• About us
  • Contact us
  • Disclaimer
Thursday, July 30, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪುತ್ತೂರಿನಲ್ಲಿ ನಳಿನ್‌ ಪೋಸ್ಟರ್‌ಗೆ ಚಪ್ಪಲಿ ಹಾರ, ಹಿಂದೂ ಕಾರ್ಯಕರ್ತರಿಗೆ ಪೊಲೀಸ್‌ ಥಳಿತ

Coastal Times by Coastal Times
May 18, 2023
in ಕರಾವಳಿ, ಕ್ರೈಮ್ ನ್ಯೂಸ್
ಪುತ್ತೂರಿನಲ್ಲಿ ನಳಿನ್‌ ಪೋಸ್ಟರ್‌ಗೆ ಚಪ್ಪಲಿ ಹಾರ, ಹಿಂದೂ ಕಾರ್ಯಕರ್ತರಿಗೆ ಪೊಲೀಸ್‌ ಥಳಿತ
159
VIEWS
WhatsappTelegramShare on FacebookShare on Twitter
ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬ್ಯಾನರ್‌ ಹಾಕಿ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಕರೆದೊಯ್ದು ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಚುನಾಔಣೆಯ ಸಂದರ್ಭದಲ್ಲಿ ಹೈಟೆನ್ಷನ್‌ ಕ್ಷೇತ್ರವಾಗಿದ್ದ ಪುತ್ತೂರಿನಲ್ಲಿ, ಬಿಜೆಪಿಯಿಂದ ಸಿಡಿದೆದ್ದಿದ್ದ ಅರುಣ್‌ ಕುಮಾರ್‌ ಪುತ್ತಿಲ ಅವರು ಸ್ವತಂತ್ರವಾಗಿ ಸ್ಪರ್ಧಿಸಿ, ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಹಿಂದೂ ಕಾರ್ಯಕರ್ತರು ಅವರಿಗೆ ಬೆಂಬಲವಾಗಿ ನಿಂತಿದ್ದರು. ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಡಿ.ವಿ ಸದಾನಂದ ಗೌಡ ಅವರನ್ನು ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಪೋಸ್ಟರ್‌ ಅನ್ನು ಹಿಂದೂ ಕಾರ್ಯಕರ್ತರು ಹಾಕಿದ್ದರು. ʼʼಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿʼʼ ಎಂದು ಪೋಸ್ಟರ್‌ನಲ್ಲಿತ್ತು.

ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಗಳನ್ನು ಠಾಣೆಯಲ್ಲಿ ಕೂಡಿ ಹಾಕಿ ತೀವ್ರವಾಗಿ ಥಳಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕರ ಹಾಗೂ ಕೆಲವು ಪ್ರಭಾವಿಗಳ ಒತ್ತಡಕ್ಕೊಳಗಾಗಿ ಪೊಲೀಸರು ಆರೋಪಿಗಳಿಗೆ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹಾಗೂ ನಗರಸಭೆ ನೀಡಿದ ದೂರಿನ್ವಯ ನರಿಮೊಗರು ಗ್ರಾಮದ ನಿವಾಸಿಗಳಾಗಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು. ಪೊಲೀಸರ ಕಿರುಕುಳ ತಿಳಿದು ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಕರೆದೊಯ್ದಿದ್ದಾರೆ. ಎನ್ನಲಾಗಿದೆ. ಥಳಿತದಿಂದ ಗಾಯಗೊಂಡ ಯುವಕರ ಚಿತ್ರಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್ ಪಿ ಕಚೇರಿಯಿಂದ ನಡೆದಾಡಲೂ ಕಷ್ಟ ಪಡುವ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಂಧಿತರು ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು , ಈ ಪೈಕಿ ಕೆಲವರು ಬಂಧಿತರು ಹಿಂದೂ ಸಂಘಟನೆಯ ಕಾರ್ಯಕರ್ತ ಎನ್ನಲಾಗಿದೆ. ಫೋಟೊದಲ್ಲಿ ಕಾಲು, ಬೆನ್ನು ಸೊಂಟದ ಹಿಂಭಾಗದಲ್ಲಿ ಥಳಿಸಿರುವುದು ಕಾಣುತ್ತಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ? ಶನಿವಾರ ಪ್ರಮಾಣ ವಚನ

