• About us
  • Contact us
  • Disclaimer
Saturday, April 11, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆತ್ಮಹತ್ಯೆಯ ಬಳಿಕ ಪ್ರಿಯಕರನೂ ಸಾವಿಗೆ ಶರಣು; ಕಾರಣ ನಿಗೂಢ

Coastal Times by Coastal Times
February 17, 2026
in ಕ್ರೈಮ್ ನ್ಯೂಸ್
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆತ್ಮಹತ್ಯೆಯ ಬಳಿಕ ಪ್ರಿಯಕರನೂ ಸಾವಿಗೆ ಶರಣು; ಕಾರಣ ನಿಗೂಢ
72
VIEWS
WhatsappTelegramShare on FacebookShare on Twitter

ಕಾಸರಗೋಡು, ಫೆ. 15: ಕರ್ನಾಟಕ- ಕೇರಳ ಗಡಿಭಾಗವಾದ ಕಾಸರಗೋಡಿನ ಆದೂರು ಮೂಲದ ನಿವಾಸಿ, ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆಲಿಯಾಸ್‌ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ನಂತರ ಇದೀಗ ಅವರ ಪ್ರಿಯಕರನೂ ಸಾವಿಗೆ ಶರಣಾಗಿದ್ದಾರೆ  ರೇಷ್ಮಾ ಅವರ ಆಪ್ತ ಸ್ನೇಹಿತ ಸಂದೇಶ್‌ ಕೆ. (29) ಮೃತದೇಹ ಕಾಸರಗೋಡಿನ ಮನ್ನಿಪಾಡಿಯಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,  ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೂಲತಃ ಮುಳ್ಳೇರಿಯ ಸಮೀಪದ ಆದೂರಿನ ಆಲಂತ್ತಡ್ಕ ಮೂಲದ ರೇಷ್ಮಾ ಕಾಸರಗೋಡಿನಲ್ಲಿ ಬಾಡಿಗೆ ಮನೆಯಲ್ಲಿ ಸಂದೇಶ್‌ ಜತೆ ಕೆಲವು ಸಮಯದಿಂದ ವಾಸವಾಗಿದ್ದರು. ರೇಷ್ಮಾ ಅವರಿಗೆ 24 ವರ್ಷ ವಯಸ್ಸಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಅವರು 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದರು. ಫೆಬ್ರವರಿ 9ರಂದು ರೇಷ್ಮಾ ಕಾಸರಗೋಡಿನ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

ರೇಷ್ಮಾ ಇತ್ತೀಚೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆಯ ಭಾಗವಾಗಿ ಪೊಲೀಸರು ಸಂತೋಷ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸಂದೇಶ್‌ ಕೂಡ ಈಗ ಆತ್ಮಹತ್ಯೆಗೆ ಶರಣಾಗಿದ್ದು, ವಿಚಾರಣೆ ಆರಂಭವಾಗಿದೆ. ʼʼಫೆಬ್ರವರಿ 15ರಂದು ಕಾಸರಗೋಡಿನ ಮನ್ನಿಪಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ಸಂತೋಷ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆʼʼ ಎಂದು ಅದಿಕಾರಿಯೊಬ್ಬರು ತಿಳಿಸಿದ್ದಾರೆ.

ರೇಷ್ಮಾ ಸಾವಿನ ನಂತರ ಸಂದೇಶ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಇಬ್ಬರು ಜೊತೆಗೆ ವಾಸವಿದ್ದರು ಎಂಬ ನೆಲೆಯಲ್ಲಿ ಆಕೆಯ ಸಾವಿಗೇನು ಕಾರಣ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಪ್ರಕಾರ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.‌ ಮತ್ತೊಂದು ಮೂಲದ ಪ್ರಕಾರ ಚಿನ್ನು ಆತ್ಮಹತ್ಯೆಗೆ ಸಂದೇಶ್ ಜೊತೆ ಉಂಟಾದ ಜಗಳ ಕಾರಣ ಎಂಬ ಆರೋಪವೂ ಇದೆ. ಆಕೆಯ ಕುಟುಂಬಸ್ಥರು ಕೂಡ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದರಿಂದ ಸಂದೇಶ್‌ ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಚಿನ್ನು ಪಪ್ಪು ಸಾವಿನ ತನಿಖೆ ಪೂರ್ಣಗೊಳ್ಳುವ ಮೊದಲೇ ಸಂದೇಶ್ ಸಾವಿಗೀಡಾಗಿದ್ಸು ಪ್ರಕರಣ ಮತ್ತಷ್ಟು ಗೊಂದಲ ಮೂಡಿಸಿದೆ.

