• About us
  • Contact us
  • Disclaimer
Tuesday, July 14, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರಿನಲ್ಲಿ ಜೂನ್ 4 ರಿಂದ 13 ರವರೆಗೆ ರಾಷ್ಟ್ರೀಯ ʻಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026′ ಬ್ರಿಡ್ಜ್ ಪಂದ್ಯಾವಳಿ

Coastal Times by Coastal Times
May 28, 2026
in ಕರಾವಳಿ
ಮಂಗಳೂರಿನಲ್ಲಿ ಜೂನ್ 4 ರಿಂದ 13 ರವರೆಗೆ ರಾಷ್ಟ್ರೀಯ ʻಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026′ ಬ್ರಿಡ್ಜ್ ಪಂದ್ಯಾವಳಿ
18
VIEWS
WhatsappTelegramShare on FacebookShare on Twitter

ಮಂಗಳೂರು, ಮೇ 28: ಪ್ರತಿಷ್ಠಿತ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯು 2026ರ ಜೂನ್ 4 ರಿಂದ ಜೂನ್ 13 ರವರೆಗೆ ಮಂಗಳೂರಿನ ಸೆಂಟ್ ಸೆಬಾಸ್ಟಿಯನ್ ಸೆಂಟಿನರಿ ಸಭಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಭಾರತೀಯ ಬ್ರಿಡ್ಜ್ ಫೆಡರೇಷನ್ (Bridge Federation of India) ಮತ್ತು ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ತತ್ವಾವಧಾನದಲ್ಲಿ, ಮಂಗಳೂರಿನ ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ಆಯೋಜಿಸಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಮಾರ್ಜೊರಿ ಟಿಕ್ಸೇರಾ ತಿಳಿಸಿದ್ದಾರೆ.

ಈ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾರತದಾದ್ಯಂತ ಹಾಗೂ ಪೋಲೆಂಡ್‌ನಿಂದ ವಿಶ್ವ ಚಾಂಪಿಯನ್ ಆಗಿರುವ ಶ್ರೀ ಬುರಾಸ್ ಕ್ರಿಸ್ತೋಫ್ ಜೆರ್ಜಿ, ಶ್ರೀ ಡೊಮಿನಿಕ್ ಫಿಲೋಪೋವಿಚ್, ಶ್ರೀ ಜಾಕೋಬ್ ಪಾತ್ರೆಹುವಾ ಮತ್ತು ಶ್ರೀ ಪ್ಯಾಟ್ರಿಕ್ ಪಾತ್ರೆಹುವಾ ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕ್ರೀಡಾಕೂಟವು ಮಂಗಳೂರನ್ನು ಭಾರತದ ಮತ್ತು ವಿಶ್ವದ ಬ್ರಿಡ್ಜ್ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದೆ. ಮಂಗಳೂರಿನ ಉತ್ತಮ ವಿಮಾನ ಹಾಗೂ ರೈಲು ಪ್ರಯಾಣದ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಆತಿಥ್ಯ ಮತ್ತು ಇಲ್ಲಿನ ವೈವಿಧ್ಯಮಯ ರುಚಿಕರವಾದ ಆಹಾರ ಪದ್ಧತಿಯು, ಭಾರತೀಯ ಬ್ರಿಡ್ಜ್ ಫೆಡರೇಷನ್ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ಇಲ್ಲಿಯೇ ನಡೆಸಲು ಸೂಕ್ತ ಆಯ್ಕೆಯಾಗಿದೆ.

