ ಪೊಲೀಸರು ಇತ್ತಂಡಗಳಿಂದಲೂ ವಶಕ್ಕೆ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಕಾರಿ ಸಂದೇಶ ರವಾನಿಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post