ರೇಷ್ಮಾ ಅವರಿಗೆ 5 ವರ್ಷದ ಹಿಂದೆಯೇ ಮದುವೆಯಾಗಿತ್ತು. ಅವರಿಗೆ ಓರ್ವ ಮಗನೂ ಇದ್ದಾನೆ. ಪತಿಯಿಂದ ದೂರವಾದ ರೇಷ್ಮಾ ಕಾಸರಗೋಡಿನ ಉಳಿಯತ್ತಡ್ಕ ಬಾಡಿಗೆ ಮನೆಯಲ್ಲಿ ಸಂತೋಷ್‌ ಜತೆಗೆ ವಾಸಿಸುತ್ತಿದ್ದರು. ರೇಷ್ಮಾ ಸಾವಿನ ಬಳಿಕ ಸಂದೇಶ್‌ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ವಿಡಿಯೊ ಶೂಟಿಂಗ್‌, ಪ್ರಮೋಷನ್‌ ಮತ್ತಿತರ ಚಟುವಟಿಕೆಗಳಿಗಾಗಿ ರೇಷ್ಮಾ ಮಗನನ್ನು ತವರು ಮನೆಯಲ್ಲಿ ಇರಿಸಿ ಕಾಸರಗೋಡಿನಲ್ಲಿ ವಾಸವಾಗಿದ್ದರು. ಮಲಯಾಳಂ ಮತ್ತು ತುಳುವಿನಲ್ಲಿ ವಿಡಿಯೊ ಮಾಡುತ್ತಿದ್ದ ರೇಷ್ಮಾ ತಮ್ಮ ಮಾತಿನ ಶೈಲಿಯಿಂದಲೇ ಗಮನ ಸೆಳೆದಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

Next Post

ಉಳ್ಳಾಲ: ಅತಿ ವೇಗದಿಂದ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ತುಂಡಾಗಿ ಬಿದ್ದ ಕಾಂಕ್ರೀಟ್ ಕಂಬ ! ಯುವಕರಿಬ್ಬರು ಪವಾಡ ಸೃದೃಶ ಪಾರು

Related Posts

ಉಳ್ಳಾಲ ಆರಿಫ್ ಕೊಲೆ ಪ್ರಕರಣ: 7 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ಕ್ರೈಮ್ ನ್ಯೂಸ್

ಉಳ್ಳಾಲ ಆರಿಫ್ ಕೊಲೆ ಪ್ರಕರಣ: 7 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

April 9, 2026
127
ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ
ಕ್ರೈಮ್ ನ್ಯೂಸ್

ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

April 8, 2026
40
Next Post
ಉಳ್ಳಾಲ: ಅತಿ ವೇಗದಿಂದ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ತುಂಡಾಗಿ ಬಿದ್ದ ಕಾಂಕ್ರೀಟ್ ಕಂಬ ! ಯುವಕರಿಬ್ಬರು ಪವಾಡ ಸೃದೃಶ ಪಾರು

ಉಳ್ಳಾಲ: ಅತಿ ವೇಗದಿಂದ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ತುಂಡಾಗಿ ಬಿದ್ದ ಕಾಂಕ್ರೀಟ್ ಕಂಬ ! ಯುವಕರಿಬ್ಬರು ಪವಾಡ ಸೃದೃಶ ಪಾರು

Discussion about this post

Recent News

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ

April 10, 2026
8
ಆಳ್ವಾಸ್ ಪಿಯು ಕಾಲೇಜಿನ ‘ದಿಶಾ’ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್​​ 600ಕ್ಕೆ 600! ಅಂಕ

ಆಳ್ವಾಸ್ ಪಿಯು ಕಾಲೇಜಿನ ‘ದಿಶಾ’ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್​​ 600ಕ್ಕೆ 600! ಅಂಕ

April 9, 2026
44
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ

April 10, 2026
ಆಳ್ವಾಸ್ ಪಿಯು ಕಾಲೇಜಿನ ‘ದಿಶಾ’ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್​​ 600ಕ್ಕೆ 600! ಅಂಕ

ಆಳ್ವಾಸ್ ಪಿಯು ಕಾಲೇಜಿನ ‘ದಿಶಾ’ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್​​ 600ಕ್ಕೆ 600! ಅಂಕ

April 9, 2026
ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

April 9, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d