ಪಂದ್ಯಾವಳಿಯ ಯಶಸ್ಸಿಗಾಗಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಡೆರೆಕ್ ರೇಗೊ ಅವರು ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕರಾವಳಿ ಬ್ರಿಡ್ಜ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಶ್ರೀಮತಿ ಮಾರ್ಜೋರಿ ಟೆಕ್ಸೇರಾ ಅವರು ಮಾತನಾಡಿ, “ಮನಸ್ಸಿನ ಆಟವಾಗಿರುವ (ಮೈಂಡ್ ಸ್ಪೋರ್ಟ್) ‘ಬ್ರಿಡ್ಜ್’ ಕ್ರೀಡೆಯನ್ನು ಮಂಗಳೂರಿನಲ್ಲಿ ಕಳೆದ 60 ವರ್ಷಗಳಿಂದ ಆಡಲಾಗುತ್ತಿದೆ. ಆದರೆ ಪ್ರಸ್ತುತ ತಲೆಮಾರಿನ ಯುವಕರು ಈ ಕ್ರೀಡೆಯನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರಿಸದ ಕಾರಣ, ಮಂಗಳೂರಿನಲ್ಲಿ ಇದರ ಆಟಗಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಆಟವು ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನ ಭಾಗವಾಗಿರುವುದರಿಂದ, ನಗರದ ಯುವಜನತೆ ಇದನ್ನು ಕಲಿಯಲು ಮತ್ತು ಆಡಲು ಆಸಕ್ತಿ ವಹಿಸುತ್ತಾರೆ ಎಂದು ನಂಬಿದ್ದೇನೆ,” ಎಂದು ಆಶಯ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಡೆರೆಕ್ ರೇಗೊ ಮತ್ತು ಖಜಾಂಚಿ ಪೀಟರ್ ಡಿಸೋಜ ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಆರೋಪಿಗಳ ಬಂಧನ

Next Post

ಮಂಗಳೂರು: ಮಕ್ಕಳಿಗೆ ಪ್ರಕೃತಿ ಮತ್ತು ಎಲ್ಲಾ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ: ಮಾತಾ ಅಮೃತಾನಂದಮಯಿ ದೇವಿ

Related Posts

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ
ಕರಾವಳಿ

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

July 13, 2026
26
“Mangalore IAS – A School for Civil Services” ಸಂಸ್ಥೆ ಉದ್ಘಾಟನೆ
ಕರಾವಳಿ

“Mangalore IAS – A School for Civil Services” ಸಂಸ್ಥೆ ಉದ್ಘಾಟನೆ

July 12, 2026
41
Next Post
ಮಂಗಳೂರು: ಮಕ್ಕಳಿಗೆ ಪ್ರಕೃತಿ ಮತ್ತು ಎಲ್ಲಾ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ: ಮಾತಾ ಅಮೃತಾನಂದಮಯಿ ದೇವಿ

ಮಂಗಳೂರು: ಮಕ್ಕಳಿಗೆ ಪ್ರಕೃತಿ ಮತ್ತು ಎಲ್ಲಾ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ: ಮಾತಾ ಅಮೃತಾನಂದಮಯಿ ದೇವಿ

Discussion about this post

Recent News

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

July 13, 2026
26
“Mangalore IAS – A School for Civil Services” ಸಂಸ್ಥೆ ಉದ್ಘಾಟನೆ

“Mangalore IAS – A School for Civil Services” ಸಂಸ್ಥೆ ಉದ್ಘಾಟನೆ

July 12, 2026
41
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

July 13, 2026
“Mangalore IAS – A School for Civil Services” ಸಂಸ್ಥೆ ಉದ್ಘಾಟನೆ

“Mangalore IAS – A School for Civil Services” ಸಂಸ್ಥೆ ಉದ್ಘಾಟನೆ

July 12, 2026
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ನಾಲ್ಕು ವರ್ಷಗಳಿಂದ ಅಡಗಿಕೊಂಡಿದ್ದ ಇಬ್ಬರು ಆರೋಪಿ ನೌಶಾದ್, ಅಬ್ದುಲ್ ನಾಸಿರ್ ಬಂಧನ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ನಾಲ್ಕು ವರ್ಷಗಳಿಂದ ಅಡಗಿಕೊಂಡಿದ್ದ ಇಬ್ಬರು ಆರೋಪಿ ನೌಶಾದ್, ಅಬ್ದುಲ್ ನಾಸಿರ್ ಬಂಧನ

July 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d