ಮಂಗಳೂರು, ಮಾ.18 : ಟೈಮ್ಸ್ ಬ್ಯುಸಿನೆಸ್ ಅವಾರ್ಡ್ ಸಮಾರಂಭವು ಮಾರ್ಚ್ 14, 2023ರಂದು ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಎಸ್‌ಪಿಎ ಮೈಸೂರಿನಲ್ಲಿ ನಡೆಯಲಾಯಿತು. ಆ ಪ್ರಯುಕ್ತ 2023 ವರ್ಷದ ಉದಯೋನ್ಮುಖ ಯೋಜನೆ ಪ್ರಶಸ್ತಿಯನ್ನು ಮಂಗಳೂರಿನ ‘ರೋಹನ್ ಸಿಟಿ’ ಯೋಜನೆಯ ನಿರ್ಮಾಪಕರಾದ ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಧ್ಯಕ್ಷ ಶ್ರೀ ರೋಹನ್ ಮೊಂತೇರೊರವರಿಗೆ ನೀಡಲಾಯಿತು. ಅವರ ಪರವಾಗಿ ಶ್ರೀ ದೀಮಂತ್ ಸುವರ್ಣ (ಜನರಲ್ ಮ್ಯಾನೇಜರ್, ಸೇಲ್ಸ್ ಮಾರ್ಕೆಟಿಂಗ್) ಮತ್ತು ಶ್ರೀ ಅಲ್ಲೋನ್ಸ್ ಫೆನಾರ್ಂಡಿಸ್ (ಸೇಲ್ಸ್ ಅಸೋಸಿಯೇಟ್) ಪ್ರಶಸ್ತಿಯನ್ನು ಸ್ವೀಕರಿಸಿದರು.

ಮಾರ್ಚ್ 14, 2023ರಂದು ಟೈಮ್ಸ್ ಬ್ಯುಸಿನೆಸ್ ಆವಾರ್ಡ್ಸ್, ಮೈಸೂರು 2023 ಪ್ರಶಸ್ತಿ ನೀಡಲ್ಪಟ್ಟ 37 ಸಂಸ್ಥೆಗಳಲ್ಲಿ ವಿದ್ಯಾವರ್ಧಕ ಶಿಕ್ಷಣ ಟ್ರಸ್ಟ್, ಲಲಿತಾ ಜ್ಯುವೆಲ್ಲರಿ, SCDCC ಬ್ಯಾಂಕ್, ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿವೆ.
ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಸ್ಪಾನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಾಶಿ ಖನ್ನಾ ಅವರು ಬಿಸಿನೆಸ್ ಐಕಾನ್‌ಗಳಿಗೆ ಪ್ರಶಸ್ತಿಗಳನ್ನು ನೀಡಿದರು. ಶ್ರೀ ಕೆ.ಎಸ್. ರಂಗಪ್ಪ, ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳು ಗೌರವ ಅತಿಥಿಗಳಾಗಿದ್ದರು. ಸಮಾರಂಭದ ನಂತರ ತ್ರಿಶೂಲಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮೈಸೂರು ಮತ್ತು ಸಮೀರ್ ರಾವ್ ಮತ್ತು ಆದರ್ಶ್ ಶೆಣೈ ಅವರಿಂದ ಬಾನ್ಸುರಿ ತಬಲಾ ಕಾರ್ಯಕ್ರಮ ನಡೆಯಿತು.
Discover more from Coastal Times Kannada
Subscribe to get the latest posts sent to your email.







Discussion about this post