ನವದೆಹಲಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಕೇಂದ್ರ ಸರ್ಕಾರ ‘ವೈ’ ಕೆಟಗರಿ ಭದ್ರತೆ ನೀಡಿದೆ ಎಂದು ವರದಿಯಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಳೆದ ವಾರ ತೆರೆಕಂಡಿದ್ದು, ದೇಶದಾದ್ಯಂತ ಸಾಕಷ್ಟು ಸುದ್ದಿ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಕಾಶ್ಮೀರ್ ಫೈಲ್ಸ್ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ನಿರ್ದೇಶಕರಿಗೆ ಜೀವ ಬೆದರಿಕೆ ವ್ಯಕ್ತವಾಗಿತ್ತು. ಹೀಗಾಗಿ ಅವರಿಗೆ ಕೇಂದ್ರ ಸರಕಾರವು ಕಮಾಂಡೋ ಪಡೆಯ ಭದ್ರತೆ ನೀಡಿದೆ. ಇದರಲ್ಲಿ ಎಂಟು ಮಂದಿ ಸಿಆರ್ ಪಿಎಫ್ ಯೋಧರು ಇರುತ್ತಾರೆ. ಇಬ್ಬರು ಕಮಾಂಡೋ ತರಬೇತಿ ಪಡೆದವರು ಇರುತ್ತಾರೆ. ದೇಶಾದ್ಯಂತ ವಿವೇಕ್ ಅಗ್ನಿಹೋತ್ರಿ ಎಲ್ಲಿ ಓಡಾಡಿದರೂ, ಇವರು ಜೊತೆಗೇ ತೆರಳಲಿದ್ದಾರೆ.
ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ 1990ರಲ್ಲಿ ಕಾಶ್ಮೀರದ ಕಣಿವೆಯಲ್ಲಿ ಅಲ್ಲಿನ ಪಂಡಿತರ ಕುಟುಂಬಗಳ ಮೇಲಿನ ದೌರ್ಜನ್ಯ, ಚಿತ್ರಹಿಂಸೆಯ ನೈಜ ಕತೆಯನ್ನು ಕಟ್ಟಿಕೊಡಲಾಗಿದೆ. ಹೀಗಾಗಿ ಈ ಚಿತ್ರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ತೆರಿಗೆ ಕಡಿತ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಚಿತ್ರ ತಂಡಕ್ಕೆ ಪ್ರಶಂಸೆ ವ್ಯಕ್ತವಾಗಿದ್ದು, ಪ್ರತಿಯೊಬ್ಬರೂ ಈ ಚಿತ್ರ ನೋಡಬೇಕು ಎಂದು ಕರೆ ನೀಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರಿಗೆ ‘ವೈ’ ಕೆಟಗರಿ ಭದ್ರತೆ ನೀಡಿರುವ ಬಗ್ಗೆ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
Film director Vivek Agnihotri has been given 'Y' category security with CRPF cover pan India: Government Sources
(File photo) pic.twitter.com/63l1B0BlMz
— ANI (@ANI) March 18, 2022
Discover more from Coastal Times Kannada
Subscribe to get the latest posts sent to your email.
Discussion about this post