Next Post

ಪೊಲೀಸ್ ದೌರ್ಜನ್ಯ ; ಎಫ್ಐಆರ್ ಬೆನ್ನಲ್ಲೇ ಪಿಎಸ್ಐ ಶ್ರೀನಾಥ ರೆಡ್ಡಿ, ಪಿ.ಸಿ ಹರ್ಷಿತ್ ಅಮಾನತು, ಡಿವೈಎಸ್ಪಿ ವಿರುದ್ಧ ಕ್ರಮಕ್ಕೆ ಶಿಫಾರಸು

Related Posts

ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ; DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!
ಕರಾವಳಿ

ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ; DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!

July 30, 2026
40
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ, ಅವೈಜ್ಞಾನಿಕ ಕಾಮಗಾರಿ, ಅಡಿಕೆ ತೋಟಕ್ಕೆ ನುಗ್ಗಿದ ಮಳೆನೀರು
ಕರಾವಳಿ

ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ, ಅವೈಜ್ಞಾನಿಕ ಕಾಮಗಾರಿ, ಅಡಿಕೆ ತೋಟಕ್ಕೆ ನುಗ್ಗಿದ ಮಳೆನೀರು

July 30, 2026
18
Next Post
ಪೊಲೀಸ್ ದೌರ್ಜನ್ಯ ; ಎಫ್ಐಆರ್ ಬೆನ್ನಲ್ಲೇ ಪಿಎಸ್ಐ ಶ್ರೀನಾಥ ರೆಡ್ಡಿ, ಪಿ.ಸಿ ಹರ್ಷಿತ್ ಅಮಾನತು, ಡಿವೈಎಸ್ಪಿ ವಿರುದ್ಧ ಕ್ರಮಕ್ಕೆ ಶಿಫಾರಸು

ಪೊಲೀಸ್ ದೌರ್ಜನ್ಯ ; ಎಫ್ಐಆರ್ ಬೆನ್ನಲ್ಲೇ ಪಿಎಸ್ಐ ಶ್ರೀನಾಥ ರೆಡ್ಡಿ, ಪಿ.ಸಿ ಹರ್ಷಿತ್ ಅಮಾನತು, ಡಿವೈಎಸ್ಪಿ ವಿರುದ್ಧ ಕ್ರಮಕ್ಕೆ ಶಿಫಾರಸು

Discussion about this post

Recent News

ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ; DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!

ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ; DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!

July 30, 2026
40
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ, ಅವೈಜ್ಞಾನಿಕ ಕಾಮಗಾರಿ, ಅಡಿಕೆ ತೋಟಕ್ಕೆ ನುಗ್ಗಿದ ಮಳೆನೀರು

ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ, ಅವೈಜ್ಞಾನಿಕ ಕಾಮಗಾರಿ, ಅಡಿಕೆ ತೋಟಕ್ಕೆ ನುಗ್ಗಿದ ಮಳೆನೀರು

July 30, 2026
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ; DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!

ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಅಸ್ಥಿಪಂಜರ ಸಿಕ್ಕಿರುವ ಪ್ರಕರಣ; DNA ಪರೀಕ್ಷೆಯಲ್ಲಿ ಬಯಲಾಯ್ತು 3 ಅಸ್ಥಿಪಂಜರಗಳ ರಹಸ್ಯ!

July 30, 2026
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ, ಅವೈಜ್ಞಾನಿಕ ಕಾಮಗಾರಿ, ಅಡಿಕೆ ತೋಟಕ್ಕೆ ನುಗ್ಗಿದ ಮಳೆನೀರು

ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ, ಅವೈಜ್ಞಾನಿಕ ಕಾಮಗಾರಿ, ಅಡಿಕೆ ತೋಟಕ್ಕೆ ನುಗ್ಗಿದ ಮಳೆನೀರು

July 30, 2026
ಮಂಗಳೂರು ಪೊಲೀಸರಿಂದ 82 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳ ನಾಶ!

ಮಂಗಳೂರು ಪೊಲೀಸರಿಂದ 82 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳ ನಾಶ!

July 29, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d