ಬೆಂಗಳೂರು, ಆ.16: ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ.ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎನ್. ವಿಷ್ಣುವರ್ಧನ ಅವರನ್ನು ರಾಜ್ಯ ಗುಪ್ತಚರ ಇಲಾಖೆ ಬೆಂಗಳೂರು ಎಸ್‌ಪಿಯನ್ನಾಗಿ ನಿಯೋಜಿಸಲಾಗಿದೆ. ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್ ಮಚ್ಚೀಂದ್ರ ಅವರನ್ನು ನೇಮಕ ಮಾಡಲಾಗಿದೆ. 2015ರ ಬ್ಯಾಚಿನಲ್ಲಿ ಐಪಿಎಸ್ ಪೂರೈಸಿದ್ದ ಮಚೀಂದ್ರ ಅವರನ್ನು ಕಳೆದ 2020ರ ಜನವರಿ ಒಂದರಂದು ಉಡುಪಿ ಎಸ್ಪಿ ಹುದ್ದೆಗೆ ನೇಮಿಸಿ ಆದೇಶ ಮಾಡಲಾಗಿತ್ತು. ಆದರೆ ಎರಡೇ ದಿನದಲ್ಲಿ ಆದೇಶವನ್ನು ಬದಲಾಯಿಸಿದ ರಾಜ್ಯ ಸರಕಾರ, ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದ ವಿಷ್ಣುವರ್ಧನ್ ಅವರನ್ನು ನೇಮಕ ಮಾಡಿತ್ತು. ಇದೀಗ ಮತ್ತೆ ಮಚ್ಚೀಂದ್ರ ಅವರಿಗೆ ಉಡುಪಿ ಎಸ್ಪಿ ಹುದ್ದೆ ನೀಡಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post