ಮುಂಬಯಿ: ನಗರದ ಲೋಕಲ್ ರೈಲಿನ ಮಹಿಳೆಯರಿಗೆ ಮಾತ್ರವೇ ಮೀಸಲಿದ್ದ ಬೋಗಿಗೆ ಪುರುಷನೊಬ್ಬ ಸಂಪೂರ್ಣ ಬೆತ್ತಲಾಗಿ ನುಗ್ಗಿದ ಘಟನೆ ಡಿ.16 ರಂದು ಸಂಜೆ 4 ಗಂಟೆಯ ವೇಳೆಗೆ ನಡೆದಿದೆ. ಎಸಿ ಲೋಕಲ್ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಕಲ್ಯಾಣ್‌ಗೆ ಪ್ರಯಾಣಿಸುತ್ತಿತ್ತು. ಮಾನಸಿಕ ಅಸ್ವಸ್ಥನಂತಿದ್ದ ವ್ಯಕ್ತಿ, ತಪ್ಪಾಗಿ ರೈಲು ಹತ್ತಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯ ರೀತಿಯಲ್ಲಿ ವರ್ತಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಆದ್ರೆ ಕೆಲವೊಂದಿಷ್ಟು ಜನ ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಅಸಂಬದ್ಧವಾಗಿ ವರ್ತಿಸುವುದು ಮಾತ್ರವಲ್ಲದೆ ಇತರರಿಗೂ ಮುಜುಗರವನ್ನು ಉಂಟು ಮಾಡುತ್ತಿರುತ್ತಾರೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ರೈಲಿನಲ್ಲಿ ಮಹಿಳೆಯರಿದ್ದ ಬೋಗಿಗೆ ನುಗ್ಗಿ ದುರ್ವರ್ತನೆ ತೋರಿದ್ದಾನೆ. ಈ ನಗ್ನ ವ್ಯಕ್ತಿಯನ್ನು ಕಂಡು ಮಹಿಳೆಯರು ಭಯದಿಂದ ಕಿರುಚಾಡಿದ್ದು, ಕೊನೆಗೆ ಟಿಟಿಇ ಬಂದು ಆ ವ್ಯಕ್ತಿಯನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಮುಂಬೈನಲ್ಲಿ ನಡೆದಿದ್ದು, ನಗ್ನ ವ್ಯಕ್ತಿಯೊಬ್ಬ ರೈಲಿನಲ್ಲಿ ಮಹಿಳೆಯರಿದ್ದ ಭೋಗಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾನೆ. ಸೋಮವಾರ (ಡಿ. 16) ಸಂಜೆ ಈ ಘಟನೆ ನಡೆದಿದ್ದು, ಕಲ್ಯಾಣ್‌ನಿಂದ ಛತ್ರವತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ಪ್ರಯಾಣಿಸುತ್ತಿದ್ದ ಲೋಕಲ್ ಟ್ರೈನ್ ಘಾಟ್‌ಕೋಪರ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಂಪೂರ್ಣ ಬೆತ್ತಲಾಗಿದ್ದ ವ್ಯಕ್ತಿಯೊಬ್ಬ ರೈಲಿನ ಮಹಿಳಾ ಕೋಚ್‌ಗೆ ನುಗ್ಗಿದ್ದಾನೆ. ಈತನನ್ನು ಕಂಡು ಮಹಿಳಾ ಪ್ರಯಾಣಿಕರು ಭಯದಿಂದ ಕಿರಿಚಾಡಿದ್ದು, ನಂತರ ಟಿಟಿಇ ಸ್ಥಳಕ್ಕಾಗಮಿಸಿ ಆತನನ್ನು ಬಾಗಿಲಿನಿಂದ ಹೊರ ದಬ್ಬಿದ್ದಾರೆ.
Naked man enters women’s compartment in CSMT-Kalyan AC local train!
byu/Maginaghat997 inIndiaSpeaks
Discover more from Coastal Times Kannada
Subscribe to get the latest posts sent to your email.
Discussion about this post