• About us
  • Contact us
  • Disclaimer
Sunday, July 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

Coastal Times by Coastal Times
May 30, 2026
in ಕ್ರೈಮ್ ನ್ಯೂಸ್
ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ
105
VIEWS
WhatsappTelegramShare on FacebookShare on Twitter

ಅಜ್ಮೀರ್, ಮೇ 30: ರಾಜಸ್ಥಾನದ ಅಜ್ಮೀರ್​ ಜಿಲ್ಲೆಯ ಮಾಜಿ ಸರಪಂಚ್ ರಾಮ್ ಸಿಂಗ್ ಚೌಧರಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಸಜೀವದಹನ ಪ್ರಕರಣಕ್ಕೆ ಇದೀಗ ದೊಡ್ಡ ತಿರುವುದು ಸಿಕ್ಕಿದೆ. ಆರಂಭದಲ್ಲಿ ಇದೊಂದು ಕಾರು ಅಪಘಾತ ಎನ್ನಲಾಗಿತ್ತು. ಆದರೆ, ಪೊಲೀಸರ ಹದ್ದಿನ ಕಣ್ಣಿನ ತನಿಖೆಯಿಂದಾಗಿ ಇದು ಅಪರಾಧ ಜಗತ್ತಿನ ವೆಬ್ ಸೀರೀಸ್ ನೋಡಿ, ಆಸ್ತಿಗಾಗಿ 17 ವರ್ಷದ ಮಗನೇ ರೂಪಿಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಘಟನೆಯ ನಂತರ ಇಡೀ ಕುಟುಂಬ ಕಣ್ಣೀರಿಡುತ್ತಿದ್ದರೆ, ರಾಮ್ ಸಿಂಗ್ ಅವರ 17 ವರ್ಷದ ಅಪ್ರಾಪ್ತ ಮಗ ಮಾತ್ರ ಶಾಂತನಾಗಿದ್ದ. ತನ್ನ ತಾಯಿ ಪಕ್ಕದಲ್ಲಿ ಕುಳಿತು ಆಕೆಯನ್ನು ಸಮಾಧಾನಪಡಿಸುತ್ತಾ, ಅತ್ಯಂತ ನಿರಾಳವಾಗಿ ಚಹಾ ಕುಡಿಯುತ್ತಿದ್ದ. ಸಾವಿನ ಮನೆಯಲ್ಲಿ ಬಾಲಕನ ಈ ಅಸಹಜ ನಡವಳಿಕೆಯೇ ಪೊಲೀಸರಿಗೆ ಮೊದಲ ಅನುಮಾನ ಮೂಡಿಸಿತು.

ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿನಲ್ಲಿಟ್ಟು ಬೆಂಕಿ ಹಚ್ಚಲಾಗಿತ್ತು. ಆದರೆ ಪೊಲೀಸರು ಸೂಕ್ಷ್ಮವಾಗಿ ಗಮನಿಸಿದಾಗ ಎರಡು ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ. ಕಾರು ಅಪಘಾತವಾಗಿದ್ದರೆ ಯಾರಾದರೂ ಒಬ್ಬರು ಡ್ರೈವಿಂಗ್ ಸೀಟಿನಲ್ಲಿ ಇರಬೇಕಿತ್ತು, ಆದರೆ ಎಲ್ಲಾ ನಾಲ್ಕು ಶವಗಳು ಹಿಂಬದಿಯ ಸೀಟಿನಲ್ಲಿದ್ದವು. ಮೃತರಲ್ಲಿ ಒಬ್ಬರಾದ ಎರಡನೇ ಪತ್ನಿ ಸರ್ಗ್ಯಾನ್ ದೇಹದ ಮೇಲೆ ಚೂರಿಯಿಂದ ಇರಿದ ಗಾಯಗಳಿದ್ದವು. ಇದರಿಂದಾಗಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದರು.

