ಮಂಗಳೂರು: ಸಾಕಷ್ಟು ಪ್ರತಿರೋಧದ ಮಧ್ಯೆಯೂ ಪಾವೂರು ಉಳಿಯ ದ್ವೀಪದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ತಡೆಯಲು ವಿಫಲವಾದ ಆಡಳಿತ ವ್ಯವಸ್ಥೆಯ ನೀತಿಯನ್ನು ಖಂಡಿಸಿ ಱಒಂದೋ ಬದುಕಿಸಿ- ಇಲ್ಲವೇ ಸಾಯಿಸಿೞ ಎಂಬ ಘೋಷಣೆಯೊಂದಿಗೆ ಪಾವೂರು ಉಳಿಯ ದ್ವೀಪದ ನಿವಾಸಿಗಳು ರವಿವಾರ ನದಿನೀರಿನಲ್ಲಿ ನಿಂತು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಅಂಗವಾಗಿ ಮಾನವ ಸರಪಳಿ ನಡೆಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸಾರ್ವಜನಿಕರನ್ನು ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಮರಳು ಧಂದೆಯಿಂದಾಗಿ ಪಾವೂರು ಉಳಿಯ ದ್ವೀಪದ ಬರೋಬ್ಬರಿ 40 ಎಕರೆ ಭೂಭಾಗವೇ ಸರ್ವನಾಶ ಆಗಿದೆ ಎನ್ನಲಾಗುತ್ತಿದೆ. ಹೀಗಿದ್ದರೂ ಮರಳು ದಂಧೆಕೋರರು ಆಗಿಂದಾಗ್ಗೆ ದ್ವೀಪವನ್ನು ಅಗೆದು ಮರಳು ತೆಗೆಯುತ್ತಿದ್ದಾರೆ. ಇದನ್ನು ಖಂಡಿಸಿ, ಮರಳು ಮಫಿಯಾ ವಿರುದ್ದ ಗ್ರಾಮಸ್ಥರು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದ್ದಾರೆ.
ಮೂರು ತಿಂಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ದ್ವೀಪದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೆಡಿಪಿ ಸಭೆಯಲ್ಲಿ ಮರಳು ದಂಧೆಗೆ ಕಡಿವಾಣ ಹಾಕುವಂತೆ ಸಚಿವರು ಸೂಚನೆ ನೀಡಿದ ಬೆನ್ನಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಳುಗಾರಿಕೆ ಸ್ಥಗಿತಗೊಳಿಸಿದ್ದರೂ ಇದೀಗ ಕೆಲವು ದಿನಗಳಿಂದ ಮತ್ತೆ ಈ ದ್ವೀಪ ಪ್ರದೇಶದಲ್ಲಿ ಅಕ್ರಮ ಮರಳು ಗಾರಿಕೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post