ಪೊಲೀಸ್ ವಿಚಾರಣೆಯಲ್ಲಿ ಬಾಲಕ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಂದೆ ರಾಮ್ ಸಿಂಗ್ ಎರಡನೇ ಮದುವೆಯಾಗಿದ್ದರಿಂದ ಆಸ್ತಿ ಕೈತಪ್ಪುವ ಭಯ ಮತ್ತು ಮೊದಲ ತಾಯಿಗೆ ನೀಡುತ್ತಿದ್ದ ಕಿರುಕುಳದಿಂದಾಗಿ ಬಾಲಕ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಕಳೆದ 5 ತಿಂಗಳುಗಳಿಂದ ಆತ ಅಪರಾಧ ಆಧಾರಿತ ವೆಬ್ ಸರಣಿಗಳು (Crime Web Series) ಮತ್ತು ಆನ್‌ಲೈನ್ ಗೇಮ್‌ಗಳನ್ನು ನೋಡಿ, ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಹಾಗೂ ಸಾಕ್ಷ್ಯಗಳನ್ನು ಹೇಗೆ ನಾಶಪಡಿಸಬೇಕು ಎಂದು ಸ್ಕೆಚ್ ಹಾಕಿದ್ದ.

ಘಟನೆಯ ರಾತ್ರಿ ತಂದೆ ರಾಮ್ ಸಿಂಗ್ ಮತ್ತು ಎರಡನೇ ಪತ್ನಿ ಬಿಯರ್ ಕುಡಿದು ಮಲಗಿದ್ದರು. ಮುಂಜಾನೆ 4 ಗಂಟೆಗೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ ಬಾಲಕ, ತಂದೆಯ ಕೋಣೆಗೆ ನುಗ್ಗಿ ಅವರ ಕಿವಿಯ ಬಳಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಆದರೆ ಈ ಗಲಾಟೆಯಿಂದ ಎರಡನೇ ಪತ್ನಿ ಸರ್ಗ್ಯಾನ್ ಎಚ್ಚರಗೊಂಡು ಕಿರುಚಾಡಿದ್ದಾಳೆ. ಆಗ ಬಾಲಕನಿಗೆ ಸಹಾಯ ಮಾಡಲು ಆತನ ತಾಯಿ (ಮೊದಲ ಪತ್ನಿ ಸುನೀತಾ) ಮತ್ತು ಸಹೋದರಿ ಕೂಡ ಕೋಣೆಗೆ ಬಂದಿದ್ದಾರೆ. ನಂತರ ಎಲ್ಲರೂ ಸೇರಿ ಎರಡನೇ ಪತ್ನಿ ಸರ್ಗ್ಯಾನ್, ತಾಯಿ ಪುಸಿ ದೇವಿ ಮತ್ತು ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದ ಸೊಸೆ ಮಹಿಮಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಕ್ಕೆ ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿದ್ದರು.

ವೆಬ್ ಸೀರೀಸ್ ನೋಡಿ ಪರ್ಫೆಕ್ಟ್ ಮರ್ಡರ್ ಮಾಡಲು ಹೊರಟಿದ್ದ ಅಪ್ರಾಪ್ತ ಬಾಲಕ ಹಾಗೂ ಆತನ ತಾಯಿಯ ನಾಟಕವನ್ನು ಅಜ್ಮೀರ್ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

2026ರ ಫಿಫಾ ವಿಶ್ವಕಪ್​ಗೆ 26 ಸದಸ್ಯರ ಅರ್ಜೆಂಟೀನಾ ತಂಡ ಪ್ರಕಟ ಲಿಯೋನೆಲ್​ ಮೆಸ್ಸಿಗೆ ನಾಯಕ ಪಟ್ಟ

Next Post

ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ

Related Posts

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ
ಕ್ರೈಮ್ ನ್ಯೂಸ್

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
88
ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ
ಕ್ರೈಮ್ ನ್ಯೂಸ್

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
71
Next Post
ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ

ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ

Discussion about this post

Recent News

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
42
ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
88
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ; ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ; ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

July 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d